ಪುರುಷ ಸಂತತಿಗೆ ಕಾರಣವಾಗುವ ವೈ ವರ್ಣತಂತು ಕ್ಷೀಣಿಸುತ್ತಿದ್ದು, ಭೂಮಿಯ ಮೇಲಿಂದ ಪುರುಷ ಸಂತತಿಯೇ ನಾಶವಾಗುವ ಸಂಭವ ಇರುವ ಆತಂಕಕಾರಿ ವರದಿ ಬಂದಿದೆ. ಏನಿದೆ ಅದರಲ್ಲಿ?
ಹೆಣ್ಣು ಮತ್ತು ಗಂಡು ಎಂದು ನಿರ್ಧರಿತವಾಗುವುದು ಎಕ್ಸ್ ಮತ್ತು ವೈ ವರ್ಣತಂತುಗಳ (Chromosome) ಮೂಲಕ. ಎಕ್ಸ್ ಮತ್ತು ಎಕ್ಸ್ ವರ್ಣತಂತುವಾದರೆ ಹೆಣ್ಣಾಗಿ ಹಾಗೂ ಎಕ್ಸ್ ಮತ್ತು ವೈ ವರ್ಣತಂತುಗಳಾದ ಗಂಡಾಗಿ ಹುಟ್ಟುವುದು ಪ್ರಕೃತಿ ಸಹಜ ನಿಯಮ. ಇದರ ಅರ್ಥ ಹೆಣ್ಣು ಮಕ್ಕಳ ಎಕ್ಸ್ ವರ್ಣತಂತುಗಳಿಗೆ ಗಂಡಸರ ಎಕ್ಸ್ ವರ್ಣತಂತು ಜೋಡಿಕೆಯಾದರೆ ಹೆಣ್ಣು ಮಗು ಹುಟ್ಟುತ್ತದೆ ಹಾಗೂ ಗಂಡಸಿನ ವೈ ವರ್ಣತಂತುಗಳಿಗೆ ಜೋಡಿಕೆಯಾದರೆ ಗಂಡು ಮಗು ಹುಟ್ಟುತ್ತದೆ. ಇದೇ ಕಾರಣಕ್ಕೆ ಮಗು ಹೆಣ್ಣು ಅಥವಾ ಗಂಡಾಗಿ ಹುಟ್ಟುವುದು ಹೆಣ್ಣಿನ ಮೇಲಲ್ಲ, ಬದಲಿಗೆ ಗಂಡಿನ ಮೇಲೆ ನಿರ್ಧರಿತವಾಗಿರುತ್ತದೆ. ಆದರೆ ಇದನ್ನು ತಿಳಿಯದ ಅದೆಷ್ಟೋ ಮಂದಿ ಹೆಣ್ಣು ಹುಟ್ಟಿತು ಎನ್ನುವ ಕಾರಣಕ್ಕೆ ಸೊಸೆಯ ಮೇಲೆ ಇನ್ನಿಲ್ಲದ ಅನಾಚಾರ ಮಾಡುವುದನ್ನು ಕೇಳುತ್ತಿದ್ದೇವೆ, ಸಜೀವವಾಗಿ ದಹಿಸಿರುವ ಘಟನೆಗಳೂ ನಡೆದಿವೆ. ಸೊಸೆ ಬದುಕಿರುವಾಗಲೇ ತಮ್ಮ ಮಗನಿಗೆ ಇದೇ ಕಾರಣಕ್ಕೆ ಮತ್ತೊಂದು ಮದುವೆ ಮಾಡಿರುವ ಘಟನೆಗಳೂ ಇಂದಿಗೂ ನಡೆಯುತ್ತಿವೆ.
ಇಂಥ ತಿಳಿಗೇಡಿ ಕೃತ್ಯ ನಡೆಯುತ್ತಿರುವ ನಡುವೆಯೇ ಇದೀಗ ಮುಂದೊಂದು ದಿನ ಪುರುಷ ಸಂತತಿಯೇ ಈ ಭೂಮಿಯ ಮೇಲೆ ಇರುವುದಿಲ್ಲ ಎನ್ನುವ ಆತಂಕಕಾರಿ ವರದಿಯೊಂದು ಇದೀಗ ಬಿಡುಗಡೆಯಾಗಿದೆ. ಹೌದು! ಗಂಡಾಗಿ ಹುಟ್ಟಲು ಬೇಕಾಗಿರುವ ವೈ ವರ್ಣತಂತು ಭೂಮಿಯ ಮೇಲಿನಿಂದ ಕ್ರಮೇಣ ಕಣ್ಮರೆಯಾಗುತ್ತಿದೆ ಎಂದಿದೆ ವರದಿ. ಪುರುಷ ಲಿಂಗವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ವೈ ಕ್ರೋಮೋಸೋಮ್ ಕುಗ್ಗುತ್ತಿದೆ. ಕಳೆದ 300 ಮಿಲಿಯನ್ ವರ್ಷಗಳಲ್ಲಿ, ಇದು ತನ್ನ ಮೂಲ 1,438 ಜೀನ್‌ಗಳಲ್ಲಿ 1,393 ಅನ್ನು ಕಳೆದುಕೊಂಡಿದೆ, ಈಗ ಕೇವಲ 45 ಜೀನ್‌ಗಳು ಉಳಿದಿವೆ. ಇದೇ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಗಂಡಸರೇ ಇರದ ಭೂಮಿ ಸೃಷ್ಟಿಯಾಗುತ್ತದೆ ಎನ್ನುವುದು ಇದರಲ್ಲಿ ಉಲ್ಲೇಖವಾಗಿದೆ.
undefined
ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!
ಈ ಅಧ್ಯಯನದ ನೇತೃತ್ವ ವಹಿಸಿರುವ, ಜೆನಿಫರ್ ಎ. ಮಾರ್ಷಲ್ ಗ್ರೇವ್ಸ್ ಅವರು, ಈ ಪ್ರವೃತ್ತಿ ಮುಂದುವರಿದರೆ, Y ಕ್ರೋಮೋಸೋಮ್ 11 ಮಿಲಿಯನ್ ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಬಹುದು, ಇದು ಗಂಡು ಸಂತತಿಯ ಭವಿಷ್ಯದ ಬಗ್ಗೆ ಮತ್ತು ಮಾನವ ಉಳಿವಿನ ಬಗ್ಗೆ ಭಯವನ್ನು ಉಂಟುಮಾಡುತ್ತದೆ ಎಂದಿದ್ದಾರೆ. 'ವೈ' ವರ್ಣತಂತುವಿನ ಆನುವಂಶಿಕ ಕೊಳೆಯುವಿಕೆಯಿಂದ ಇದು ಗಾತ್ರದಲ್ಲಿ ಕುಗ್ಗುತ್ತಿದೆ ಎಂದು ಸಂಶೋಧನೆ ದೃಢಪಡಿಸಿದೆ. ಆದರೆ ಗಂಡು ಸಂತತಿಗೆ ಕಾರಣವಾಗಲ್ಲ ವೈ ಕ್ರೊಮೋಸೋಮ್ ಉಂಟುಮಾಡಬಲ್ಲ ಸಂಶೋಧನೆ ಸ್ಪೈನಿ ಇಲಿಗಳ ಮೇಲೆ ಯಶಸ್ವಿಯಾಗಿದೆ. ಮುಂದೊಂದು ದಿನ ಮಾನವನ ಮೇಲೂ ಈ ಪ್ರಯೋಗ ಮಾಡಬೇಕಾಗಿ ಬರಬಹುದು ಎನ್ನಲಾಗಿದೆ.
ವೈ ವರ್ಣತಂತುವಿಗೆ ಇನ್ನೂ ಹಲವು ವಿಶೇಷ ಗುಣಗಳು ಇವೆ. ಇದು ತಂದೆಯಿಂದ ಮಗನಿಗೆ ಬಹುತೇಕ ಬದಲಾಗದೆ ಹಾದುಹೋಗುತ್ತದೆ, ವಿಜ್ಞಾನಿಗಳು ಅನೇಕ ತಲೆಮಾರುಗಳಲ್ಲಿ ತಂದೆಯ ವಂಶಾವಳಿಯನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಇದು ಮಾನವ ಪೂರ್ವಜರನ್ನು ಅರ್ಥಮಾಡಿಕೊಳ್ಳಲು ಮತ್ತು ಕಾಲಾನಂತರದಲ್ಲಿ ಜನಸಂಖ್ಯೆಯು ಹೇಗೆ ವಿಕಸನಗೊಂಡಿತು ಎಂಬುದನ್ನು ಅಧ್ಯಯನ ಮಾಡಲು ಇದು ಅಮೂಲ್ಯವಾದ ಸಾಧನವಾಗಿದೆ.ಪ್ರಾಚೀನ ಮಾನವ ವಲಸೆಯನ್ನು ಪತ್ತೆಹಚ್ಚಲು ಮತ್ತು ನಮ್ಮ ವಿಕಾಸದ ಇತಿಹಾಸವನ್ನು ಅನ್ವೇಷಿಸಲು ಸಹಾಯ ಮಾಡುವುದು ಕೂಡ ಇದೇ ವೈ ವರ್ಣತಂತು. ಆದರೆ ಕ್ರಮೇಣ ಇದು ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಗಂಡಸರು ಭೂಮಿಯ ಮೇಲೆ ಇರುವವರೆಗೆ ಕೇವಲ ಹೆಣ್ಣುಸಂತತಿಯಷ್ಟೇ ಭೂಮಿಯ ಮೇಲೆ ಜನ್ಮ ತಾಳುತ್ತವೆ ಎನ್ನುವುದು ಈ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈತ ಬೆಣ್ಣೆ ಕೃಷ್ಣ ಅಲ್ಲ, ಮೊಬೈಲ್ ಕಿಟ್ಟಪ್ಪ... ನಟಿ ಪ್ರಣಿತಾ ಮುದ್ದುಕಂದನ ಕ್ಯೂಟ್ ವಿಡಿಯೋ ವೈರಲ್