ಟೆಕ್ನಾಲಜಿ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ಎಲೆಕ್ಟ್ರಾನಿಕ್ ವಸ್ತುಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದೀಗ ಆಸುಸ್ ಕಂಪೆನಿ ಹೊಸ ಲ್ಯಾಪ್ಟಾಪ್ ಬಿಡುಗಡೆ ಮಾಡಿದೆ. 19.4MM ಗುಣಮಟ್ಟ ಹೊಂದಿರೋ ಈ ಲ್ಯಾಪ್ಟಾಪ್ ವಿಶೇಷತೆ ಏನು? ಇಲ್ಲಿದೆ.
ಮುಂಬೈ(ಸೆ.27): ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅಸುಸ್ ಕಂಪೆನಿ ಇದೀಗ ಹೊಸ ಲ್ಯಾಪ್ಟಾಪ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೋಡಲು ಸುಂದರವಾಗಿರುವ, ಅದ್ಭುತವಾಗಿ ಕೆಲಸ ಮಾಡುವ ಈ ಮೊಬೈಲ್ ವಿಂಡೋಸ್ 10 ತಂತ್ರಾಂಶ ಒಳಗೊಂಡಿದೆ.
ಹೊಸ ಪೀಳಿಗೆಯ ಇಂಟೆಲ್ ಕೋರ್ ಐ೫ ಪ್ರೊಸೆಸರ್ಅನ್ನು ಇದು ಒಳಗೊಂಡಿದೆ. ೪ ಜಿಬಿ ರ್ಯಾಮ್, 16 ಜಿಬಿ ಇಂಟೆಲ್ ಅಪ್ಟೇನ್ ಸೇರಿ ಒಟ್ಟು 20 ಜಿಬಿಗಳಷ್ಟು ಸಿಸ್ಟಂ ಮೆಮೊರಿ ಇರುತ್ತೆ. ಇದರಿಂದ ನಾಜೂಕಾಗಿ ಹಾಗೂ ವೇಗವಾಗಿ ಸಿಸ್ಟಮ್ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ.
1 ಟಿಬಿಯಷ್ಟು ಸ್ಟೋರೇಜ್ ಸೌಲಭ್ಯ ಹೊಂದಿರುವುದು ಇದರ ಹೆಚ್ಚುಗಾರಿಕೆ. ನಿತ್ಯ ಬಳಕೆಗೆ ಹಾಗೂ ಮನರಂಜನೆಗೆ ಪೂರಕವಾದ ಗ್ರಾಫಿಕ್ ಕಾರ್ಡ್ ಇದರಲ್ಲಿರುತ್ತದೆ. ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯವೂ ಇದರಲ್ಲಿದೆ.
7.8 ಎಂಎಂನ ನ್ಯಾನೋ ಎಡ್ಜ್ ಫುಲ್ ಎಚ್ಡಿ ಡಿಸ್ಪ್ಲೇ ಹೊಂದಿದೆ. ತೆಳುವಾದ, ಹಗುರವಾದ ಈ ಲ್ಯಾಪ್ಟಾಪ್ನ ತೂಕ ಕೇವಲ 1.7 ಕೆಜಿಗಳು. ಜೊತೆಗೆ 19.4ಎಂಎಂ ಗುಣಮಟ್ಟ ಹೊಂದಿದೆ. ಇದರ ಬೆಲೆ: 45,990 ರೂಪಾಯಿ.