ಜಿಯೋ ಉಚಿತ ಕರೆ ಸೇವೆ ಸ್ಥಗಿತಗೊಳಿಸಲು ಏರ್'ಟೆಲ್, ವೋಡಪೋನ್ ಮಾಡಿದ 'ಐಡಿಯಾ' ಏನು..?

Published : Sep 11, 2016, 05:13 AM ISTUpdated : Apr 11, 2018, 12:43 PM IST
ಜಿಯೋ ಉಚಿತ ಕರೆ ಸೇವೆ ಸ್ಥಗಿತಗೊಳಿಸಲು ಏರ್'ಟೆಲ್, ವೋಡಪೋನ್ ಮಾಡಿದ 'ಐಡಿಯಾ' ಏನು..?

ಸಾರಾಂಶ

ದೆಹಲಿ(ಸೆ.11): ದೇಶದ ಟೆಲಿಕಾಂ ವಲಯದಲ್ಲಿ ಕ್ರಾಂತಿಕಾರಕ ಸಂಚಲನವನ್ನು ಮೂಡಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್ ಗಳನ್ನು ಘೋಷಿಸಿದ್ದು, ಉಚಿತ ಡೇಟಾ, ಉಚಿತ ಕರೆ ಸೇವೆಗಳು ಇತರೆ ಕಂಪನಿಗಳಿಗೆ ಬಿಸಿ ತುಪ್ಪವಾಗಿದೆ. 

ಜಿಯೋ ಇಂದು ಮಾರುಕಟ್ಟೆಯಲ್ಲಿರುವ ಇತರೆ ಕಂಪನಿಗಳಿಗೆ ನಡುಕ ತರಿಸಿದೆ. ಈ ಹಿನ್ನಲೆಯಲ್ಲಿ ಜಿಯೋ ಉಚಿತ ಸೇವೆಯನ್ನು ಹೇಗಾದರು ಮಾಡಿ ನಿಲ್ಲಿಸ ಬೇಕು ಎಂದು ಪಣಕ್ಕೆ ಬಿದ್ದಿರುವ ವಿವಿಧ ಕಂಪನಿಗಳು ಪ್ಲಾನ್ ರೆಡಿ ಮಾಡಿವೆ. 

ಜಿಯೋ ಉಚಿತ ಕರೆ ಸೇವೆಯನ್ನು ನೀಡಿದರೆ ನಾವು ನಷ್ಟ ಅನುಭವಿಸ ಬೇಕಾಗುತ್ತದೆ ಎಂದು ತಮ್ಮ ವಾದ ಮಂಡಿಸುತ್ತಿರುವ ಐಡಿಯಾ, ವೊಡಾಪೋನ್ ಮತ್ತು ಏರ್ ಟೆಲ್ ಕಂಪನಿಗಳು ಟ್ರಾಯ್'ಗೆ ದೂರೊಂದನ್ನು ಸಲ್ಲಿಸಿವೆ.

ಸದ್ಯ ಟ್ರಾಯ್ ನಿಯಮದಂತೆ ಒಂದು ನೆಟ್ ವರ್ಕ್ ನಿಂದ ಇನ್ನೊಂದು ನೆಟ್ ವರ್ಕ್ ಗೆ ಕರೆ ಮಾಡಿದರೆ 14 ಪೈಸೆ ದರವನ್ನು ನಿಗದಿ ಮಾಡಿದೆ. ಆದರೆ ಈಗ ಉಚಿತ ಸೇವೆಯಿಂದ ನಮಗೆ ನಷ್ಟವಾಗಲಿದೆ, ಈ 14 ಪೈಸೆ ನಮಗೆ ನಷ್ಟವಾಗಲಿದೆ ಎಂಬುದು ಈ ಕಂಪನಿಗಳ ವಾದವಾಗಿದೆ. 

ಜಿಯೋ ಡೇಟಾ ಆಧಾರಿತ ಕರೆ ಸೇವೆಯನ್ನು ನೀಡುತ್ತಿದೆ ಹಾಗಾಗಿ ಇಂಟರ್ ಕನೆಟ್ ದರಗಳು ಅಲ್ಲಿ ಬರುವುದಿಲ್ಲ, ಆದರೆ ಕರೆಯನ್ನು ಸ್ವೀಕರಿಸುವ ನಾವು 14 ಪೈಸೆ ನಷ್ಟ ಅನುಭವಿಸ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಜಿಯೋದಿಂದ ನಮಗೆ 40 ಪೈಸೆ ಕೊಡಿಸ ಬೇಕು ಎಂದು ಟ್ರಾಯ್ ಬಳಿ ಅವಲತ್ತು ತೋಡಿಕೊಂಡಿದ್ದವು. 

ಈ ವಿಚಾರವಾಗಿ ವಿಚಾರಣೆ ಸಹ ನಡೆದಿದ್ದು, ಜಿಯೋ ಡೇಟಾ ಆಧಾರಿತ ಕರೆ ಮಾಡುವ ವ್ಯವಸ್ಥೆ ಮಾಡಿರುವುದರಿಂದ ಇಂಟರ್ ಕನೆಟ್ ದರಗಳು ಅನ್ವಯ ಆಗುವುದಿಲ್ಲ. ಹಾಗಾಗಿ ಟ್ರಾಯ್ ಈ ವಿಚಾರವಾಗಿ ನೀವೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕೈ ಚೆಲ್ಲಿದೆ. ಒಟ್ಟಿನಲ್ಲಿ ಹೇಗಾದರು ಜಿಯೋ ಕಾಲೆಳೆಯಲೇ ಬೇಕೆಂದಿರುವ ಈ ಕಂಪನಿಗಳು ಮುಂದೇನು ಮಾಡುತ್ತವೆ ಎಂದು ಕಾದು ನೋಡಬೇಕು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಹೇಯ್ ನಿಮ್ಮ ಫೋಟೋ ನೋಡಿದೆ, ವ್ಯಾಟ್ಸಾಪ್‌ನಲ್ಲಿ ಈ ರೀತಿಯ ಸಂದೇಶ ಓಪನ್ ಮಾಡಬೇಡಿ
108MP ಮಾಸ್ಟರ್ ಪಿಕ್ಸೆಲ್: ಹೊಸ ವರ್ಷಕ್ಕೆ Redmi Note 15 5G ಬಿಡುಗಡೆ! ಬೆಲೆ ಎಷ್ಟು?