ದಿನಕ್ಕೆ 7 ರೂಪಾಯಿಗಿಂತಲೂ ಕಡಿಮೆಯ ಪ್ಲಾನ್‌, ಅನ್‌ಲಿಮಿಟೆಡ್ ಕಾಲ್ ಜೊತೆ ನೆಟ್, ಬರೋಬ್ಬರಿ 28 ದಿನ ವ್ಯಾಲಿಡಿಟಿ

By Mahmad Rafik  |  First Published Aug 26, 2024, 9:36 PM IST

ಜಿಯೋ ತನ್ನ ಗ್ರಾಹಕರಿಗೆ  ಮತ್ತೊಂದು ಆಫರ್ ನೀಡಿದೆ. ದಿನಕ್ಕೆ 7 ರೂಪಾಯಿಗಿಂತಲೂ  ಕಡಿಮೆ ಬೆಲೆಯದ್ದಾಗಿದೆ. ಅನ್‌ಲಿಮಿಟೆಡ್ ಕಾಲ್ ಜೊತೆ ಮತ್ತಷ್ಟು ಮಗದಷ್ಟು  ಆಫರ್‌ಗಳು ಸಹ ಸಿಗಲಿವೆ.


ಮುಂಬೈ: ಭಾರತದ ಅತಿದೊಡ್ಡ ಜಿಯೋ ರಿಲಯನ್ಸ್ ಟೆಲಿಕಾಂ ಕಂಪನಿ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಕಡಿಮೆ ಬೆಲೆ ಹಲವು ರೀಚಾರ್ಜ್ ಪ್ಲಾನ್‌ಗಳನ್ನು ಘೋಷಿಸುತ್ತಿದೆ. ಟ್ಯಾರಿಫ್ ಬೆಲೆಗಳನ್ನು ಹೆಚ್ಚಿಸಿಕೊಂಡರೂ, ಗ್ರಾಹಕರಿಗೆ ಏರಿಕೆಯ ಹೊಡೆತ ಕಾಣಿಸಿದಂತೆ ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತ ಇತರೆ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್‌, ವೊಡಾಫೋನ್ ಐಡಿಯಾ ಸಹ ತನ್ನ ಟ್ಯಾರಿಫ್ ಪ್ಲಾನ್‌ಗಳಲ್ಲಿ ಬದಲಾವಣೆ ತಂದಿತ್ತು. ಇದೀಗ ಬಿಎಸ್‌ಎನ್ಎಲ್ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದ್ದು, ಹೆಚ್ಚುವರಿ ಬೆನಿಫಟ್‌ಗಳೊಂದಿಗೆ ಆಫರ್ ಪರಿಚಯಿಸುತ್ತಿವೆ. ಇದರ ಭಾಗವಾಗಿ ಜಿಯೋ ಸಹ ದಿನಕ್ಕೆ 7 ರೂಪಾಯಿಗಿಂತಲೂ ಕಡಿಮೆ ಬೆಲೆಯ ಪ್ಲಾನ್ ನೀಡುತ್ತಿದೆ. 

ನಾವು ಹೇಳುತ್ತಿರೋದು ಜಿಯೋ ರಿಲಯನ್ಸ್ ಪ್ರಿಪೇಯ್ಡ್ ಪ್ಲಾನ್ 189 ರೂಪಾಯಿಯ ಕುರಿತು. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳಾಗಿದ್ದು, ಪ್ರತಿದಿನ 7 ರೂಪಾಯಿಗಿಂತಲೂ ಕಡಿಮೆಯಲ್ಲಿ ನಿಮಗೆ ಅನ್‌ಲಿಮಿಟೆಡ್‌ ಕಾಲ್, ಡೇಟಾ, 100 ಎಸ್‌ಎಂಎಸ್ ಹಾಗೂ ಇನ್ನಿತರ ಲಾಭಗಳು ನಿಮಗೆ ಸಿಗಲಿವೆ.

Tap to resize

Latest Videos

undefined

ಜಿಯೋ 189 ರೂಪಾಯಿ ರೀಚಾರ್ಜ್ ಪ್ಲಾನ್
ಪ್ಯಾಕ್ ವ್ಯಾಲಿಡಿಟಿ: 28 ದಿನಗಳು
ಡೇಟಾ: 2 ಜಿಬಿ
ಕಾಲಿಂಗ್: ಅನ್‌ಲಿಮಿಟೆಡ್
ಎಸ್‌ಎಂಎಸ್‌: ಪ್ರತಿದಿನ 100 ಎಸ್‌ಎಂಎಸ್ ಉಚಿತ
ಸಬ್‌ಸ್ಕ್ರಿಪ್ಷನ್: Jio TV, Jio Cinema, Jio Cloud

ಜಿಯೋ ಟೂ ಇನ್ ಒನ್ ಆಫರ್: ಒಂದೇ ಕನೆಕ್ಷನ್‌ನಲ್ಲಿ 2 ಟಿವಿಗಳು, 800+ ಚಾನೆಲ್‌ಗಳು

ಇಂಟರ್‌ನೆಟ್ ಬಳಕೆ ಮಾಡದ ಗ್ರಾಹಕರಿಗೆ ಈ ಯೋಜನೆ ಲಾಭದಾಯಕವಾಗಿದೆ. 28 ದಿನಕ್ಕೆ ಕೇವಲ 2 ಜಿಬಿ ಡೇಟಾ ಮಾತ್ರ ಲಭ್ಯ ಇರಲಿದೆ. ಇಂದಿಗೂ ಹಿರಿಯ ವರ್ಗದ ಜನರು ಕೀಪ್ಯಾಡ್ ಮೊಬೈಲ್‌ಗಳನ್ನು ಬಳಕೆ ಮಾಡುತ್ತಿರುತ್ತಾರೆ. ಇಂತಹ ವರ್ಗದವರಿಗೆ ಇದು ಬೆಸ್ಟ್ ಪ್ಲಾನ್ ಆಗಿದೆ.

14 ದಿನದ ವ್ಯಾಲಿಡಿಟಿ 199 ರೂಪಾಯಿಯ ಪ್ಲಾನ್

14 ದಿನದ ವ್ಯಾಲಿಡಿಟಿ ಕಡಿಮೆ ಅಂತ ಅನ್ನಿಸಿದ್ರೆ 18 ದಿನದ  199 ರೂಪಾಯಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಈ ಪ್ಲಾನ್‌ನಲ್ಲಿಯೂ ನಿಮಗೆ ಹಲವು ಲಾಭ ಸಿಗಲಿವೆ. 189 ರೂಪಾಯಿ ಹೆಚ್ಚು ಜನಪ್ರಿಯವಾಗಿದ್ದು, ಇದು 28 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 2 ಜಿಬಿ ಡೇಟಾ ಸಿಗಲಿದೆ.

ಏರ್‌ಟೈಲ್, ವೊಡಾಫೋನ್ ಐಡಿಯಾಗೆ ಚೆಕ್‌ಮೇಟ್ ಕೊಟ್ಟ ರಿಲಯನ್ಸ್ ಜಿಯೋದ ಡೇಟಾ ಬೂಸ್ಟರ್ ಪ್ಲಾನ್

click me!