ಜಿಯೋ ಕೊಡ್ತಿರೋ ಆಫರ್'ಗಳ ಹಿಂದಿದೆ ಲಾಭದ ಲಾಜಿಕ್; ಜಿಯೋ ಬಲೆಗೆ ಬೀಳುವ ಮುನ್ನ ಅದರ ಸೀಕ್ರೆಟ್ ತಿಳಿಯಿರಿ

Published : Sep 13, 2016, 10:49 AM ISTUpdated : Apr 11, 2018, 12:51 PM IST
ಜಿಯೋ ಕೊಡ್ತಿರೋ ಆಫರ್'ಗಳ ಹಿಂದಿದೆ ಲಾಭದ ಲಾಜಿಕ್; ಜಿಯೋ ಬಲೆಗೆ ಬೀಳುವ ಮುನ್ನ ಅದರ ಸೀಕ್ರೆಟ್ ತಿಳಿಯಿರಿ

ಸಾರಾಂಶ

ಅಳಿಯ ಎಂದು ನೇರವಾಗಿ ಅನ್ನುವ ಬದಲು ಮಗಳ ಗಂಡ ಎಂದು ಹೇಳುವಂತಿದೆ ಜಿಯೋದವರ ಆಫರ್'ಗಳು.

ಈಗ ಎಲ್ಲೆಲ್ಲೂ ರಿಲಾಯನ್ಸ್ ಜಿಯೋದ ಸುದ್ದಿ. ಎಷ್ಟೆಷ್ಟು ಆಫರ್ ಕೊಡ್ತಿದ್ದಾರಲ್ಲಾ ಎಂದು ಮೂಗಿನ ಮೇಲೆ ಬೆರಳಿಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಉಚಿತ ಫೋನ್ ಕಾಲ್ ನೀಡುತ್ತೇವೆ ಎಂದು ಕಂಪನಿ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಅದು ಹೇಗೆ ಸಾಧ್ಯ? ಇಲ್ಲಿದೆ ಲಾಜಿಕ್.

ಬಿಎಸ್'ಎನ್'ಎಲ್, ಏರ್ಟೆಲ್ ಮೊದಲಾದ ಹಾಲಿ ಟೆಲಿಕಾಂ ಆಪರೇಟರ್'ಗಳು 2ಜಿ ಮತ್ತು 3ಜಿ ನೆಟ್ವರ್ಕ್'ನಲ್ಲಿ ವಾಯ್ಸ್ ಕಾಲ್ ಸೇವೆ ನೀಡುತ್ತವೆ. 4ಜಿ ನೆಟ್ವರ್ಕ್'ನಲ್ಲಿ ಇಂಟರ್ನೆಟ್ ಒದಗಿಸುತ್ತವೆ. ಮೊಬೈಲ್ ಇಂಟರ್ನೆಟ್ ಆಫ್ ಮಾಡಿದರೆ ಡಾಟಾ ಆಫ್ ಆಗುತ್ತದೆ. ಆದರೆ, ರಿಲಯನ್ಸ್ ಜಿಯೋದ ತಂತ್ರಜ್ಞಾನ ಸ್ವಲ್ಪ ಭಿನ್ನ. VoLTE ಎಂಬ ತಂತ್ರಜ್ಞಾನವನ್ನು ಜಿಯೋ ಬಳಸುತ್ತದೆ. ಧ್ವನಿ ಕರೆಗಳನ್ನು ಡಾಟಾ ಪ್ಯಾಕೆಟ್'ಗಳ ಮೂಲಕ ರವಾನಿಸುತ್ತದೆ. ಮೊಬೈಲ್ ಇಂಟರ್ನೆಟ್ ಆಫ್ ಮಾಡಿದರೂ ಡಾಟಾ ಪ್ಯಾಕೆಟ್'ಗಳ ಮೂಲಕ ಫೋನ್ ಕರೆ ಮಾಡಲು ಸಾಧ್ಯ. ಆದರೆ, ಇದಕ್ಕೆ ಡಾಟಾ ದರಗಳು ಅನ್ವಯವಾಗುತ್ತವೆ.

ಎಷ್ಟು ಡಾಟಾ ಖರ್ಚಾಗುತ್ತೆ?
ಸಾಮಾನ್ಯವಾಗಿ ಔಟ್'ಗೋಯಿಂಗ್ ಕಾಲ್'ಗಳಿಗೆ ದರಗಳು ವ್ಯಯವಾಗುತ್ತದೆ. ಆದರೆ, ಜಿಯೋ ನೆಟ್ವರ್ಕ್'ನಲ್ಲಿ ಔಟ್'ಗೋಯಿಂಗ್ ಜೊತೆಗೆ ಇನ್'ಕಮಿಂಗ್ ಕಾಲ್'ಗಳಿಗೂ ಡಾಟಾ ದರ ಅನ್ವಯವಾಗುತ್ತದೆ. ಫೋನ್'ನಲ್ಲಿ ನಾವು ಮಾತನಾಡಿದಷ್ಟೂ ಅವಧಿಗೂ ಡಾಟಾ ಖರ್ಚಾಗುತ್ತಾ ಹೋಗುತ್ತದೆ. ಜೊತೆಗೆ ನಾವು ಮಾಡುವ ಬ್ರೌಸಿಂಗ್'ಗಳಿಂದ ಖರ್ಚಾಗುವ ಡಾಟಾ ಸೇರಿಸಿಕೊಂಡರೆ ರಿಲಯನ್ಸ್ ಜಿಯೋದವರ ಆಫರ್'ಗಳು ಮನಮೋಹಕ ಅಂತ ಕಾಣಿಸುವುದಿಲ್ಲ. ಅಳಿಯ ಎಂದು ನೇರವಾಗಿ ಅನ್ನುವ ಬದಲು ಮಗಳ ಗಂಡ ಎಂದು ಹೇಳುವಂತಿದೆ ಜಿಯೋದವರ ಆಫರ್'ಗಳು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೇಯ್ ನಿಮ್ಮ ಫೋಟೋ ನೋಡಿದೆ, ವ್ಯಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶ ಓಪನ್ ಮಾಡಬೇಡಿ
108MP ಮಾಸ್ಟರ್ ಪಿಕ್ಸೆಲ್: ಹೊಸ ವರ್ಷಕ್ಕೆ Redmi Note 15 5G ಬಿಡುಗಡೆ! ಬೆಲೆ ಎಷ್ಟು?