ಸಾಯಲು ಸಜ್ಜಾಗಿದೆ ಸೂರ್ಯನಿಗಿಂತ ಸಾವಿರ ಪಟ್ಟು ದೊಡ್ಡದ ನಕ್ಷತ್ರ| ರಾತ್ರಿ ಆಕಾಶದ 12ನೇ ಪ್ರಕಾಶಮಾನ ನಕ್ಷತ್ರ ಬೆಟೆಲ್‌ಗ್ಯೂಸ್| ಇದೇ ಫೆ.21ರಂದು ಬೆಟೆಲ್‌ಗ್ಯೂಸ್ ನಕ್ಷತ್ರದ ಸೂಪರ್ ನೋವಾ ಪ್ರಕ್ರಿಯೆ ಸಾಧ್ಯತೆ| ಭೂಮಿಯಿಂದ 642.5 ಜ್ಯೋತಿರ್ವರ್ಷ ದೂರದಲ್ಲಿರುವ ಬೆಟೆಲ್‌ಗ್ಯೂಸ್ ನಕ್ಷತ್ರ| ಲ್ಲನೋವಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಎಡ್ವರ್ಡ್ ಗಿನಾನ್ ಸಂಶೋಧನೆ|
ವಾಷಿಂಗ್ಟನ್(ಫೆ.14): ದಿಗಂತದ ಯಾವುದೋ ಮೂಲೆಯಲ್ಲಿ ನಕ್ಷತ್ರವೊಂದು ಸ್ಫೋಟಗೊಂಡರೆ ಭೂಮಿಗೇನು ಆತಂಕ ಎಂದು ಉಡಾಫೆ ಮಾಡುವಂತಿಲ್ಲ. ನಮ್ಮ ಸೂರ್ಯನಿಗಿಂತ ಸಾವಿರಾರು ಪಟ್ಟು ದೊಡ್ಡದಿರುವ ನಕ್ಷತ್ರಗಳು ಈ ಬ್ರಹ್ಮಾಂಡದಲ್ಲಿವೆ. ಅವು ಸ್ಫೋಟಗೊಂಡರೆ ಭೂಮಿಗೆ ಗಂಡಾಂತರ ಕಟ್ಟಿಟ್ಟ ಬುತ್ತಿ.
ಅದರಂತೆ ಗಾತ್ರದಲ್ಲಿ ಸೂರ್ಯನಿಗಿಂತ ಬರೋಬ್ಬರಿ ಒಂದು ಸಾವಿರ ಪಟ್ಟು ದೊಡ್ಡದಿರುವ ನಕ್ಷತ್ರವೊಂದು ಶೀಘ್ರದಲ್ಲೇ ಸ್ಫೋಟಗೊಳ್ಳಲಿದ್ದು, ಮಾನವ ಸಮುದಾಯ ಗಮನಿಸಬಹುದಾದ ಅತ್ಯಂತ ಹತ್ತಿರದ ಸೂಪರ್ ನೋವಾ ಘಟನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.
Down here on Earth, we’re going to see a very bright light in the sky. It could even be visible during the day, and bright enough to rival a full moon at night. The event will be breathtaking to behold, but will be wrapping up its farewell tour. It’s been a pleasure. pic.twitter.com/wffL9OMOzP
— 。.:*・☆・Jen .:*・☆・゜ (@Aero_Jenna)undefined
ರಾತ್ರಿ ಆಕಾಶದ 12ನೇ ಪ್ರಕಾಶಮಾನ ನಕ್ಷತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಟೆಲ್‌ಗ್ಯೂಸ್ ನಕ್ಷತ್ರ, ತನ್ನ ಬೆಳಕನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಈ ಮೂಲಕ ಅದು 20ನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಕೆಲವೇ ದಿನಗಳಲ್ಲಿ ಸ್ಫೋಟಗೊಳ್ಳಲಿದೆ ಎನ್ನಲಾಗಿದೆ.
ಭೂಮಿಯಿಂದ 642.5 ಜ್ಯೋತಿರ್ವರ್ಷ ದೂರದಲ್ಲಿರುವ ಬೆಟೆಲ್‌ಗ್ಯೂಸ್ ನಕ್ಷತ್ರ ತನ್ನ ಅಂತ್ಯ ಸಮೀಪಿಸಿದೆ ಎಂದು ವಿಲ್ಲನೋವಾ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಎಡ್ವರ್ಡ್ ಗಿನಾನ್ ಹೇಳಿದ್ದಾರೆ.
ಪತ್ತೆಯಾಯ್ತು ರಕ್ತಪಿಶಾಚಿ ನಕ್ಷತ್ರ: ಯಾವುದೂ ಬದಕುಲಾರದು ಬಂದ್ರೆ ಹತ್ರ!
ಎಡ್ವರ್ಡ್ ಗಿನಾನ್ ಸಂಗ್ರಹಿಸಿದ ಮಾಹಿತಿ ಪ್ರಕಾರ ಬೆಟೆಲ್‌ಗ್ಯೂಸ್ 430 ದಿನಗಳ ಸ್ಪಂದನ ಅವಧಿಯಲ್ಲಿದ್ದು, ಇದೇ ಫೆ. 21 ರಂದು ತನ್ನ ಅಂತಿಮ ಮಂದ ಹಂತವನ್ನು ತಲುಪಲಿದೆ.
ಸೂರ್ಯನಿಗಿಂತ ಸಾವಿರ ಪಟ್ಟು ದೊಡ್ಡದಿರುವ ಬೆಟೆಲ್‌ಗ್ಯೂಸ್ ನಕ್ಷತ್ರ ಸ್ಫೋಟ ಅತ್ಯಂತ ಪ್ರಕಾಶಮಾನವಾಗಿರುತ್ತದೆ. ಭೂಮಿಯಿಂದ ಹಗಲಲ್ಲೂ ಈ ನಕ್ಷತ್ರದ ಸ್ಫೋಟದ ಬೆಳಕನ್ನು ಕಾಣಬಹುದಾಗಿದ್ದು, ಸ್ಫೋಟದ ಬೆಳಕು ರಾತ್ರಿಯಲ್ಲಿ ನಮ್ಮ ಚಂದ್ರನನ್ನು ಸಂಪೂರ್ಣವಾಗಿ ಮುಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
I'm overly invested in whether we're going to see Betelgeuse explode or not
— Daniel Poarch (Dodgers fan) (@DanielfromSport)ಖಗೋಳಶಾಸ್ತ್ರಜ್ಞ ಎಡ್ವರ್ಡ್ ಗಿನಾನ್ ಅಭಿಪ್ರಾಯದಂತೆ ಇದೇ ಫೆ.21ರಂದು ಬೆಟೆಲ್‌ಗ್ಯೂಸ್ ನಕ್ಷತ್ರ ಸೂಪರ್ ನೋವಾ ಹಂತಕ್ಕೆ ತಲುಪಲಿದ್ದು, ಇದು ನಿಜವಾದರೆ ಮಾನವ ಸಮುದಾಯ ಗಮನಿಸಬಹುದಾದ ಅತ್ಯಂತ ಹತ್ತಿರದ ಸೂಪರ್ ನೋವಾ ಘಟನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.