ಹಬ್ಬದ ಸೀಸನ್ ಬಂತೆಂದರೆ ಸಾಕು, ವರ್ತಕರು ಮಾತ್ರವಲ್ಲ, ಈ-ಕಾಮರ್ಸ್ ಕಂಪನಿಗಳು ಕೂಡಾ ಭಾರೀ ರಿಯಾಯಿತಿಯನ್ನು ಘೋಷಿಸುತ್ತವೆ. ಇದೀಗ ಫ್ಲಿಪ್ ಕಾರ್ಟ್ ಕೂಡಾ ಫೆಸ್ಟಿವಲ್ ಧಮಾಕಾವನ್ನು ಪ್ರಕಟಿಸಿದೆ.
ಸೆಕೆಂಡ್ ರೌಂಡ್ ಫೆಸ್ಟಿವಲ್ ಸೇಲ್‌ಗೆ ಫ್ಲಿಪ್‌ಕಾರ್ಟ್ ಸಿದ್ಧವಾಗಿದೆ. ‘ಫೆಸ್ಟಿವಲ್ ಧಮಾಕ ಡೇಸ್’ ಹೆಸರಿನಲ್ಲಿ ಹಬ್ಬದ ಸೇಲ್ ಶುರುವಾಗಿದೆ. ಹಲವು ಬ್ರ್ಯಾಂಡ್‌ಗಳ ಉತ್ಪನ್ನದ ಮೇಲೆ ಶೇ.20 ರಿಂದ 80 ಶೇಕಡಾ ರಿಯಾಯಿತಿ ಇದೆ.
ಒಪ್ಪೊ ಎಫ್9 ಆಫರ್ ಬೆಲೆ ರೂ.18,990 ಒಪ್ಪೋ ಎಫ್9 ಮೊಬೈಲ್ ಫೋನ್‌ನ ಮುಖಬೆಲೆ 21,990. ಈ ಸೇಲ್‌ನಲ್ಲಿ ಆ ಫೋನ್ 18,990 ರು.ಗೆ ಸಿಗಲಿದೆ. 4 ಜಿಬಿ ರ್ಯಾಮ್, 64 ಜಿಬಿ ಸ್ಟೋರೇಜ್‌ನ ಈ ಮೊಬೈಲ್ ಖರೀದಿಯಲ್ಲಿ 15700 ರುವರೆಗೂ ಎಕ್ಸ್ ಚೇಂಜ್ ಆಫರ್ ಸಹ ಇದೆ. ಆಕ್ಸಿಸ್ ಬ್ಯಾಂಕ್‌ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ಈ ಖರೀದಿ ನಡೆಸಿದರೆ ಶೇ.10ರಷ್ಟು ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು.
ಇದಲ್ಲದೇ ನೋಕಿಯಾ 6.1 ಪ್ಲಸ್ (4ಜಿಬಿ ರ್ಯಾಮ್ 64 ಬಿಜಿ ಸ್ಟೋರೇಜ್) ಫೋನ್ 17600 ರು. ಬೆಲೆಯದಾಗಿದ್ದು ಈ ಆಫರ್‌ನಲ್ಲಿ 15,999 ರು.ಗೆ ಲಭ್ಯವಿದೆ. ಮಿ ಮೊಬೈಲ್‌ಗಳಲ್ಲೂ ಉತ್ತಮ ಆಫರ್ ಇದೆ. ಗೂಗಲ್‌ನ ಸ್ಮಾರ್ಟ್ ಸ್ಪೀಕರ್‌ಗಳಾದ 4499ರು. ಗಳ ಗೂಗಲ್ ಹೋಂ ಮಿನಿ ಈಗ 2449 ರು. ಸಿಗಲಿದೆ.
9999 ರು. ಮುಖಬೆಲೆಯ ದೊಡ್ಡವಿನ್ಯಾಸದ ಹೋಂ ಸ್ಪೀಕರ್ 7499ರು.ಗೆ ಸಿಗಲಿದೆ. ಎಲ್‌ಇಡಿ ಸ್ಮಾರ್ಟ್ ಟಿವಿಗಳಲ್ಲೂ 24000 ರು.ನ 40 ಇಂಚಿನ ಎಚ್‌ಡಿ ಎಲ್‌ಇಡಿ ಟಿವಿ 16,499 ರು.ಗೆ ಸಿಗುತ್ತಿದೆ. 55 ಇಂಚಿನಿಂದ ಹಿಡಿದು ಕಡಿಮೆ ವಿಸ್ತೀರ್ಣದ ಆ್ಯಂಡ್ರಾಯ್ಡ್ ಟಿವಿಗಳೂ ರಿಯಾಯಿತಿ ಬೆಲೆಯಲ್ಲಿ ಲಭ್ಯವಿವೆ.
ಎಲ್‌ಇಡಿ ಬಲ್ಬ್‌ಗೆ ರೂ.449, ನೀವು ಚಪ್ಪಲಿ ಪ್ರಿಯರಾಗಿದ್ದರೆ ಅತ್ಯುತ್ತಮ ಜಾಗಿಂಗ್ ಶೂಗಳು ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಬಾಟಾ ಕಂಪೆನಿಯ ಚಪ್ಪಲಿ ಹಾಗೂ ಶೂಗಳಲ್ಲಿ ಭಾರೀ ರಿಯಾಯಿತಿ ಇದೆ. ಜಾಗಿಂಗ್ ಶೂಗಳೂ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಟೀಶರ್ಟ್, ಉಡುಗೆ, ವಾಚ್, ಬೆಲ್ಟ್, ಲ್ಯಾಂಪ್, ಬೆಡ್‌ಶೀಟ್ ಇತ್ಯಾದಿಗಳ ಮೇಲೆ ಶೇ.80 ರಷ್ಟು ರಿಯಾಯಿತಿ ಇದೆ. 2550 ಮುಖಬೆಲೆಯ 15 ವ್ಯಾಟ್‌ನ 3 ಎಲ್‌ಇಡಿ ಬಲ್ಬ್ ಗಳು ಕೇವಲ 449 ರು.ಗೆ ಸಿಗಲಿವೆ.
ಚಾರ್ಜೆಬಲ್ ಟಾರ್ಚ್‌ಗಳಲ್ಲಿ ಶೇ.85ರಷ್ಟು ರಿಯಾಯಿತಿ ಇದೆ. 2000 ರು.ಗಳ ಎಮರ್ಜೆನ್ಸಿ ಲ್ಯಾಂಪ್ 400 ರು.ಗೆ ಸಿಗುತ್ತವೆ. ಸೋಫಾಗಳಲ್ಲಿ ಶೇ.70 ರಷ್ಟು ರಿಯಾಯಿತಿ ಇದೆ. ನೆಲ ಕ್ಲೀನಿಂಗ್ ಸೆಟ್ 3000 ರು.ಬೆಲೆಯದ್ದು 735 ರುಗಳಿಗಿಂತಲೂ ಕಡಿಮೆ ಬೆಲೆಗೆ ಸಿಗುತ್ತವೆ. 75,000 ಬೆಲೆಯ ಸೋಫಾ 31499 ರು.ಗೆ ಲಭ್ಯ. 20 ಸಾವಿರ ಬೆಲೆಯ ಸೋಫಾ 10 ಸಾವಿರದಲ್ಲಿ ಸಿಗುತ್ತಿದೆ. ಫ್ರೀ ಇಎಂಐ ಸೌಲಭ್ಯವೂ ಇದೆ.
ಟ್ರಾಲಿ ಬ್ಯಾಗ್‌ಗಳು ಶೇ.70ರ ರಿಯಾಯಿತಿ ದರದಲ್ಲಿ ಲಭ್ಯವಿವೆ. 7549 ರು. ಬೆಲೆಯ ಟ್ರಾಲಿ ಬ್ಯಾಗ್ 1993 ರು.ಗಳಿಗಿದೆ. ಬ್ಯಾಕ್‌ಪ್ಯಾಕ್‌ಗಳೂ ಆಫರ್‌ಬೆಲೆಗೆ ಲಭ್ಯ. ಗೃಹೋಪಯೋಗಿ ವಸ್ತುಗಳಲ್ಲೂ ಶೇ.70 ರ ರಿಯಾಯಿತಿ ಇದೆ.