ಕರ್ನಾಟಕಕ್ಕೆ ಮತ್ತೊಂದು ಲಾಟರಿ; ರಾಜ್ಯದಲ್ಲಿ ಸಿಕ್ತು ಅಪರೂಪ ಲೋಹದ ನಿಕ್ಷೇಪ

By Suvarna News  |  First Published Feb 18, 2020, 4:18 PM IST
  • ಬೆಂಗಳೂರಿನ 100 ಕಿ.ಮೀ ದೂರದಲ್ಲಿ ಇದೆ ಅಪರೂಪ ಲೋಹದ ನಿಕ್ಷೇಪ
  • ಇಂಧನ ಕ್ಷೇತ್ರಕ್ಕೆ ಶುಭ ಲಕ್ಷಣ ಎಂದೇ ಹೇಳಬಹುದಾದ ಬೆಳವಣಿಗೆ 
  • ಸಕ್ಕರೆನಾಡಿನಲ್ಲಿ ಇದೆ ಬ್ಯಾಟರಿ ತಯಾರಿಸಲು ಬೇಕಾಗಿರುವ ಅತೀಮುಖ್ಯ ಖನಿಜ  

ಬೆಂಗಳೂರು (ಫೆ.18): ಇಡೀ ಜಗತ್ತು ಸಾಂಪ್ರದಾಯಿಕ ಇಂಧನಗಳಿಗೆ ಪರ್ಯಾಯವಾದ ಸಂಪನ್ಮೂಲಗಳನ್ನು ಹುಡುಕುತ್ತಿದೆ. ಪೆಟ್ರೋಲ್, ಡೀಸೆಲ್ ವಾಹನಗಳ ಬದಲಾಗಿ  ಇಲೆಕ್ಟ್ರಿಕ್ ವಾಹನಗಳಿಗೆ ಭಾರತ ಹೆಚ್ಚು ಒತ್ತು ನೀಡುತ್ತಿದೆ. ಅದರ ಬೆನ್ನಲ್ಲೇ  ಶುಭಸುದ್ದಿಯೊಂದು ಹೊರಗೆ ಬಿದ್ದಿದೆ.

ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಬೇಕಾಗುವಂತಹ ಲೀಥಿಯಂ ಲೋಹದ ನಿಕ್ಷೇಪವೊಂದು ನಮ್ಮ ಬೆಂಗಳೂರಿನ ಪಕ್ಕದ ಜಿಲ್ಲೆಯಲ್ಲೇ ಪತ್ತೆಯಾಗಿದೆ, ಎಂದು 'ದಿ ಇಕಾನಮಿಕ್ ಟೈಮ್ಸ್' ವರದಿ ಮಾಡಿದೆ.

Tap to resize

Latest Videos

undefined

ಹೌದು, ಸಕ್ಕರೆನಾಡು ಮಂಡ್ಯದಲ್ಲಿ ಈ ಬೃಹತ್ ಲೀಥಿಯಂ ನಿಕ್ಷೇಪ ಪತ್ತೆಯಾಗಿದ್ದು, 14100 ಟನ್‌ನಷ್ಟು ಲೋಹ ತೆಗೆಯಬಹುದು  ಎಂದು  ಪರಮಾಣು ಶಕ್ತಿ ಆಯೋಗದ ಅಂಗ ಸಂಸ್ಥೆಯಾಗಿರುವ  ಪರಮಾಣು ಖನಿಜ ನಿರ್ದೇಶನಾಲಯದ ಸಂಶೋಧಕರು ಅಂದಾಜಿಸಿದ್ದಾರೆ. 

ಇದನ್ನೂ ಓದಿ | ನೀವು ಅಂದ್ಕೊಂಡಂಗಿಲ್ಲ 'ಡಿಲೀಟ್ ಫಾರ್ ಎವ್ರಿ ಒನ್' ಆಪ್ಶನ್! ಒಳಗಿನ ಕಥೆ ಬೇರೇನೆ!

'ಕರೆಂಟ್ ಸೈನ್ಸ್' ಜರ್ನಲ್‌ನಲ್ಲಿ ಈ ವಿಷಯದ ಬಗ್ಗೆ ಪ್ರಬಂಧ ಪ್ರಕಟವಾಗಲಿದೆ, ಎಂದು ವರದಿಯು ಹೇಳಿದೆ.

ಅಧ್ಯಯನದ ಪ್ರಕಾರ ಮಂಡ್ಯದಲ್ಲಿ 0.5 ಚದರ ಕಿ.ಮೀ ಜಾಗದಲ್ಲಿ 30300 ಟನ್ ಲೀಥಿಯಂ ಅದಿರು  ಪತ್ತೆಯಾಗಿದೆ. ಅದರಲ್ಲಿ 14100 ಟನ್‌ ಲೀಥಿಯಂ ಲೋಹ ತೆಗೆಯಬಹುದಾಗಿದೆ ಎಂದು ಬ್ಯಾಟರಿ ತಂತ್ರಜ್ಞಾನ ತಜ್ಞರೂ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಪ್ರೊಫೆಸರ್ ಆಗಿರುವ ಮುನಿಚಂದ್ರಯ್ಯ  ತಿಳಿಸಿದ್ದಾರೆ.  

ಆದರೆ ಜಗತ್ತಿನ ಬೇರೆಡೆಗೆ ಹೋಲಿಸಿದಾಗ ಈ ಪ್ರಮಾಣ ಕಡಿಮೆ. ಚಿಲಿಯಲ್ಲಿ 8.6 ಮಿಲಿಯನ್, ಆಸ್ಟ್ರೇಲಿಯಾದಲ್ಲಿ 2.8 ಮಿಲಿಯನ್, ಅರ್ಜೇಂಟೀನಾದಲ್ಲಿ 1.7 ಮಿಲಿಯನ್ ಮತ್ತು ಪೋರ್ಚುಗಲ್‌ನಲ್ಲಿ 60 ಸಾವಿರ ಟನ್‌ನಷ್ಟು ಲೀಥಿಯಂ ಲೋಹ ಲಭ್ಯವಿದೆ.

ತನ್ನ ಅವಶ್ಯಕತೆಗಳನ್ನು ಪೂರೈಸಲು ಭಾರತ ವಿದೇಶದಿಂದ ಲೀಥಿಯಂನ್ನು ಆಮದು ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ | ವಾಟ್ಸಪ್‌ನಲ್ಲಿ 3 ಹಿಡನ್ ಫೀಚರ್: ನೋಡಿ ನೀವೂ ಹೇಳ್ತೀರಾ ಏನ್ ಸೂಪರ್ ಗುರೂ!

2017ರಲ್ಲಿ 384 ಮಿಲಿಯನ್ ಡಾಲರ್ ಮೌಲ್ಯದ ಲೀಥಿಯಂನ್ನು ಆಮದು ಮಾಡಿಕೊಂಡಿದ್ದ ಭಾರತ 2019ರಲ್ಲಿ 1.2 ಬಿಲಿಯನ್ ಡಾಲರ್ ಮೌಲ್ಯದ ಲೋಹವನ್ನು ತರಿಸಿತ್ತು. ಅಂದರೆ ಎರಡೇ ವರ್ಷದಲ್ಲಿ ಆಮದಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.

ಭಾರತದಲ್ಲಿ ಲೀಥಿಯಂ ಶೋಧಕ್ಕೆ ಸಂಬಂಧಪಟ್ಟಂತೆ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನಗಳು ನಡೆದಿಲ್ಲ,  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

(ಸಾಂದರ್ಭಿಕ ಚಿತ್ರ)

click me!