ಹಾಲಿವುಡ್ ನಟಿ ಮರ್ಲಿನ್ ಮುನ್ರೋ ಕಾರು ಹರಾಜು- ಅಂದಾಜು 3 ಕೋಟಿ

By Web DeskFirst Published Sep 27, 2018, 3:27 PM IST
Highlights

ಹಾಲಿವುಡ್ ನಟಿ ಮರ್ಲಿನ್ ಮುನ್ರೋ ಕಾರು ಹರಾಜಿಗಿಡಲಾಗಿದೆ. 1955ರಲ್ಲಿ ನಟಿ ಮುನ್ರೋ ಬಳಸಿದ್ದ ಐತಿಹಾಸಿಕ ಕಾರು ಇದೀಗ ಕೋಟಿ ಕೋಟಿಗೆ ಹರಾಜಾಗೋ ಸಾಧ್ಯತೆ ಇದೆ. ಇಲ್ಲಿದೆ ಮುನ್ರೋ ಕಾರಿನ ವಿಶೇಷತೆ.

ಲಾಸ್ ಎಂಜಲ್ಸ್(ಸೆ.27): ಹಾಲಿವುಡ್ ದಿವಗಂತ ನಟಿ ಮರ್ಲಿನ್ ಮುನ್ರೋ ಐತಿಹಾಸಿಕ ಕಾರು ಹರಾಜಿಗಿಡಲಾಗಿದೆ. 1955ರಿಂದ 1962ರ ವರೆಗೆ ಮರ್ಲಿನ್ ಮುನ್ರೋ ಬಳಸಿದ್ದ ಫೋರ್ಡ್ ಥಂಡರ್‌ಬರ್ಡ್ ಕಾರು ನವೆಂಬರ್‌ನಲ್ಲಿ ಹರಾಜಾಗಲಿದೆ.

ಹಾಲಿವುಡ್‌ನಲ್ಲಿ ಪಾಪ್ಯುಲರ್ ನಟಿಯಾಗಿದ್ದ ಮರ್ಲಿನ್ ಮುನ್ರೋಗೆ, ಬ್ಯುಸಿನೆಸ್ ಪಾರ್ಟ್ನರ್ ಮಿಲ್ಟನ್ ಗ್ರೀನೆ ಈ ಕಾರನ್ನ ಮುನ್ರೋಗೆ ಉಡುಗೊರೆಯಾಗಿ ನೀಡಿದ್ದರು. ಮುನ್ರೋ ತಮ್ಮ ಮದುವೆಗೆ ಇದೇ ಕಾರಿನ್ನ  ಬಳಸಿದ್ದರು.

ಮರ್ಲಿನ್ ಮುನ್ರೋ ಕಾರನ್ನ ನವೆಂಬರ್‌ನಲ್ಲಿ ನಡೆಯಲಿರುವ ಜುಲಿಯನ್ ಆಕ್ಷನ್ ಫೆಸ್ಟ್‌ನಲ್ಲಿ ಹರಾಜಿನಲ್ಲಿಡಲಾಗಿದೆ. ಮರ್ಲಿನ್ ಮುನ್ರೋ 1962ರಲ್ಲಿ ಸಾವನ್ನಪ್ಪಿದರು. ಬಳಿಕ ಈ ಕಾರು ಕುಟುಂಬ ಸದಸ್ಯರ ಕಾಪಾಡಿಕೊಂಡಿದ್ದರು. ಇದೀಗ ಐತಿಹಾಸಿಕ ಕಾರಾಗಿ ಮಾರ್ಪಟ್ಟಿರುವ ಮುನ್ರೋ ಕಾರು ದಾಖಲೆ ಬೆಲೆಗೆ ಹರಾಜಾಗೋ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಮರ್ಲಿನ್ ಮುನ್ರೋ ಕಾರು 3 ಕೋಟಿ ರೂಪಾಯಿಗೆ ಹರಾಜಾಗೋ ಸಾಧ್ಯತೆ ಇದೆ.  ಎರಡು ಸೀಟರ್ ಈ ಕಾರು ಹಲವು ವಿಶೇಷತೆಯಿಂದ ಕೂಡಿದೆ. ಕ್ಲಾಸಿಕ್ ಬ್ಲಾಕ್ ಫೋರ್ಡ್ ಥಂಡರ್‌ಬರ್ಡ್ ಕಾರು 312 ಕ್ಯೂಬಿಕ್-ಇಂಚ್ ವಿ-8 ಇಂಜಿನ್ ಹೊಂದಿಗೆ. 225 ಹಾರ್ಸ್‌ಪವರ್, ಫೋರ್ಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್, ಪವರ್ ಸ್ಟೀರಿಂಗ್, ಪವರ್ ಬ್ರೇಕ್, ಪವರ್ ವಿಂಡೋ ಹೊಂದಿದೆ.

click me!