ಸೈಬರ್ ವಂಚನೆ ಬಗ್ಗೆ ಆನ್‌ಲೈನಲ್ಲೇ ದೂರು: ಕಂಪ್ಲೇಂಟ್ ಸ್ವೀಕಾರ ಹೇಗೆ?

By Web Desk  |  First Published Apr 30, 2019, 10:39 AM IST

ಹೊಸ ವ್ಯವಸ್ಥೆ ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ, ಅಶ್ಲೀಲ ಚಿತ್ರಗಳು ಇತ್ಯಾದಿ ಬಗ್ಗೆ ವೆಬ್‌ಸೈಟಲ್ಲಿ ದೂರು | ಅಮೆರಿಕ ರೀತಿ ವ್ಯವಸ್ಥೆ ಶೀಘ್ರದಲ್ಲೇ ಆರಂಭ


ಗಿರೀಶ್ ಮಾದೇನಹಳ್ಳಿ, ಕನ್ನಡಪ್ರಭ

ಬೆಂಗಳೂರು[ಏ.30]: ಸೈಬರ್ ಪಾತಕಿಗಳಿಗೆ ಕಡಿವಾಣ ಹಾಕಲು ಕಸ ರತ್ತು ನಡೆಸುತ್ತಿರುವ ಕೇಂದ್ರ ಸರ್ಕಾರವು ಈಗ ‘ಅಮೆರಿಕ ಮಾದರಿ’ಯಲ್ಲಿ ರಾಜ್ಯ ಪೊಲೀಸ ರನ್ನು ಒಗ್ಗೂಡಿಸಿಕೊಂಡು ಸೈಬರ್ ವಂಚಕರನ್ನು ಬಗ್ಗು ಬಡಿಯುವ ಯೋಜನೆ ರೂಪಿಸಿದೆ.

Tap to resize

Latest Videos

ಇದರ ಅಂಗವಾಗಿ ಕೆಲವೇ ದಿನಗಳಲ್ಲಿ ದೇಶದ ಯಾವುದೇ ಮೂಲೆಯಲ್ಲಾದರೂ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂ ಧಿಸಿದ ದೂರುಗಳನ್ನು ಆನ್‌ಲೈನ್‌ನಲ್ಲೇ ಸಾರ್ವಜನಿ ಕರು ನೀಡಬಹುದಾದ ವ್ಯವಸ್ಥೆ ಜಾರಿಗೆ ಬರ ಲಿದೆ. ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಹ ಸಮಿತಿ ರಚನೆಗೆ ಕೇಂದ್ರ ಸರ್ಕಾರ ಸೂಚಿಸಿದೆ

ಈ ಆನ್‌ಲೈನ್ ದೂರು ಸ್ವೀಕಾರ ವ್ಯವಸ್ಥೆಗೆ ‘ಸೈಕಾರ್ಡ್’ ಹೆಸರಿನ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದ್ದು, ಐಸಿಸಿಸಿ (ಇಂಡಿಯನ್ ಸೈಬರ್ ಕ್ರೈಂ ಕೋ ಆರ್ಡಿನೇಟ್ ಸೆಂಟರ್) ಎಂದು ಅದಕ್ಕೆ ಹೆಸರು ನೀಡಲಾಗಿದೆ.

ಇಲ್ಲಿ 14 ಮಾದರಿಯ ಅಪರಾಧ ಕೃತ್ಯಗಳ ಪಟ್ಟಿ ನೀಡಲಾಗಿದ್ದು, ಜನರು ಲಾಗಿನ್ ಆಗಿ ದೂರು ದಾಖಲಿಸಬಹುದು. ಬಳಿಕ ಆ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಸ್ಥಳೀಯ ಸೈಬರ್ ಕ್ರೈಂ ಪೊಲೀಸರಿಗೆ ರವಾನಿಸಲಾಗುತ್ತದೆ. ಸೈಬರ್ ಸಿಬ್ಬಂದಿಯೇ ದೂರುದಾರರನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿಕೊಳ್ಳುತ್ತಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಸದ್ಯ ರಾಜ್ಯ ಮಟ್ಟದಲ್ಲಿ ಪ್ರಾಯೋಗಿಕವಾಗಿ ಇದು ಚಾಲನೆಗೆ ಬಂದಿದೆ. ಸೈಕಾರ್ಡ್ ಪೋರ್ಟ ಲ್‌ನಲ್ಲಿ ಸಲ್ಲಿಕೆಯಾಗುವ ಕೆಲವು ದೂರುಗಳಿಗೆ ಸ್ಪಂದಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕಿಳಿ ಸುವ ಕೆಲಸಗಳು ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಜನರಿಗೆ ಸೇವೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವ್ಯಾವ ಅಪರಾಧ ಕೃತ್ಯಗಳು

ಎಟಿಎಂ, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಂಚನೆ, ಬಹುಮಾನದ ಹೆಸರಿನಲ್ಲಿ ದೋಖಾ, ಸಾಮಾಜಿಕ ಜಾಲ ತಾಣಗಳಲ್ಲಿ ಅಶ್ಲೀಲ ವಿಡಿಯೋ-ಫೋಟೋ ಅಪ್‌ಲೋಡ್, ಅವಹೇಳನಕಾರಿ ಬರಹ, ಹ್ಯಾಕಿಂಗ್ ಹೀಗೆ ಸೈಬರ್ ಕ್ರೈಂಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸ ಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹೇಗೆ ದೂರು ಸ್ವೀಕಾರ?

ಅಪರಾಧ ಕೃತ್ಯಗಳ ಸಂಬಂಧ ಆನ್ ಲೈನ್‌ನಲ್ಲಿ ದೂರು ಸ್ವೀಕಾರಕ್ಕೆ ಅಮೆರಿಕ ಮಾದರಿ ಅನುಸರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳ ಸಹಕಾರದಲ್ಲಿ ಎಲ್ಲಾ ತನಿಖಾ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶವಿದೆ. ದೇಶದಲ್ಲಿ ಯಾವುದೇ ಮೂಲೆಯಲ್ಲಾದರೂ ಸೈಬರ್ ವಂಚಕರ ಬಲೆಗೆ ಬಿದ್ದು ನೊಂದವರು ತಕ್ಷಣವೇ ದೂರು ದಾಖಲಿಸಬಹುದು.

ಈ ಮೊದಲು ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತು ದೂರು ಸ್ವೀಕಾರಕ್ಕೆ cybercrime.gov.in ನಲ್ಲಿ ಅವಕಾಶ ನೀಡಲಾಗಿತ್ತು. ಈಗ ಅದೇ ರೀತಿ ಸೈಬರ್ ಅಪರಾಧಗಳಿಗೆ cycord. gov.in ನಲ್ಲಿ ದೂರು ಸ್ವೀಕರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದುಷ್ಕೃತ್ಯಗಳು ಹಾಗೂ ಸೈಬರ್ ಅಪರಾಧಗಳ ಸಂಬಂಧ ಒಂದೇ ಕಡೆ ದೂರು ಸ್ವೀಕಾರಕ್ಕೆ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿವೆ. ಇದಕ್ಕೆ ಸಕಾರಾತ್ಮಕ ಪ್ರತಿ ಕ್ರಿಯೆ ಸಹ ಸಿಕ್ಕಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ವ್ಯವಸ್ಥೆ ನಿರ್ವಹಣೆಗೆ ರಾಜ್ಯ ಮಟ್ಟ ದಲ್ಲಿ ಸಮಿತಿ ರಚಿಸಲಾಗಿದೆ. ಕರ್ನಾಟಕದಲ್ಲಿ ಸಿಐಡಿ ಡಿಜಿಪಿ ಪ್ರವೀಣ್ ಸೂದ್ ನೇತೃತ್ವದಲ್ಲಿ ರಾಜ್ಯ ಪೊಲೀಸ್ ತಾಂತ್ರಿಕ ವಿಭಾಗದ ಎಡಿ ಜಿಪಿ ಮತ್ತು ಸಿಐಡಿ ಸೈಬರ್ ಕ್ರೈಂ ವಿಭಾಗದ ಎಸಿಪಿ ಸದಸ್ಯರಾಗಿದ್ದಾರೆ. ಈ ಸೈಬರ್ ದೂರುಗಳ ವಿಲೇವಾರಿ ಮೇಲೆ ಸಮಿತಿ ನಿಗಾ ವಹಿಸಲಿದೆ ಎಂದು ತಿಳಿಸಿದರು.

click me!