
ಮಾಸ್ಕೋ(ಅ.05): ಸಲಿಂಗಿಯಾಗಲು ಕಾರಣಗಳು ಹಲವಾರು. ಆದರೆ ಮೊಬೈಲ್ ಫೋನ್‌ವೊಂದು ವ್ಯಕ್ತಿಯನ್ನು ಸಲಿಂಗಕಾಮಕ್ಕೆ ಎಳೆಯುತ್ತದೆ ಎಂದರೆ ನಂಬುವುದು ತುಸು ಕಷ್ಟವೇ ಸರಿ.
ತಾನು ಸಲಿಂಗಿಯಾಗಲು ಆ್ಯಪಲ್ ಫೋನ್ ಕಾರಣ ಎಂದು ರಷ್ಯಾದ ವೈದ್ಯನೋರ್ವ ಕೋರ್ಟ್ ಮೆಟ್ಟಿಲೇರಿದ ವಿಚಿತ್ರ ಘಟನೆ ನಡೆದಿದೆ.
ಹೌದು ರಷ್ಯಾದ ವೈದ್ಯ ರಜುಮಿಲೋವ್ ಎಂಬಾತ ಐಫೋನ್‌ನಿಂದಾಗಿ ತಾನು ಸಲಿಂಗಿಯಾಗಿದ್ದು, ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿರುವುದಾಗಿ ತಿಳಿಸಿದ್ದಾನೆ.
ತನ್ನ ಐಫೋನ್‌ನಲ್ಲಿ 69 ಗೇ ಕಾಯಿನ್ಸ್ ಕ್ರಿಪ್ಟೋಕರೆನ್ಸಿ ಪಡೆದ ರಜುಮಿಲೋವ್, ಗೇ ಕಾಯಿನ್ಸ್ ಕಳುಹಿಸಿದಾತನ ಸಂಪರ್ಕಕ್ಕೆ ಬಂದಿದ್ದಾನೆ. ನಂತರ ಆತನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾನೆ.
ಈ ವಿಷಯ ರಜುಮಿಲೋವ್ ಪೋಷಕರಿಗೆ ಗೊತ್ತಾಗಿ ರಂಪಾಟ ನಡೆದಿದೆ. ಈ ಎಲ್ಲ ಬೆಳವಣಿಗೆಗಳಿಗೆ ಐಫೋನ್ ಕಾರಣ ಎನ್ನುವ ರಜುಮಿಲೋವ್, ಇದೀಗ ಐಫೋನ್ ವಿರುದ್ಧ ದಾವೆ ಹೂಡಿದ್ದಾನೆ.
ನನ್ನ ಜೀವನ ಹಾಳು ಮಾಡಿದ ಆ್ಯಪಲ್ ಐಫೋನ್ ತನಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿರುವ ರಜುಮಿಲೋವ್, ಬರೋಬ್ಬರಿ 1 ಮಿಲಿಯನ್ ರುಬೆಲ್(11 ಲಕ್ಷ ರೂ.) ಪರಿಹಾರಕ್ಕಾಗಿ ಮೊರೆ ಇಟ್ಟಿದ್ದಾನೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.