ಈಗ ವೈರ್‌ಲೆಸ್ ಇಯರ್ ಬಡ್‌ಗಳದ್ದೇ ಕಾರುಬಾರು. ನೋಡಲು ಒಂದು ಸಾಮಾನ್ಯ ಇಯರ್ ಫೋನ್ ಆದ್ರೂ, ಅದರಲ್ಲಿರುವ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಟ್ಯಾಗ್ ಕಂಪನಿ ವೈರ್‌ಲೆಸ್ ಇಯರ್‌ಬಡ್ ಬಿಡುಗಡೆ ಮಾಡಿದೆ. ಇಲ್ಲಿದೆ ವಿವರ...
ಹಿಂದೆಲ್ಲ ಫೋನ್‌ಗೆ ಕನೆಕ್ಟ್ ಮಾಡಿಕೊಂಡೇ ಇಯರ್‌ಫೋನ್‌ನಲ್ಲಿ ಹಾಡು ಕೇಳಬೇಕಿತ್ತು. ಆದರೆ ಈಗ ಅದರ ವಿನ್ಯಾಸದಲ್ಲೂ ಬದಲಾಗಿದೆ.
ಈಗೇನಿದ್ದರೂ ಬ್ಲೂಟೂತ್ ಇಯರ್‌ಫೋನ್‌ಗಳದ್ದೇ ಹವಾ. ಈ ಜನಪ್ರಿಯ ಟ್ರೆಂಡ್‌ನಲ್ಲಿ ಟ್ಯಾಗ್ ಕಂಪನಿ ವೈರ್‌ಲೆಸ್ ಇಯರ್‌ಫೋನ್ ‘ಝೀರೊಜಿ’ಯನ್ನು ಬಿಡುಗಡೆ ಮಾಡಿದೆ.
ಒನ್‌ಪ್ಲಸ್ ಮೊಬೈಲ್ ಖರೀದಿಸುವುದು ಇನ್ಮುಂದೆ ಸುಲಭ; ಇಲ್ಲಿಗೆ ಹೋದರೆ ಇನ್ನೂ ಲಾಭ!...
ಹೈಡೆಫಿನಿಷನ್ ಶಬ್ದಗಳನ್ನು ಅತ್ಯಂತ ನಿಖರವಾಗಿ ಕೇಳುವಂಥಾ ವ್ಯವಸ್ಥೆ ಇದರಲ್ಲಿದೆ. ಕ್ವಾಲ್‌ಕಮ್‌ನ 2020 ಚಿಪ್‌ಸೆಟ್ ಅಳವಡಿಸಿರೋದು ಇನ್ನೊಂದು ಪ್ಲಸ್ ಪಾಯಿಂಟ್.
40ಎಂಎಪಿಎಚ್ ಬ್ಯಾಟರಿ ಸಾಮರ್ಥ್ಯದ ಜೊತೆಗೆ 5.0 ಬ್ಲೂಟೂತ್ ವರ್ಷನ್ ಇದರಲ್ಲಿದೆ. ಇದರ ಬೆಲೆ 4,999 ರು. ಮಾತ್ರ