
ಒಟ್ಟವಾ(ಜ.10): ಬ್ರಹ್ಮಾಂಡದ ಗೊತ್ತಿಲ್ಲದ ಪ್ರದೇಶದಿಂದ ನಿರಂತರವಾಗಿ ರೇಡಿಯೋ ಸಿಗ್ನಲ್‌ಗಳು ಬರುತ್ತಿರುವುದರ ಕುರಿತು ಕೆನಡಾದ ಖಗೋಳ ಶಾಸ್ತ್ರಜ್ಞರು ಧೃಢೀಕರಿಸಿದ್ದಾರೆ.
ನಮ್ಮ ಕ್ಷಿರಪಥ ಗ್ಯಾಲಕ್ಸಿಯ ಹೊರಗಿನ ಪ್ರದೇಶದಿಂದ ಈ ರೇಡಿಯೋ ಸಿಗ್ನಲ್‌ಗಳು ಬರುತ್ತಿದ್ದು, ಖಗೋಳ ಶಾಸ್ತ್ರಜ್ಞರನ್ನು ಅಚ್ಚರಿ ಮತ್ತು ಆತಂಕಕ್ಕೆ ದೂಡಿದೆ.
ಈ ಕುರಿತು ಮಾಹಿತಿ ನೀಡಿರುವ ಬ್ರಟಿಷ್ ಕೋಲಂಬಿಯಾ ವಿವಿಯ ಸಂಶೋಧಕ ಡೆಬೋರಾ ಗುಡ್, ಈ ರೇಡಿಯೋ ಸಿಗ್ನಲ್‌ಗಳ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಹಾಲು ಹಾದಿ ಗ್ಯಾಲಕ್ಸಿಯ ಹೊರಗಿನ ಭಾಗದಿಂದ ಈ ರೇಡಿಯೋ ಸಿಗ್ನಲ್‌ಗಳು ಬರುತ್ತಿದ್ದು, ಅತ್ಯಂತ ವೇಗವಾಗಿ ಚಲಿಸುತ್ತಿರುವ ಈ ಸಿಗ್ನಲ್‌ಗಳು ನಿಜಕ್ಕೂ ಅಚ್ಚರಿ ಮೂಡಿಸುವಂತವು ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.