ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S4: ಹೇಳಲು ಟ್ಯಾಬ್, ಆದ್ರೆ ಕಂಪ್ಯೂಟರ್‌ಗಿಂತ ಕಮ್ಮಿಯಿಲ್ಲ!

Published : Oct 26, 2018, 09:27 PM IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S4: ಹೇಳಲು ಟ್ಯಾಬ್, ಆದ್ರೆ ಕಂಪ್ಯೂಟರ್‌ಗಿಂತ ಕಮ್ಮಿಯಿಲ್ಲ!

ಸಾರಾಂಶ

ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಟ್ಯಾಬ್ ಎಸ್‌4 ಎಂಬ ಹೊಸ ಟ್ಯಾಬ್ ಬಿಡುಗಡೆ ಮಾಡಿದೆ. ಇದು ಆಫೀಸ್‌ಗೆ ಹೋಗುವವರಿಗೆ ಮತ್ತಷ್ಟು ಸುಲಭ ಹಾಗೂ ಬಹಳ ಉಪಯುಕ್ತವಾಗಲಿದೆ. 

ಸ್ಯಾಮ್‌ಸಂಗ್ ಕಂಪನಿಯು ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಟ್ಯಾಬ್ ಎಸ್‌4  ಮೂಲಕ ಮನೆಯಿಂದ ಕಚೇರಿಗೆ ಹೋಗುವಾಗಲೂ ಕೆಲಸ ಮಾಡಬಹುದು. ಗ್ಯಾಲೆಕ್ಸಿ ಎಸ್‌4 ಟ್ಯಾಬ್ ನೋಡಲು ಕಂಪ್ಯೂಟರ್ ರೀತಿಯೇ ಇದ್ದು, ಎರಡು ರೀತಿಯ ಕೀಬೋರ್ಡ್ ವ್ಯವಸ್ಥೆ ಇದರಲ್ಲಿದೆ.

ಟ್ಯಾಬ್‌ನಲ್ಲಿ ಕೀಬೋರ್ಡ್ ಬೇಡದವರು ಎಚ್ ಡಿಎಂಐ ಅಡಾಪ್ಟರ್ ಮೂಲಕ ಬಳಸಬಹುದು. ಹಲವಾರು ರೀತಿಯ ಆ್ಯಪ್‌ಗಳನ್ನು ನೀವು ಫುಲ್ ಸ್ಕ್ರೀನ್‌ನಲ್ಲೇ ನೋಡಬಹುದಾಗಿದೆ. ಇದು ಬಹಳ ಹಗುರವಾಗಿದ್ದು, ಎಲ್ಲಿ ಬೇಕಾದರೂ ನಿಮ್ಮೊಡನೆ ಕೊಂಡೊಯ್ಯಬಹುದು. ಜೊತೆಗೆ ಕಂಪ್ಯೂಟರ್‌ನ ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡಿದಂತೆ ಅನುಭವವಾಗುತ್ತದೆ.

  •  ಈ ಟ್ಯಾಬ್‌ನಲ್ಲಿ ೭,೩೦೦ ಎಂಎಎಚ್‌ನ ಬ್ಯಾಟರಿ ಇದ್ದು, 16 ಗಂಟೆಗಳ ಕಾಲ ವಿಡಿಯೋ ನೋಡುವ ಕೆಪಾಸಿಟಿ ಹೊಂದಿದೆ.
  •  ಎಸ್ ಪೆನ್ ಸೌಲಭ್ಯವಿದ್ದು, ಇದರಿಂದ ಚಿತ್ರಬಿಡಿಸುವುದು, ಪಟ್ಟಿ ಮಾಡಿಕೊಳ್ಳುವುದು ಹೀಗೆ ಹಲವು ರೀತಿಯ ಸೌಲಭ್ಯ ಇದೆ.
  • 10.5 ಇಂಚುಗಳ ಅಮೋಲ್ಡ್ ಡಿಸ್‌ಪ್ಲೇ ಹೊಂದಿದೆ. ಡಾಲ್ಬಿ ಅಟ್ಮೊಸ್ ಒಳಗೊಂಡ ಸೌಂಡ್ ಎಫೆಕ್ಟ್ ಇರಲ್ಲಿದ್ದು, ನಾಲ್ಕು ಸ್ಪೀಕರ್ ಇದರಲ್ಲಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ