ಸೂಪರ್ ಬ್ಲಡ್ ವೂಲ್ಫ್ ಮೂನ್ ಕಣ್ತುಂಬಿಕೊಳ್ಳಿ...

By Web Desk  |  First Published Jan 9, 2019, 4:32 PM IST

ಅಪರೂಪದ ಸೌರ ವಿದ್ಯಾಮಾನವೊಂದಕ್ಕೆ ಈ ತಿಂಗಳು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. ಇಂಥ ಅದ್ಭುತ ಖಗೋಳ ಗೋಚರವನ್ನು ಕಣ್ತುಂಬಿಗೊಳ್ಳಲು ನಿಮಗಿದೆ ಅವಕಾಶ.


ಚಂದ್ರ ಗ್ರಹಣವೆಂದರೆ ಏನೋ ವಿಶೇಷತೆ. ಅದರಲ್ಲೂ ಸೂಪರ್ ಬ್ಲಡ್ ಮೂನ್ ನೋಡುವುದೇ ಒಂದು ಸೊಬಗು. ಚಂದ್ರ ಭೂಮಿಗೆ ತುಂಬಾ ಸನಿಹದಲ್ಲಿ ಕಾಣಿಸಿಕೊಂಡು ರಕ್ತದಂತೆ ಹೊಳೆದರೆ ಅದನ್ನು ಸೂಪರ್ ಬ್ಲಡ್ ಮೂನ್ ಎನ್ನುತ್ತಾರೆ. ಹಾಗಾದರೆ ಸೂಪರ್ ಬ್ಲಡ್ ವೂಲ್ಫ್ ಮೂನ್ ಎಂದರೇನು?

2019ರ ಮೊದಲ ಚಂದ್ರ ಗ್ರಹಣ ಇದೆ 20 ಮತ್ತು 21ರಂದು ನಡೆಯಲಿದೆ. ಈ ಚಂದ್ರ ಗ್ರಹಣವನ್ನು ಸೂಪರ್ ಬ್ಲಡ್ ವೂಲ್ಫ್ ಮೂನ್ ಎಂದು ಕರೆಯಲಾಗುತ್ತಿದೆ. ಭೂಮಿಯ ನೆರಳಿನ ಮೂಲಕ ಚಂದ್ರ ಹಾದು ಹೋದಾಗ ಚಂದ್ರ ತಾಮ್ರದ ಬಣ್ಣದಲ್ಲಿ ಹೊಳೆಯುತ್ತಾನೆ. ಈ ಬಾರಿ ಹುಣ್ಣಿಮೆ ಅಂದರೆ ಜನವರಿ 21 ರಂದು ರಾತ್ರಿ 8 ಗಂಟೆ 6 ನಿಮಿಷಕ್ಕೆ ಆರಂಭವಾಗಿ 1 ಗಂಟೆ 18 ನಿಮಿಷದವರೆಗೆ ಸೂಪರ್ ಬ್ಲಡ್ ವೂಲ್ಫ್ ಮೂನ್ ಕಾಣಿಸುತ್ತದೆ.

Tap to resize

Latest Videos

undefined

ಹುಣ್ಣಿಮೆ ಚಂದಿರ ಇಂದು ದೊಡ್ಡದಾಗಿ ಕಾಣ್ತಾನೆ

ಈ ಹೆಸರೇಕೆ? ಈ ಚಂದ್ರ ಗ್ರಹಣದಂದು ಚಂದ್ರ ಬರೀ ಗಣ್ಣಿನಲ್ಲಿ ನೋಡಿದರೆ ಅಪಾಯವಿಲ್ಲ. ಈ ಗ್ರಹಣಕ್ಕೆ ಸೂಪರ್ ಬ್ಲಡ್ ವೂಲ್ಫ್ ಮೂನ್ ಎಂದು ಹೆಸರಿಟ್ಟವರು ನೇಟಿವ್ ಅಮೇರಿಕದ ಜನಾಂಗದವರು. ಹುಣ್ಣಿಮೆ ದಿನ ಆಹಾರ ಹುಡುಕಿಕೊಂಡು ಹೊರಡುವ ತೋಳಗಳು ಕೆಂಪಾದ ಚಂದ್ರನನ್ನು ನೋಡಿ ಜೋರಾಗಿ ಕೂಗುತ್ತವೆ. ಇದೇ ಕಾರಣಕ್ಕೆ ಈ ಗ್ರಹಣಕ್ಕೆ ಸೂಪರ್ ಬ್ಲಡ್ ವೂಲ್ಫ್ ಮೂನ್ ಎನ್ನುತ್ತಾರೆ. ಒಟ್ಟಿನಲ್ಲಿ ಈ ಗ್ರಹಣದ ಸುಂದರ ದೃಶ್ಯವನ್ನು ನೋಡಲು ಮರೆಯಬೇಡಿ.

ನಾಳೆ ಬಾನಂಗಳದಲ್ಲಿ ಅಪರೂಪದ ಸೂಪರ್ ಮೂನ್

ಈ ದೃಶ್ಯ ಅಮೇರಿಕದ ಕೆಲವು ಭಾಗಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಶೇಷವೆಂದರೆ ಇನ್ನು ಮುಂದೆ ಈ ಸುಂದರ ದೃಶ್ಯ ಕಾಣಸಿಗುವುದು 2021ನೇ ಇಸವಿಯಲ್ಲಿ. ಅಂದರೆ ಮೂರು ವರ್ಷಗಳ ನಂತರ. ಆದುದರಿಂದ ಯಾರಿಗೆಲ್ಲ ಈ ಚಂದ್ರನನ್ನು ನೋಡುವ ಅವಕಾಶ ಸಿಗುತ್ತದೆ ಅವರು ಮಿಸ್ ಮಾಡಿಕೊಳ್ಳಬೇಡಿ.

click me!