ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ, 72 ಗಂಟೆಗಳಲ್ಲಿ 5 ಲಕ್ಷ ರೆಡ್ ಮಿ ಮೊಬೈಲ್'ಗಳು ಸೇಲ್...!

By Internet DeskFirst Published Oct 6, 2016, 8:20 AM IST
Highlights

ನವದೆಹಲಿ(ಅ.06): ಅಕ್ಟೋಬರ್ 01 ರಿಂದ 03ನೇ ತಾರೀಖಿನ ಅವಧಿಯ 72 ಗಂಟೆಗಳಲ್ಲಿ ಕ್ಸಿಯೊಮಿ ಕಂಪನಿಯ 5 ಲಕ್ಷ ಮೊಬೈಲ್ ಪೋನ್ ಮಾರಾಟವಾಗಿದೆಯಂತೆ. ಹಾಗೆಂದು ಕ್ಸಿಯೊಮಿ ಕಂಪನಿಯೇ ತಿಳಿಸಿದ್ದು, ಅನ್ಲೈನ್ ಮಾರುಕಟ್ಟೆಯಲ್ಲಿ ಇಷ್ಟು ಪ್ರಮಾಣದ ಮಾರಾಟವಾಗಿದೆ ಎಂದು ಕಂಪನಿ ತಿಳಿಸಿದೆ.

ದಸರಾ ಮತ್ತು ದೀಪಾವಳಿ ಅಂಗವಾಗಿ ಆನ್ಲೈನ್ ಶಾಪಿಂಗ್ ಸೈಟ್ ಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನಾಪ್ ಡೀಲ್ ಗಳು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಹಿನ್ನಲೆಯಲ್ಲಿ ಕ್ಸಿಯೊಮಿ ಮೊಬೈಲ್ ಮಾರಾಟವು ಹೆಚ್ಚಾಗಿದ್ದು, ಮೂರೇ ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಪೋನ್ ಗಳು ಬಿಕರಿ ಆಗಿದೆ ಎಂದಿದೆ. 

Latest Videos

ಅದರಲ್ಲಿಯೂ ಅಮೆಜಾನ್, ಫ್ಲಿಪ್ ಕಾರ್ಟ್ ನಲ್ಲಿ ಪ್ರತಿ ಕ್ಷಣ ಅಂದರೆ ಸೆಕೆಂಡ್'ಗೆ ಎರಡು ಪೋನ್ ಗಳು ಮಾರಾಟವಾಗಿದೆ ಎಂದು ಕ್ಸಿಯೊಮಿ ಭಾರತದ ವಿಭಾಗದ ಮುಖ್ಯಸ್ಥರಾದ ಮನು ಜೈನ್ ಹೇಳಿದ್ದಾರೆ.

ರೆಡ್ ಮಿ ನೋಟ್ 3 ಪೋನ್ ಅಮೆಜಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗಿದ್ದರೆ, ರೆಡ್ ಮಿ 3ಎಸ್ ಮತ್ತು ರೆಡ್ ಮಿ ಎಸ್ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟವಾಗಿದೆ ಎಂದು ಕಂಪನಿ ತಿಳಿಸಿದೆ. 

click me!