ಬಿಎಸ್‌ಎನ್‌ಎಲ್‌- ಎಂಟಿಎನ್ನೆಲ್‌ ವಿಲೀನ ಪ್ರಕ್ರಿಯೆ ಶೀಘ್ರ!

By Web Desk  |  First Published Jul 31, 2019, 8:21 AM IST

ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್ಸೆನ್ನೆಲ್‌-ಎಂಟಿಎನ್ನೆಲ್‌ ವಿಲೀನ ಪ್ರಕ್ರಿಯೆ ಶೀಘ್ರ!| ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಂಥ ನಗರಗಳಲ್ಲಿ ಮಾತ್ರ ಸೇವೆ ಕಲ್ಪಿಸುತ್ತಿರುವ ಎಂಟಿಎನ್‌ಎಲ್‌ 


ನವದೆಹಲಿ[ಜು.31]: ತೀವ್ರ ಹಣಕಾಸು ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಎಂಟಿಎನ್‌ಎಲ್‌ ಅನ್ನು ವಿಲೀನಗೊಳಿಸುವ ಪ್ರಸ್ತಾಪದ ಕುರಿತಾಗಿ ದೂರ ಸಂಪರ್ಕ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಂಥ ನಗರಗಳಲ್ಲಿ ಮಾತ್ರ ಸೇವೆ ಕಲ್ಪಿಸುತ್ತಿರುವ ಎಂಟಿಎನ್‌ಎಲ್‌ ದೇಶದ ಇತರ ಭಾಗಗಳಲ್ಲಿ ಸೇವೆ ನೀಡುತ್ತಿರುವ ಬಿಎಸ್‌ಎನ್‌ಎಲ್‌ ಜೊತೆ ವಿಲೀನವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Tap to resize

Latest Videos

2018-19ನೇ ಸಾಲಿನಲ್ಲಿ ಬಿಎಸ್‌ಎನ್‌ಎಲ್‌ಗೆ 14 ಸಾವಿರ ಕೋಟಿ ರು. ನಷ್ಟದಲ್ಲಿದ್ದರೆ, ಎಂಟಿಎನ್‌ಎಲ್‌ 9735 ಕೋಟಿ ರು. ನಷ್ಟದಲ್ಲಿದೆ. ಎರಡೂ ಸಂಸ್ಥೆಗಳನ್ನು ವಿಲೀನಗೊಳಿಸಿ, ಅದಕ್ಕೆ ಹೊಸದಾಗಿ ಬಂಡವಾಳ ಹೂಡುವ ಉದ್ದೇಶ ಸರ್ಕಾರದ್ದಾಗಿದೆ.

click me!