
Tesla Optimus Robot: ಅಮೆರಿಕದ ಬಿಲಿಯನೇರ್ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಆಪ್ಟಿಮಸ್ ರೋಬೋಟ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದೆ. ಇತ್ತೀಚಿನ ಡೆಮೊ ವೀಡಿಯೊದಲ್ಲಿ ಆಪ್ಟಿಮಸ್ ರೋಬೋಟ್ ಕುಂಗ್ ಫೂ ತರಬೇತಿಯಲ್ಲಿ ತೊಡಗಿರುವ ದೃಶ್ಯಗಳು ಜಗತ್ತಿನಾದ್ಯಂತ ಗಮನ ಸೆಳೆದಿವೆ.
ಈ ವೀಡಿಯೊದಲ್ಲಿ ರೋಬೋಟ್ ಅತ್ಯಂತ ನಿಖರತೆ ಮತ್ತು ಸಮತೋಲನದೊಂದಿಗೆ ಕುಂಗ್ ಫೂ ಕಲಿಯುತ್ತಿರುವುದು ಕಂಡುಬಂದಿದೆ. ಹಿಂದಿನ ಪ್ರದರ್ಶನಗಳಿಗೆ ಹೋಲಿಸಿದರೆ, ಆಪ್ಟಿಮಸ್‌ನ ಕಾರ್ಯಕ್ಷಮತೆಯಲ್ಲಿ ಗಣನೀಯ ಸುಧಾರಣೆಯಾಗಿದೆ ಎಂದು ಈ ವೀಡಿಯೊ ಸ್ಪಷ್ಟಪಡಿಸುತ್ತದೆ.
AI-ಚಾಲಿತ ಆಪ್ಟಿಮಸ್: ಮನುಷ್ಯರು ನಿಯಂತ್ರಿಸುವ ಅಗತ್ಯವಿಲ್ಲ:
ಎಲಾನ್ ಮಸ್ಕ್ ಸ್ವತಃ ಈ ವೀಡಿಯೊವನ್ನು ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಕಾಮೆಂಟ್‌ನಲ್ಲಿ, ಆಪ್ಟಿಮಸ್ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಚಾಲಿತವಾಗಿದ್ದು, ಟೆಲಿಆಪರೇಷನ್ (ದೂರದಿಂದ ನಿಯಂತ್ರಣ) ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರರ್ಥ, ರೋಬೋಟ್ ಮಾನವನ ಸಹಾಯವಿಲ್ಲದೆ ಸ್ವತಂತ್ರವಾಗಿ ಚಲಿಸಬಹುದು ಮತ್ತು ಕ್ರಿಯೆಗಳಿಗೆ ಪ್ರತಿಕ್ರಿಯಿಸಬಹುದು. ಕುಂಗ್ ಫೂ ತರಬೇತಿಯಂತಹ ಚಟುವಟಿಕೆಗಳು ಆಪ್ಟಿಮಸ್‌ಗೆ ತನ್ನ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತವೆ, ಇದು ನೈಜ ಜಗತ್ತಿನಲ್ಲಿ ಕಾರ್ಯನಿರ್ವಹಿಸಲು ಅತ್ಯಗತ್ಯ.
ಮಸ್ಕ್‌ರಿಂದ ದೊಡ್ಡ ಭರವಸೆ
ಟೆಸ್ಲಾ ಕಂಪನಿಯು ತನ್ನ ರೊಬೊಟಿಕ್ಸ್ ವಿಭಾಗದ ಬಗ್ಗೆ ದೊಡ್ಡ ಕನಸುಗಳನ್ನು ಕಾಣುತ್ತಿದೆ. ಆಪ್ಟಿಮಸ್ ರೋಬೋಟ್ ಟೆಸ್ಲಾದ ಆಟೋಮೋಟಿವ್ ವ್ಯವಹಾರವನ್ನು ಮೀರಿಸಿ ಕಂಪನಿಯ ಅತ್ಯಂತ ಮೌಲ್ಯಯುತ ಉತ್ಪನ್ನವಾಗಲಿದೆ ಎಂದು ಎಲಾನ್ ಮಸ್ಕ್ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಗುರಿಯೊಂದಿಗೆ, ಟೆಸ್ಲಾ 2030ರ ವೇಳೆಗೆ 1 ಮಿಲಿಯನ್ ಆಪ್ಟಿಮಸ್ ರೋಬೋಟ್‌ಗಳನ್ನು ಉತ್ಪಾದಿಸುವ ಯೋಜನೆಯನ್ನು ಹೊಂದಿದೆ. ಭವಿಷ್ಯದಲ್ಲಿ, ಉತ್ಪಾದನೆ, ಲಾಜಿಸ್ಟಿಕ್ಸ್‌ನಿಂದ ಹಿಡಿದು ಮನೆಕೆಲಸಗಳವರೆಗೆ ಈ ರೋಬೋಟ್‌ಗಳನ್ನು ಬಳಸುವ ಉದ್ದೇಶವನ್ನು ಕಂಪನಿಯು ಹೊಂದಿದೆ.
ತೀವ್ರ ಸ್ಪರ್ಧೆಯ ನಡುವೆ ಟೆಸ್ಲಾದ ಗೆಲುವಿನ ಭರವಸೆ
ರೊಬೊಟಿಕ್ಸ್ ಕ್ಷೇತ್ರದಲ್ಲಿ ಟೆಸ್ಲಾ ಬೋಸ್ಟನ್ ಡೈನಾಮಿಕ್ಸ್‌ನಂತಹ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಆದರೆ, ಟೆಸ್ಲಾದ ಶಕ್ತಿಯುತ AI ಇಂಟಿಗ್ರೇಶನ್ ಮತ್ತು ಮಾಸ್ ಪ್ರಾಡಕ್ಟಿವ್ ಕ್ಯಾಪಸಟಿ{ Mass production capacity}ಗಳು ಅದಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿವೆ. ಇದರ ಪರಿಣಾಮವಾಗಿ, ಆಪ್ಟಿಮಸ್ ರೋಬೋಟ್‌ಗಳು ಶೀಘ್ರದಲ್ಲೇ ಸಂಶೋಧನಾ ಪ್ರಯೋಗಾಲಯಗಳಿಂದ ಹೊರಬಂದು ವಾಣಿಜ್ಯ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ.
ಈ ಕುಂಗ್ ಫೂ ವೀಡಿಯೊ ಆಪ್ಟಿಮಸ್‌ನ ಸಾಮರ್ಥ್ಯವನ್ನು ಮಾತ್ರವಲ್ಲ, ಟೆಸ್ಲಾದ ರೊಬೊಟಿಕ್ಸ್ ಭವಿಷ್ಯದ ದಿಟ್ಟ ಕನಸುಗಳನ್ನು ಜಗತ್ತಿಗೆ ತೋರಿಸಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.