ಕಡಿಮೆ ದರ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜನಸಾಮಾನ್ಯರಿಗೆ ಉತ್ತಮ ಸ್ಮಾರ್ಟ್‌ಫೋನ್ ನೀಡುವ ನಿಟ್ಟಿನಲ್ಲಿ Redmiಗೆ ತೀವ್ರ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಮುನ್ನುಗ್ಗುತ್ತಿರುವ Realme ಸಂಸ್ಥೆ ‘ಸ್ಪೀಡ್ ಅವೇಕನ್ಸ್’ ಎಂಬ ಟ್ಯಾಗ್ ಲೈನ್‌ನೊಂದಿಗೆ Realme 3 Pro ಮತ್ತು ಆರಂಭಿಕ ಹಂತದ ಫೋನ್ ಬಳಕೆದಾರರಿಗೆ ಅತ್ಯಾಕರ್ಷಕವಾಗಿರುವ Realme C2 ಎಂಬ ಎರಡು ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಏಪ್ರಿಲ್ 29ರ ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು Realme ವೆಬ್‌ಸೈಟ್‌ನಲ್ಲಿ Realme 3 Pro ಮಾರಾಟ ಆರಂಭವಾಗಲಿದೆ. ಮೇ 15ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್ ಮತ್ತು Realme ವೆಬ್‌ಸೈಟ್‌ನಲ್ಲಿ ರಿಯಲ್‌ಮಿ C2 ಮಾರಾಟ ಆರಂಭವಾಗಲಿದೆ. Realme ನವದೆಹಲಿಯ ಸುಭಾಶ್ ನಗರದ ಪೆಸಿಫಿಕ್ ಮಾಲ್‌ನಲ್ಲಿ ಏಪ್ರಿಲ್ 27ರಂದು ತನ್ನ ಮೊದಲ ಪಾಪ್‌ಅಪ್ ಮಳಿಗೆ ಆರಂಭಿಸಲಿದ್ದು, ಅಭಿಮಾನಿಗಳು Realme 3 Pro ಮೊದಲ ಮಾರಾಟಕ್ಕೆ ಮುಂಚಿತವಾಗಿಯೇ ಇಲ್ಲಿ ಮೊಬೈಲ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ಮೊಬೈಲ್‌ಗಳ ವಿಶೇಷತೆ
ರಿಯಲ್‌ಮಿ 3 ಪ್ರೊ : 6.3 ಇಂಚು ಫುಲ್ ಎಚ್‌ಡಿ ಡಿಸ್‌ಪ್ಲೆ, 710 ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್, 4045 mAh ಬ್ಯಾಟರಿ, ಸೋನಿಯ 16 MP + 5MP ರೇರ್ ಕೆಮರಾ ಮತ್ತು 25MP ಸೆಲ್ಫಿ ಕೆಮರಾ ಇದರ ಪ್ರಮುಖ ಆಕರ್ಷಣೆ. Realme 3 Pro ಕಾರ್ಬನ್ ಗ್ರೇ, ನಿಟ್ರೋ ಬ್ಲೂ ಮತ್ತು ಲೈಟನಿಂಗ್ ಪರ್ಪಲ್ ಮೂರು ಬಣ್ಣಗಲ್ಲಿ ಲಭ್ಯ. Realme 3 Pro ಸ್ಮಾರ್ಟ್‌ಫೋನ್ ಎರಡು ಭಿನ್ನ ಮಾದರಿಗಳಲ್ಲಿ ಲಭ್ಯವಿದ್ದು, 4GB ರಾರಯಮ್ , 64GB ರೋಮ್ ಹಾಗೂ 6GB ರಾರಯಮ್, 128GB ರೋಮ್ ನಲ್ಲಿ ಲಭ್ಯ.
ಅತ್ಯುತ್ತಮ ಗೇಮಿಂಗ್ ಅನುಭವ ಸಿಗಲಿದೆ. Realme 3 Pro ಸ್ಮಾರ್ಟ್‌ಪೋನ್‌ನಲ್ಲಿ 2.2 GHz ಸ್ಪೀಡ್‌ನಿಂದಾಗಿ ಅತ್ಯುತ್ತಮ ಚಿತ್ರ ಮತ್ತು ನೋಟ ಸಿಗಲಿದೆ. ಇದರಲ್ಲಿನ ಎಕ್ಸ್15 ಮೋಡೆಮ್‌ನಿಂದಾಗಿ ಉತ್ತಮ ಕರೆ ಮತ್ತು ಇಂಟರ್‌ನೆಟ್ ಅನುಭವ ಸಾಧ್ಯವಾಗಲಿದೆ. ಹಾಗೆಯೇ ಸೂಪರ್ ಹೈ ರೆಸಲ್ಯೂಷನ್ ಚಿತ್ರ ಸೆರೆಹಿಡಿಯಲು ಮತ್ತು ವೀಡಿಯೋ ಮಾಡಲು ಮೊಬೈಲ್‌ನಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನ ಸಹಕರಿಸಲಿದೆ. ಮೊಬೈಲ್‌ನಲ್ಲಿ ಬಳಸಲಾಗಿರುವ ಟಚ್ ಬೂಸ್ಟ್ ತಂತ್ರಜ್ಞಾನ ಗೇಮ್ ನಿಯಂತ್ರಿಸಲು ಮತ್ತು ಗೇಮ್‌ನಲ್ಲಿ ಅತಿವೇಗ ಪಡೆಯಲು ಸಹಕಾರಿಯಾಗಿದೆ. ಅದರಲ್ಲೂ ಪಬ್ಜಿಯಂತಹ ಗೇಮ್‌ಗಳು ಆಹ್ಲಾದಕರ ಅನುಭವ ನೀಡಲಿವೆ.
ಇದನ್ನೂ ಓದಿ: ಅತಿ ಹೆಚ್ಚು ಹ್ಯಾಕ್ ಆದ 20 ಪಾಸ್‌ವರ್ಡ್‌ಗಳು: ತಪ್ಪಿಯೂ ಇದನ್ನು ಬಳಸಬೇಡಿ
Realme 3 Pro ಕ್ಯಾಮೆರಾದಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ದೂರದಿಂದಲೂ ಸ್ಪಷ್ಟಮತ್ತು ನಿಖರವಾದ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದರಲ್ಲಿ ಸೋನಿಯ ಮೇಲ್ದರ್ಜೆಗೇರಿಸಿದ ಕ್ಯಾಮೆರಾ ಬಳಸಲಾಗಿರುವುದರಿಂದ ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗಿದೆ. ಅಲ್ಲದೆ Realme 3 Pro ಸಂಪೂರ್ಣ ಎಚ್‌ಡಿ ಫುಲ್ ಸ್ಕ್ರೀನ್ ಹೊಂದಿದ್ದು, ಫೋನ್ ಹಿಂಭಾಗದಲ್ಲಿನ ಎಸ್ ರೀತಿಯ ಕವ್‌ರ್ ಗ್ರಾಹಕರಿಗೆ ಇಷ್ಟವಾಗಲಿದೆ. ಫಿಂಗರ್ ಪ್ರಿಂಟ್ ಸೆನ್ಸಾರ್, ಕೆಮರಾ ಮತ್ತು Realme ಲೋಗೋಗಳನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ಬಳಸಲಾಗಿದೆ. ಇದರಲ್ಲಿ ಗೋರಿಲ್ಲಾ ಗ್ಲಾಸ್ -5 ಬಳಸಿದ್ದು, ಇದು ಸ್ಕ್ರೀನ್‌ಗೆ ಅತ್ಯುತ್ತಮ ಸುರಕ್ಷೆ ನೀಡಲಿದೆ. 4045 ಎಂಎಎಚ್ ಬ್ಯಾಟರಿ ಮತ್ತು ಫ್ಲಾಷ್ ಚಾರ್ಜರ್ ಗ್ರಾಹಕರು ಹೆಚ್ಚು ಸಮಯ ಮೊಬೈಲ್ ಬಳಸಲು ಸಹಕಾರಿಯಾಗಿದೆ. ಫ್ಲಾಷ್ ಚಾರ್ಜರ್‌ನಿಂದಾಗಿ ಕಡಿಮೆ ಬಿಸಿ ಮತ್ತು ಅತಿವೇಗದಿಂದ ಚಾರ್ಜ್ ಆಗಲಿದೆ.
Realme C2 : ಆರಂಭಿಕ ಹಂತದ ಈ ಫೋನ್ 6.1 ಇಂಚು ಎಚ್‌ಡಿ ಫುಲ್ ಸ್ಕ್ರೀನ್ ಡಿಸ್‌ಪ್ಲೆ, ಹಿಂಭಾಗದಲ್ಲಿ ಡೈಮಂಡ್ ಕಟ್ ಡಿಸೈನ್ ಹೊಂದಿದೆ. 4000 ಎಂಎಎಚ್ ಬ್ಯಾಟರಿ, 13MP + 2MP ಆಲ್ ಡ್ಯುಯಲ್ ಕೆಮರಾ ಹೊಂದಿದೆ. 2GB ರಾರಯಮ್ - 16GB ರೋಮ್ ಮತ್ತು 3GB ರಾರಯಮ್, 32GB ರೋಮ್‌ನ ಎರಡು ಮಾದರಿಗಳಲ್ಲಿವೆ. ಡೈಮಂಡ್ ಬ್ಲಾಕ್ ಮತ್ತು ಡೈಮಂಡ್ ಬ್ಲ್ಯೂ ಎರಡು ಬಣ್ಣಗಳಲ್ಲಿ ಫೋನ್ ಲಭ್ಯ.
ಅತಿ ದೊಡ್ಡದಾದ ಡಿಸ್‌ಪ್ಲೇ ಮತ್ತು ಅತ್ಯುತ್ತಮ ಬ್ಯಾಟರಿ ಹೊಂದಿದೆ. 6.1 ಇಂಚಿನ ಡಿಯೋಡ್ರಾಪ್ ಫುಲ್ ಸ್ಕ್ರೀನ್ ಬಳಕೆದಾರರಿಗೆ ಆನಂದ ನೀಡುವಂತಿದೆ. ವೀಡಿಯೋ ನೋಡಲು ಮತ್ತು ಗೇಮ್‌ಗೆ ಸಹಕಾರಿಯಾಗಿದೆ. 4000 mAh ಬ್ಯಾಟರಿ ಹೊಂದಿದ್ದು, ಇದರಲ್ಲಿನ ಆಕ್ಟಾಕೋರ್ ಹೀಲಿಯೋ P22 ಪ್ರೊಸೆಸರ್ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಲಿದೆ. ಡೈಮಂಡ್ ಬ್ಲಾಕ್ ಮತ್ತು ಡೈಮಂಡ್ ಬ್ಲೂ ಬಣ್ಣಗಳಲ್ಲಿ ಫೋನ್‌ಗಳು ಲಭ್ಯ.
ಆಕರ್ಷಕ ಡಿಸೈನ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಾರುಕಟ್ಟೆಯಲ್ಲಿರುವ ಇದೇ ತಂತ್ರಜ್ಞಾನದ ಫೋನ್‌ಗಳಿಗಿಂತ ಕಡಿಮೆ ಬೆಲೆಯಿಂದಾಗಿ ಎರಡೂ ಫೋನ್‌ಗಳು ಗ್ರಾಹಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಈ ಎರಡೂ ಫೋನ್‌ಗಳ ಬಿಡುಗಡೆಯಿಂದಾಗಿ ಗ್ರಾಹಕರು ಎರಡು ಪ್ರತ್ಯೇಕ ಬೆಲೆ ಮಾದರಿಯಲ್ಲಿ ಮೊಬೈಲ್ ಶಕ್ತಿ ಮತ್ತು ಶೈಲಿಯನ್ನು ಅನುಭವಿಸಲಿದ್ದಾರೆ. ಕೇವಲ ಒಂದು ವರ್ಷದಲ್ಲಿ ನಾವು 4 ಸೀರಿಸ್‌ಗಳಲ್ಲಿ 8 ವಿವಿಧ ಬಗೆಯ ಮೊಬೈಲ್‌ಗಳನ್ನು ಗ್ರಾಹಕರಿಗೆ ನೀಡಿದ್ದೇವೆ. ಕೇವಲ ಒಂದೇ ವರ್ಷದಲ್ಲಿ ದೇಶಾದ್ಯಂತ 6.5 ಮಿಲಿಯನ್ ಅಭಿಮಾನಿಗಳನ್ನು ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ. ಅಭಿಮಾನಿಗಳ ಪ್ರೀತಿ ಮತ್ತು ಪ್ರೋತ್ಸಾಹದಿಂದಾಗಿಯೇ ಅತ್ಯಾಕರ್ಷಕ ಮತ್ತು ವಿವಿಧ ಬಗೆಯ ಮೊಬೈಲ್‌ಗಳನ್ನು ನೀಡಲು ಸಾಧ್ಯವಾಗಿದೆ. ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಯಾವುದೇ ಸ್ಪರ್ಧೆ ಎದುರಿಸಲು ನಾವು ಸಿದ್ಧ’.
-ಮಾಧವ ಶೇಟ್
Realme ಸಿಇಓ
Realme 3 Pro ಬೆಲೆ: 13,999 ಮತ್ತು ಮೊಬೈಲ್ ಬೆಲೆ 16,999 ರು. Realme C2 ಬೆಲೆ: 5999 ರು. ಹಾಗೂ 7999 ರು.
- ರುದ್ರಗೌಡ ಮುದಿಗೌಡರ್