ಏನೆಲ್ಲಾ ಮಾಡ್ಬೇಕೋ ಮಾಡ್ಬಿಡಿ: ನಮ್ ಗ್ಯಾಲಕ್ಸಿ ಹೊತ್ತಿ ಉರಿಯಲಿದೆ!

By Web Desk  |  First Published Jan 10, 2019, 1:23 PM IST

ಶೀಘ್ರದಲ್ಲೇ ಸರ್ವನಾಶವಾಗಲಿದೆ ಹಾಲು ಹಾದಿ ಗ್ಯಾಲಕ್ಸಿ| ಖಗೋಳ ವಿಜ್ಞಾನಿಗಳ ಗಂಭೀರ ಎಚ್ಚರಿಕೆ| 8 ಬಿಲಿಯನ್ ವರ್ಷಗಳ ನಂತರ ಕ್ಷಿರ ಪಥ ಗ್ಯಾಲಕ್ಸಿ ಇರಲ್ಲ| ಪರಸ್ಪರ ಡಿಕ್ಕಿ ಹೊಡೆಯಲಿವೆ ಹಾಲು ಹಾದಿ ಗ್ಯಾಲಕ್ಸಿ ಮತ್ತು ಆಂಡ್ರೋಮಿಡಾ ಗ್ಯಾಲ್ಸಕಿ|


ವಾಷಿಂಗ್ಟನ್(ಜ.10): ಬ್ರಹ್ಮಾಂಡವೇ ಹಾಗೆ. ಹಳತನ್ನು ಸ್ಫೋಟಿಸಿ, ಅದರಲ್ಲೇ ಹೊಸತನ್ನು ಸೃಷ್ಟಿಸುವ ಗುಣ ಅದರದ್ದು. ಈ ಸಿದ್ಧಾಂತಕ್ಕೆ ಯಾರೂ ಮತ್ತು ಯಾವುದೂ ಹೊರತಲ್ಲ. ನಮ್ಮ ಹಾಲು ಹಾದಿ(ಕ್ಷಿರ ಪಥ) ಗ್ಯಾಲಕ್ಸಿ ಕೂಡ.

ಹೌದು, ನಮ್ಮ ಸೌರಮಂಡಲದ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಅಥವಾ ಹಾಲು ಹಾದಿ ಗ್ಯಾಲಕ್ಸಿ ಅವನತಿಯತ್ತ ಸಾಗುತ್ತಿದೆ ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Latest Videos

ಇನ್ನು ಕೆಲವೇ ಬಿಲಿಯನ್ ವರ್ಷಗಳಲ್ಲಿ ಹಾಲು ಹಾದಿ ಗ್ಯಾಲಕ್ಸಿ ತನ್ನ ಪಕ್ಕದ ಮತ್ತೊಂದು ಗ್ಯಾಲಕ್ಸಿಯೊಂದಿಗೆ ಡಿಕ್ಕಿ ಹೊಡೆದು ಅದರಲ್ಲಿ ವಿಲೀನವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ನಮ್ಮ ಹಾಲು ಹಾದಿ ಗ್ಯಾಲಕ್ಸಿ ಮತ್ತು ಪಕ್ಕದ ಆಂಡ್ರೋಮಿಡಾ ಗ್ಯಾಲಕ್ಸಿ ಮುಂದಿನ 8 ಬಿಲಿಯನ್ ವರ್ಷದಲ್ಲಿ ಪರಸ್ಪರ ಡಿಕ್ಕಿ ಹೊಡೆಯಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹಾಲು ಹಾದಿ ಗ್ಯಾಲಕ್ಸಿ ಸುತ್ತ ಹಲವು ಸಣ್ಣ ಗಾತ್ರದ ಗ್ಯಾಲ್ಸಕಿಗಳಿದ್ದು, ಇವು ಹಾಲು ಹಾದಿ ಗ್ಯಾಲಕ್ಸಿಯನ್ನು ಸುತ್ತುತ್ತಿವೆ. ಈ ಸಣ್ಣ ಗ್ಯಾಲಕ್ಸಿಗಳು ತಾನು ಸುತ್ತುತ್ತಿರುವ ದೊಡ್ಡ ಗ್ಯಾಲಕ್ಸಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯ.

ಅದರಂತೆ ಆಂಡ್ರೋಮಿಡಾ ಗ್ಯಾಲಕ್ಸಿ ಮುಂದಿನ 8 ಬಿಲಿಯನ್ ವರ್ಷಗಳ ನಂತರ ಹಾಲು ಹಾದಿ ಗ್ಯಾಲಕ್ಸಿಗೆ ಡಿಕ್ಕಿ ಹೊಡೆಯಲಿದೆ ಎಂಬುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ.

click me!