ನ್ಯೂರಾಲಿಂಕ್‌ನಿಂದ ಔರಾ ರಿಂಗ್‌ವರೆಗೂ.. ಬದುಕು ಬದಲಿಸಬಲ್ಲ 5 ಹೊಸ ತಂತ್ರಜ್ಞಾನಗಳು

Published : Oct 07, 2025, 10:57 AM IST
New technologies

ಸಾರಾಂಶ

ಈ ಚಿಪ್‌ ಅನ್ನು ಮಿದುಳಿಗೆ ಜೋಡಿಸಿದ್ರೆ, ವ್ಯಕ್ತಿ ತನ್ನ ಯೋಚನೆಗಳಿಂದಲೇ ಕಂಪ್ಯೂಟರ್ ಅಥವಾ ಕೆಲವು ಸಾಧನಗಳನ್ನು ನಿಯಂತ್ರಿಸಬಹುದು. ಪ್ಯಾರಾಲಿಸಿಸ್ ಅಥವಾ ನರದ ಸಮಸ್ಯೆಗಳಿಂದ ಬಳಲುವವರಿಗೆ ಈ ತಂತ್ರಜ್ಞಾನ ವರದಾನವಾಗಿದೆ.

2025ನೇ ಇಸವಿ ಹಲವು ಹೊಸ ಟೆಕ್ನಾಲಜಿಗಳ ಆವಿಷ್ಕಾರಕ್ಕೆ ನಾಂದಿ ಹಾಡಿದೆ. ಈಗಾಗಲೇ ತಯಾರಾಗಿರುವ, ಈಗ ಸಿದ್ಧಗೊಳ್ಳುತ್ತಿರುವ ಕೆಲವು ಬದುಕು ಬದಲಿಸುವ ಸಾಧ್ಯತೆಯುಳ್ಳ ಆ 5 ಹೊಸ ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.

1. ನ್ಯೂರಾಲಿಂಕ್ ಎನ್‌1 ಇಂಪ್ಲಾಂಟ್
ಇದು ಬ್ರೇನ್ ಕಂಪ್ಯೂಟರ್ ಇಂಟರ್‌ ಫೇಸ್‌ (ಬಿಸಿಐ). ಈ ಚಿಪ್‌ ಅನ್ನು ಮಿದುಳಿಗೆ ಜೋಡಿಸಿದ್ರೆ, ವ್ಯಕ್ತಿ ತನ್ನ ಯೋಚನೆಗಳಿಂದಲೇ ಕಂಪ್ಯೂಟರ್ ಅಥವಾ ಕೆಲವು ಸಾಧನಗಳನ್ನು ನಿಯಂತ್ರಿಸಬಹುದು. ಪ್ಯಾರಾಲಿಸಿಸ್ ಅಥವಾ ನರದ ಸಮಸ್ಯೆಗಳಿಂದ ಬಳಲುವವರಿಗೆ ಈ ತಂತ್ರಜ್ಞಾನ ವರದಾನವಾಗಿದೆ. ಇದರ ಮೂಲಕ ಅವರು ತಮ್ಮ ಮನಸ್ಸಿನಲ್ಲಿರುವುದನ್ನು ಹೊರ ಜಗತ್ತಿಗೆ ಸಂವಹನ ಮಾಡಬಹುದು. ವ್ಹೀಲ್‌ ಚೇರ್‌ನಲ್ಲಿ ನಿಗದಿತ ಜಾಗಕ್ಕೆ ಹೋಗಬಹುದು. ಯೋಚನೆ ಮಾತ್ರದಿಂದಲೇ ಇಮೇಲ್ ಟೈಪ್ ಮಾಡಬಹುದು. ವ್ಯಕ್ತಿಯ ಯೋಚನೆ ಹಾಗೂ ಎಐ ನಡುವೆ ನೇರ ಸಂಪರ್ಕ ಏರ್ಪಡಿಸುವ ಈ ತಂತ್ರಜ್ಞಾನದ ಬಗ್ಗೆ ಭರವಸೆಯ ಮಾತುಗಳು ಕೇಳಿಬರುತ್ತಿದೆ.

2. ಫ್ಲಿಂಟ್ ಸೆಲ್ಯುಲೋಸ್ ಪೇಪರ್ ಬ್ಯಾಟರಿಗಳು
ಸಿಂಗಪೂರ್‌ನ ಫ್ಲಿಂಟ್ ಕಂಪನಿಯಿಂದ ಅಭಿವೃದ್ಧಿಪಡಿಸಲಾದ ಈ ಬ್ಯಾಟರಿಗಳು ಕಾಗದದ ಮಾದರಿಯವು. ಮಣ್ಣಲ್ಲಿ ಬೇಗ ಕರಗುವ ಗುಣ ಹೊಂದಿವೆ. ಇವು ಸಾಂಪ್ರದಾಯಿಕ ಬ್ಯಾಟರಿಗಳಿಗಿಂತ ಹೆಚ್ಚು ಸುರಕ್ಷಿತ. ಕತ್ತರಿಸಿದರೂ, ಚುಚ್ಚಿದರೂ ಅಥವಾ ಬಾಗಿಸಿದರೂ ಬೆಂಕಿ ಕಾಣಿಸುವುದಿಲ್ಲ ಅಥವಾ ಸ್ಫೋಟಗೊಳ್ಳುವುದಿಲ್ಲ. ಆದರೆ ಕಡಿಮೆ ವೋಲ್ಟೇಜ್‌ನ ಸುಮಾರು 1.5 ವೋಲ್ಟ್‌ನಷ್ಟೇ ವಿದ್ಯುತ್‌ ಅಗತ್ಯವಿರುವ ಸಾಧನಗಳಿಗೆ ಮಾತ್ರ ಇವನ್ನು ಬಳಸಬಹುದು. ಚಾರ್ಜ್ ಮಾಡಬಹುದಾದ ಈ ಬ್ಯಾಟರಿಗಳನ್ನು ಹೆಲ್ತ್ ಮಾನಿಟರಿಂಗ್ ಗ್ಯಾಜೆಟ್‌ಗಳಲ್ಲಿ, ಸ್ವೈಪಿಂಗ್‌ ಕಾರ್ಡ್‌ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ.

3. ಲೋ ರಿಯಲ್ ಸೆಲ್ ಬಯೋಪ್ರಿಂಟ್ ಸ್ಕಿನ್ ಅನಲೈಸರ್
ಇದು ಚರ್ಮ ಪರೀಕ್ಷೆ ಮಾಡುವ ಸಾಧನ. ಚರ್ಮದಲ್ಲಿನ ಪ್ರೋಟೀನ್‌ಗಳನ್ನು ಪರೀಕ್ಷಿಸಿ ಅಲರ್ಜಿ ಅಥವಾ ವಯಸ್ಸಾದ ಮೇಲೆ ಬರುವ ಚರ್ಮದ ಸಮಸ್ಯೆಗಳನ್ನು ಮೊದಲೇ ಗುರುತಿಸುತ್ತದೆ. ಮೊಬೈಲ್ ಆ್ಯಪ್ ಮೂಲಕ ಸ್ಕಿನ್ ಕೇರ್ ಸಲಹೆಗಳನ್ನು ಕೊಡುತ್ತದೆ. ಈ ಸಾಧನದಿಂದ ಡಾಕ್ಟರ್‌ ಬಳಿ ಹೋಗದೆ ಉತ್ತಮ ಚರ್ಮದ ಆರೈಕೆ ಪಡೆಯಬಹುದು.

4. ಔರಾ ರಿಂಗ್ ಜೆನ್ 4
ಇದೊಂದು ಉಂಗುರ ಮಾದರಿಯಲ್ಲಿರುವ ತಂತ್ರಜ್ಞಾನ. ನಿದ್ರೆ, ಒತ್ತಡ ಮತ್ತು ಮೆದುಳಿನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರುತ್ತದೆ. ಈ ಬಗ್ಗೆ ಅಪ್‌ಡೇಟ್‌ ನೀಡುವ ಮೂಲಕ ಮಾನಸಿಕ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಎಲ್ಲಿಯವರೆಗೆ ಅಂದರೆ ಕೆಲಸದ ಸಮಯದಲ್ಲಿ ನಮ್ಮ ಫೋಕಸ್ ಹೇಗಿದೆ, ಎಲ್ಲಿ ಫೋಕಸ್ ಮಿಸ್‌ ಆಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿ ವೃತ್ತಿಪರ ಬದುಕಿನ ಸುಧಾರಣೆಗೆ ಕಾರಣವಾಗುತ್ತದೆ.

5. ಎನ್ವಿಡಿಯಾ ಕಾಸ್ಮೋಸ್‌ ಎಐ ಪ್ಲಾಟ್‌ಫಾರ್ಮ್

ಹೊಸ ಮಾದರಿಯ ಎಐ ತಂತ್ರಜ್ಞಾನ. ಸೂಪರ್‌ ಕಂಪ್ಯೂಟರ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ಎರಡಕ್ಕೂ ಬಳಸಬಹುದು. ಸ್ಮಾರ್ಟ್‌ ಹೋಮ್‌ ಡಿವೈಸ್‌ಗಳಲ್ಲಿ, ಔಷಧೀಯ ಕ್ಷೇತ್ರಗಳಲ್ಲಿ ಹೆಚ್ಚು ಬಳಕೆಯಾಗುತ್ತದೆ. ಭವಿಷ್ಯದಲ್ಲಿ ಸಂಭವಿಸುವ ವಿಪತ್ತುಗಳ ಬಗೆಗಿನ ಸೂಚನೆಯನ್ನೂ ಇಲ್ಲಿ ಪಡೆಯಬಹುದಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ
ಫೋನ್‌ಗಳಲ್ಲಿ ಸಂಚಾರ್‌ ಸಾಥಿ ಆ್ಯಪ್‌ ಕಡ್ಡಾಯ ಆದೇಶ ರದ್ದು