ಮತ್ತೆ ಆಟ ಬದಲಿಸಿದ ಜಿಯೋ, ನೆಟ್‌ಫ್ಲಿಕ್ಸ್‌ ಜೊತೆ ಎರಡು ಧಮಾಕಾ ಆಫರ್ ಘೋಷಣೆ! 

By Mahmad Rafik  |  First Published Aug 28, 2024, 6:07 PM IST

ರಿಲಯನ್ಸ್ ಜಿಯೋ ಮಾರುಕಟ್ಟೆಯಲ್ಲಿ ಹೊಸ ಆಟ ಶುರು ಮಾಡಿದೆ. 5ಜಿ ಡೇಟಾ ಜೊತೆಯಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುವ  ಪ್ಲಾನ್ ಘೋಷಣೆ ಮಾಡಿದೆ.


ಮುಂಬೈ: ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಸ್ಪರ್ಧಾತ್ಮಕ ಲೋಕದಲ್ಲಿ ಮತ್ತೆ ತನ್ನ ಆಟ ಬದಲಿಸುವ ಮೂಲಕ ಎದುರಾಳಿಗಳಿಗೆ ಶಾಕ್ ನೀಡಿದೆ. ರಿಲಯನ್ಸ್ ತನ್ನ ಎಲ್ಲಾ ಬಳಕೆದಾರಿಗೆ ಜಿಯೋ ಟಿವಿ, ಜಿಯೋ ಸಿನಿಮಾಗಳ ಸಬ್‌ಸ್ಕ್ರಿಪ್ಷನ್ ನೀಡುತ್ತಿದೆ. ಇದೀಗ ಎರಡು ಹೊಸ ಪ್ಲಾನ್ ಘೋಷಣೆ ಮಾಡಿರುವ ಜಿಯೋ, ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡುತ್ತಿದೆ. ಈ ಮೂಲಕ ಬಳಕೆದಾರರನ್ನು ಸೆಳೆಯುವ ಪ್ರಯತ್ನಕ್ಕೆ ರಿಲಯನ್ಸ್ ಮುಂದಾಗಿದೆ. ಈ ಎರಡು ಪ್ಲಾನ್‌ನಲ್ಲಿ ಪ್ರತಿದಿನ 3 ಜಿಬಿ ಡೇಟಾ ಸಿಗಲಿದೆ. ಈ ಎರಡೂ ಪ್ಲಾನ್‌ಗಳಲ್ಲಿ ಅನ್‌ಲಿಮಿಟೆಡ್ 5ಜಿ ಡೇಟಾ ಬೆನೆಫಿಟ್ ಸಹ ಸಿಗುತ್ತವೆ. 

ನೀವು ಜಿಯೋ ಸಿಮ್ ಬಳಕೆ ಮಾಡುತ್ತಿದ್ದರೆ, ಈಗ ರೀಚಾರ್ಜ್ ಮಾಡುವ ಪ್ಲಾನ್ ನಿಮ್ಮದಾಗಿದ್ದರೆ ಈ ಎರಡು ಹೊಸ ಪ್ಲಾನ್‌ಗಳ ಬಗ್ಗೆ ತಿಳಿದುಕೊಳ್ಳಿ. ಇಲ್ಲಿ ನಿಮಗೆ ಇಂಟರ್ನೆಟ್, ಅನ್‌ಲಿಮಿಟೆಡ್ ಕಾಲ್ ಜೊತೆ ಸಾವಿರಾರು ಸಿನಿಮಾ, ವೆಬ್‌ ಸಿರೀಸ್ ಹೊಂದಿರುವ ಮನರಂಜನೆಯ ಆಪ್‌ ಆಗಿರುವ ನೆಟ್‌ಫ್ಲಿಕ್ಸ್ ಸಬ್‌ ಸ್ಕ್ರಿಪ್ಷನ್‌ ನಿಮಗೆ ಉಚಿತವಾಗಿ ಸಿಗಲಿದೆ. ಹಾಗಾದ್ರೆ ಆ ಎರಡು ಪ್ಲಾನ್‌ಗಳ ಮಾಹಿತಿ ಇಲ್ಲಿದೆ. 

Latest Videos

undefined

ಸಂಚಲನ ಸೃಷ್ಟಿಸುತ್ತಿದೆ ಏರ್‌ಟೆಲ್‌ 185 ದಿನದ ವ್ಯಾಲಿಡಿಟಿಯ ಹೊಸ ಪ್ಲಾನ್

ಜಿಯೋ 1,299 ರೂಪಾಯಿಯ ನೆಟ್‌ಫ್ಲಿಕ್ಸ್ ಪ್ಲಾನ್!
1,299 ರೂಪಾಯಿಯ ಪ್ರೀಪೇಯ್ಡ್ ರೀಚಾರ್ಜ್‌ ಪ್ಲಾನ್‌ನಲ್ಲಿ ನಿಮಗೆ ಅನ್‌ ಲಿಮಿಟೆಡ್ ವಾಯ್ಸ್ ಕಾಲಿಂಗ್, ಪ್ರತಿದಿನ 2 ಜಿಬಿ ಡೇಟಾ ಮತ್ತು 100 ಎಸ್ಎಂಎಸ್ ಮಾಡಬಹುದು. ಈ ಯೋಜನೆಯ ವ್ಯಾಲಿಡಿಟಿ 84 ದಿನಗಳು ಆಗಿವೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ (ಮೊಬೈಲ್). ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸಬ್‌ಸ್ಕ್ರಿಪ್ಷನ್ ನಿಮಗೆ ಸಿಗಲಿದೆ. ಪ್ರತಿದಿನದ ಡೇಟಾ ಲಿಮಿಟ್ ಮುಗಿಯುತ್ತಿದ್ದಂತೆ ನೆಟ್ ಸ್ಪೀಡ್ 64 Kbps  ಆಗುತ್ತದೆ. ಅನ್‌ಲಿಮಿಟೆಡ್ 5ಜಿ ಡೇಟಾ ಬೆನೆಫಿಟ್ ಸಹ ಸಿಗಲಿದೆ. ಆದ್ರೆ ಜಿಯೋ ಸಿನಿಮಾದ ಪ್ರೀಮಿಯಂ ಆಕ್ಸೆಸ್ ಸಿಗಲ್ಲ. 

ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ ಪ್ರತಿ ತಿಂಗಳು 433 ರೂಪಾಯಿ ವೆಚ್ಚ ತಗಲುತ್ತದೆ. 399 ರೂಪಾಯಿಯ ಪೋಸ್ಟ್‌ಪೇಡ್‌ ಗಿಂತಲೂ ಈ ಯೋಜನೆ ಲಾಭದಾಯಕವಾಗಲಿದೆ. 399 ರೂ.ಯ ಪೋಸ್ಟ್‌ಪೇಡ್ ರೀಚಾರ್ಜ್ ನಿಮಗೆ ಜಿಎಸ್‌ಟಿ ಸೇರಿಸಿದಾಗ 470 ರೂಪಾಯಿಯವರೆಗೆ ಆಗಲಿದೆ. Netflix ಮೊಬೈಲ್ ಪ್ಲಾನ್‌ನಲ್ಲಿ ನಿಮಗೆ 480p ಕ್ವಾಲಿಟಿಯ ಸ್ಟ್ರೀಮ್ ಸಿಗಲಿದೆ.

600 ರೂಪಾಯಿಯ ರೀಚಾರ್ಜ್ ಪ್ಲಾನ್
ಇದರ ಜೊತೆಗೆ ಎಲಿಜಿಬಲ್ ಯೂಸರ್ಸ್‌ಗಳಿಗೆ 5ಜಿ ಡೇಟಾ ಸಹ ಆಫರ್ ಮಾಡಲಾಗುತ್ತಿದೆ. ಈ ಪ್ಲಾನ್‌ನಲ್ಲಿ ನಿಮಗೆ ಜಿಯೋ ಸಿನಿಮಾದ ರೆಗಲ್ಯೂರ್ ಪ್ಲಾನ್ ಸಹ ಲಭ್ಯಾಗುತ್ತದೆ. ಆದ್ರ ಈ ಯೋಜನೆಯಲ್ಲಿ ಜಿಯೋ ಸಿನಿಮಾದ ಪ್ರೀಮಿಯಂ ಕಂಟೆಂಟ್ ಆನಂದ ಸಿಗುವುದಿಲ್ಲ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಲು ನೀವು ತಿಂಗಳಿಗೆ 600 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಯೋಜನೆಯಡಿ ನಿಮಗೆ Netflix ಬೇಸಿಕ್ ಪ್ಲಾನ್‌ನಲ್ಲಿ 720p ವಿಡಿಯೋ ಕ್ವಾಲಿಟಿಯ ಸ್ಟ್ರೀಮ್ ಸಿಗಲಿದೆ. 

ಜಿಯೋದಿಂದ ಮಹತ್ವದ ಘೋಷಣೆ: 3 ತಿಂಗಳು ಅನ್‌ಲಿಮಿಟೆಡ್‌ ಕಾಲ್ ಜೊತೆ ಡೇಟಾ ಪ್ಲಾನ್, ಬೆಲೆ ಜಸ್ಟ್ 1 ರೂಪಾಯಿ

click me!