ಸುರಕ್ಷಿತ ಸಂವಹನೆಗೆ ಹೆಸರಾದ ಟೆಲಿಗ್ರಾಮ್, ಇತ್ತೀಚಿನ ದಿನಗಳಲ್ಲಿ ಸುಲಿಗೆ, ಜೂಜು ಮತ್ತು ಷೇರು ಮಾರುಕಟ್ಟೆ ವಂಚನೆಗಳಂತಹ ಅಪರಾಧ ಚಟುವಟಿಕೆಗಳಲ್ಲಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳನ್ನು ಎದುರಿಸುತ್ತಿದೆ. ಭಾರತ ಸರ್ಕಾರ ಈ ಬಗ್ಗೆ ತನಿಖೆ ನಡೆಸುತ್ತಿದೆ.
ನವದೆಹಲಿ (ಆ.27): ಟೆಲಿಗ್ರಾಮ್ ಗೌಪ್ಯತೆ ಮತ್ತು ಸುರಕ್ಷತೆಯ ಮೇಲೆ ಕೇಂದ್ರೀಕರಿಸಿದ ಜನಪ್ರಿಯ ಮೆಸೇಸ್ ಅಪ್ಲಿಕೇಶನ್ ಎಂದು ಹೆಸರು ಪಡೆದಿದೆ. ಪಾವೆಲ್ ಡುರೊವ್ ಮತ್ತು ನಿಕೊಲಾಯ್ ಡ್ಯುರೊವ್ ಎಂಬ ಸಹೋದರರು 2013 ರಲ್ಲಿ ಟೆಲಿಗ್ರಾಮ್ ಅನ್ನು ಪ್ರಾರಂಭಿಸಿದರು. ಎರಡು ವರ್ಷಗಳ ಹಿಂದೆ 2022 ರಲ್ಲಿ 550 ಮಿಲಿಯನ್ ಟೆಲಿಗ್ರಾಮ್ ಬಳಕೆದಾರರಿದ್ದರು, 2024 ರ ವೇಳೆಗೆ ವಿಶ್ವದಾದ್ಯಂತ 950 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಭಾರತದಲ್ಲಿ ಇದು 5 ಮಿಲಿಯನ್ ನೋಂದಾಯಿತ ಬಳಕೆದಾರರಿದ್ದಾರೆ.
ಇದೀಗ ರಷ್ಯಾ ಮೂಲದ ಫ್ರೆಂಚ್ ಬಿಲಿಯನೇರ್ ಮತ್ತು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರನ್ನು ಶನಿವಾರ ಪ್ಯಾರಿಸ್‌ನ ಹೊರಗೆ ಬೋರ್ಗೆಟ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಖಾಸಗಿ ವಿಮಾನದಲ್ಲಿ ಹೊರಡಲು ಸಿದ್ದರಾದಾಗ ಬಂಧಿಸಲಾಗಿದ್ದು, ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅಪರಾಧ ಚಟುವಟಿಕೆ ನಡೆದಿದ್ದು, ಅದನ್ನು ತಡೆಯಲು ಪ್ರಯತ್ನಿಸಿದ್ದಕ್ಕೆ ಈ ಬಂಧನವಾಗಿದೆ.
undefined
ಬೆಂಗಳೂರು ರೈಲ್ವೆ ಸ್ಟೇಷನ್‌ಗೆ ಬರುವ ವಾಹನ ಸವಾರರಿಗೆ ಬ್ಯಾಡ್ ನ್ಯೂಸ್, ಪಾರ್ಕಿಂಗ್ ಶುಲ್ಕ ಕಡ್ಡಾಯ!
ಇದು ಸುರಕ್ಷಿತ ಸಂವಹನವನ್ನು ಬಯಸುವ ಬಳಕೆದಾರರಿಗೆ ಆದ್ಯತೆಯ ಆಯ್ಕೆಯಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳು ದೇಶದಲ್ಲಿ ಅದರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ. ಸುಲಿಗೆ, ಜೂಜು ಮತ್ತು ಷೇರು ಮಾರುಕಟ್ಟೆ ವಂಚನೆ, ಸ್ಟಾಕ್ ವಂಚನೆಯಂತಹ ಅಪರಾಧ ಚಟುವಟಿಕೆಗಳಲ್ಲಿ ಅಪ್ಲಿಕೇಶನ್‌ನ ದುರ್ಬಳಕೆಯ ಕುರಿತು ಭಾರತ ಸರ್ಕಾರ ತನಿಖೆಯನ್ನು ಪ್ರಾರಂಭಿಸಿದೆ. ಹೀಗಾಗಿ ಭಾರತದಲ್ಲಿ ಇದನ್ನು ನಿಷೇಧಿಸುವ ಊಹಾಪೋಹಗಳಿವೆ.
ಭಾರತದಲ್ಲಿ ಟೆಲಿಗ್ರಾಮ್ ಏಕೆ ನಿಷೇಧಿಸಬಹುದು, ಇಲ್ಲಿದೆ ಕಾರಣಗಳು
ಟಾಟಾ ಸಮೂಹದಿಂದ 4,000 ಮಹಿಳೆಯರಿಗೆ ಉದ್ಯೋಗಾವಕಾಶ, 10ನೇ ತರಗತಿ ಆಗಿದ್ರೆ ಸಾಕು
ಭಾರತದಲ್ಲಿ ಟೆಲಿಗ್ರಾಮ್ ಬ್ಯಾನ್ ಆಗಲಿದೆಯೇ?
ಟೆಲಿಗ್ರಾಮ್‌ನಲ್ಲಿ ಮೇಲೆ ಕ್ರಮದ ಬಗ್ಗೆ ಭಾರತ ಸರ್ಕಾರ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೂ ಇದರ ಮೂಲಕ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಂದಾಗಿ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಸರ್ಕಾರ ಟೆಲಿಗ್ರಾಮ್‌ನ ಚಟುವಟಿಕೆಗಳ ಮೇಲೆ ನಿಗಾ ಇರಿಸಿದೆ. ವರದಿಗಳ ಪ್ರಕಾರ, ಭಾರತೀಯ ಸಂಸ್ಥೆಗಳು ಟೆಲಿಗ್ರಾಮ್ ಅನ್ನು ಬಳಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸುವ ಕೆಲಸದಲ್ಲಿ ತೊಡಗಿವೆ. ಬಳಕೆದಾರರು ಎಚ್ಚರಿಕೆಯಿಂದ ಇರಲು ಸರ್ಕಾರ ಜಾಗೃತಿ ಮೂಡಿಸುತ್ತಿದೆ. ಭಾರತದಲ್ಲಿ ಬ್ಯಾನ್ ಆಗಬಹುದು ಎಂದು ಹೇಳಲಾಗುತ್ತಿದೆ.