ಹಳೆ ಮೊಬೈಲ್ ಮಾರಾಟ ಮಾಡಿ ಮನೆಯಲ್ಲಿಯೇ ಕುಳಿತು 80 ಸಾವಿರ ಗಳಿಸಿ

By Mahmad Rafik  |  First Published Nov 6, 2024, 7:51 PM IST

ಫ್ಲಿಪ್‌ಕಾರ್ಟ್‌ನಲ್ಲಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿ 80,000 ರೂ.ವರೆಗೆ ಗಳಿಸಬಹುದು. ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಮಾರಾಟ ಮಾಡಿ ಹಣ ಪಡೆಯಿರಿ.


ಬೆಂಗಳೂರು: ಕೆಲವರು ಹಳೆಯ ಫೋನ್‌ಗಳನ್ನು ಮಾರಾಟ ಮಾಡಿ ಹೊಸ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ. ಹಳೆಯ ಸ್ಮಾರ್ಟ್‌ಫೋನ್ ಸ್ಲೋ ಆಗುತ್ತಿದ್ದರೆ, ಅದನ್ನು ಎಕ್ಸ್‌ಚೇಂಜ್ ಮಾಡಿಯೇ ಹೊಸ ಮೊಬೈಲ್ ಖರೀದಿಸಲು ಎಲ್ಲರೂ ಪ್ಲಾನ್ ಮಾಡುತ್ತಾರೆ. ಕೆಲ ಶೋರೂಮ್‌ಗಳು ಸಹ ಹಳೆ ಫೋನ್ ಸ್ವೀಕರಿಸುವ ಆಫರ್ ನೀಡುತ್ತಿರುತ್ತವೆ. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಇಂತಹ ಆಫರ್‌ಗಳು ಅಧಿಕವಾಗಿರುತ್ತವೆ. ಇನ್ಮುಂದೆ ಇಂತಹ ಆಫರ್ ಎಲ್ಲಿದೆ ಅಂತ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಸ್ಮಾರ್ಟ್‌ಫೋನ್ ಮಾರಾಟ ಮಾಡಿ 80,000 ರೂಪಾಯಿವರೆಗೂ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದು. 

ಆನ್‌ಲೈನ್‌ನಲ್ಲಿ ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಟ್ರೆಂಡ್ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಇಂದು ನೀವು ಮನೆಯಲ್ಲಿಯೇ ಕುಳಿತು ಹಳೆಯದನ್ನು ಮಾರಾಟ ಮಾಡಿ, ಹೊಸ ಸ್ಮಾರ್ಟ್‌ಫೋನ್ ಖರೀದಿಸಬಹುದು. ಎಲ್ಲಾ ಕೆಲಸಗಳು ನೀವಿರುವ ಸ್ಥಳದಿಂದಲೇ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿಯೇ ಹಳೆಯ ಫೋನ್ ಮಾರಾಟ ಮಾಡಬಹುದು ಎಂಬ ವಿಷಯ ಬಹುತೇಕರಿಗೆ ಗೊತ್ತಿಲ್ಲ. ನೀವು ಕೇವಲ ಆನ್‌ಲೈನ್‌ನಲ್ಲಿ ರಿಕ್ವೆಸ್ಟ್ ಮಾಡಿ, ನಿಮ್ಮ ಹಳೆಯ ಫೋನ್ ವಿವರಗಳನ್ನು ಎಂಟ್ರಿ ಮಾಡಬೇಕು. ಫ್ಲಿಪ್‌ಕಾರ್ಟ್ ಎಲ್ಲಾ ಮಾಹಿತಿಯನ್ನು ಪರಿಗಣಿಸಿ. ಒಂದು ಬೆಲೆಯಲ್ಲಿ ನಿಗಧಿ ಮಾಡಿ ಖರೀದಿಸುತ್ತದೆ. 

Latest Videos

ಹೇಗೆ ಮಾರಾಟ ಮಾಡೋದು?
ಫ್ಲಿಪ್‌ಕಾರ್ಟ್ ರಿಸೆಟ್ ಫೋರ್ ಇನ್‌ಸ್ಟೆಂಟ್ ಕ್ಯಾಶ್ ಸರ್ವಿಸ್ ಎಂಬ ಹೆಸರಿನಲ್ಲಿ ಡೆಡಿಕೇಟೆರಡ್ ಪೇಜ್ ಇದೆ. Flipkart Reset ಪೇಜ್‌ಗೆ (https://www.flipkart.com/reset-sell-store) ಹೋಗಬೇಕು. ನಂತರ ಇಲ್ಲಿಯ ಕೆಲವು ಸ್ಟೆಪ್ಸ್ ಗಳನ್ನು ನೀವು ಫಾಲೋ ಮಾಡಬೇಕು. 

ಮೊದಲಿಗೆ ನಿಮ್ಮ ಹಳೆಯ ಫೋನ್ ಡಿಟೈಲ್ ಎಂಟ್ರಿ ಮಾಡಬೇಕು. ಉದಾಹರಣೆಗೆ ಫೋನ್ ಹೆಸರು, ಮಾಡಲ್ ಸೇರಿದಂತೆ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ನಮೂದಿಸಬೇಕು. ನಂತರ ಫೋನ್ ಮಾರಾಟ ಮಾಡುವ ರಿಕ್ವೆಸ್ಟ್ ನೀಡಬೇಕು. ರಿಕ್ವೆಸ್ಟ್ ಕಳುಹಿಸಿದ ಬಳಿಕ ಫ್ಲಿಪ್‌ಕಾರ್ಟ್ ಸಿಬ್ಬಂದಿ ನೀವು ನಮೂದಿಸಿರುವ ಸ್ಥಳಕ್ಕೆ ಬರುತ್ತಾರೆ.  ನಂತರ ಅವರು ನಿಮ್ಮ ಸ್ಮಾರ್ಟ್‌ಫೋನ್ ಪರಿಶೀಲಿಸಿ ಅಸೆಸ್ಮೆಂಟ್ ಮಾಡಿ ಅದರ ಗುಣಮಟ್ಟದ ಆಧಾರದ ಮೇಲೆ ಬೆಲೆ ನಿಗಧಿ ಮಾಡುತ್ತಾರೆ. ನಂತರ ಫೋನ್ ತೆಗೆದುಕೊಂಡು ಹೋಗುವದರ ಬಗ್ಗೆ ನಿರ್ಧಾರವಾಗುತ್ತದೆ. 

ಇದನ್ನೂ ಓದಿ: ರೀಚಾರ್ಜ್ ಮಾಡದೇ ಎಷ್ಟು ದಿನಗಳವರೆಗೆ ಸಿಮ್ ಬಳಸಬಹುದು?

ಮೊಬೈಲ್ ಪಿಕಪ್‌ ಆದ ಬಳಿಕ ನಿಮಗೆ ಯಾವ ರೂಪದಲ್ಲಿ ಪೇಮೆಂಟ್ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ತದನಂತರ ನಿಮಗೆ ಹಣದ ವರ್ಗಾವಣೆಯಾಗುತ್ತದೆ. ಈ ರೀತಿಯಾಗಿ ಮನೆಯಲ್ಲಿಯೇ ಕುಳಿತು ಹಳೆಯ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಬಹುದು. 

ಫ್ಲಿಪ್‌ಕಾರ್ಟ್‌ನಲ್ಲಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ತುಂಬಾ ಸರಳವಾಗಿದೆ. ಫೋನ್‌ ಸ್ಥಿತಿಗೆ ಅನುಗುಣವಾಗಿ ಬೆಲೆ ಫಿಕ್ಸ್ ಮಾಡಲಾಗುತ್ತದೆ. ಮನೆ ಬಾಗಿಲಿಗೆ ಬಂದು ಮೊಬೈಲ್ ಪಿಕಪ್ ಮಾಡಿ ತೆಗೆದುಕೊಂಡು ಹೋಗಲಾಗುತ್ತದೆ. ಹಳೆಯ ಫೋನ್‌ಗಳನ್ನು ಮಾರಾಟ ಮಾಡುವ ಸೇವೆ ಸುರಕ್ಷಿತವಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ. ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಫೋನ್‌ನ್ನು ಗರಿಷ್ಠ 80,000 ರೂಪಾಯಿವರೆಗೂ ಖರೀದಿಸುತ್ತದೆ. 

ಇದನ್ನೂ ಓದಿ: ಜಿಯೋ ಲೈವ್ ಟಿವಿ ಮಕಾಡೆ ಮಲಗಿಸಲು BSNL ಬಳಿ ಮಹಾ ಅಸ್ತ್ರ; ನೆಟ್ ಸ್ಲೋ ಆದ್ರೂ ಸಿಗುತ್ತೆ ಲೈವ್ ಸ್ಟ್ರೀಮಿಂಗ್

click me!