ವೈರಲ್ ಆಗಿರೋ FaceAppಗೆ ಕಾದಿದೆ ಗಂಡಾಂತರ?

Published : Jul 18, 2019, 05:57 PM ISTUpdated : Jul 18, 2019, 06:02 PM IST
ವೈರಲ್ ಆಗಿರೋ FaceAppಗೆ ಕಾದಿದೆ ಗಂಡಾಂತರ?

ಸಾರಾಂಶ

ಸುಮಾರು ನೂರು ಮಿಲಿಯನ್ ಡೌನ್‌ಲೋಡ್ ಆಗಿರುವ ಫೋಟೋ ಎಡಿಟಿಂಗ್ ಆ್ಯಪ್ FaceApp ಈಗ ವಿವಾದದ ಸುಳಿಯಲ್ಲಿದೆ. ಈ ಆ್ಯಪ್ ಬಳಕೆಯಿಂದಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ. 

ಬೆಂಗಳೂರು (ಜು.18): ರಾತೋರಾತ್ರಿ ಜನಪ್ರಿಯವಾಗಿ, ನೂರಾರು ಮಿಲಿಯನ್ ಬಳಕೆದಾರರನ್ನು ಹೊಂದಿರುವ FaceAppಗೆ ಕಂಟಕ ಎದುರಾಗಿದೆ.

ಒಂದು ಕಡೆ ತನ್ನ ವಿಶಿಷ್ಟ ‘AIಚಳಕ’ದಿಂದ ರಷ್ಯಾದ FaceApp ಮೋಡಿ ಮಾಡುತ್ತಿದ್ದರೆ, ಇನ್ನೊಂದು ಕಡೆ ತನ್ನ ಶರತ್ತುಗಳ ಕಾರಣದಿಂದ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಮೆರಿಕಾ ರಾಜಕೀಯ ನಾಯಕರು, FBI ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಹುಚ್ಚೆಬ್ಬಿಸಿದೆ FaceApp, ಭಯ ಹುಟ್ಟಿಸಿದೆ ಅದರ ಶರತ್ತು!

ಅಮೆರಿಕಾ ಪ್ರಜೆಗಳ ವೈಯುಕ್ತಿಕ ಮಾಹಿತಿ ವಿದೇಶಿ ಕೈಗಳಿಗೆ ಸಿಗುತ್ತಿರುವುದು ಕಳವಳಕಾರಿಯೆಂದು ಸೆನೆಟ್ ನಾಯಕ ಚಕ್ ಸ್ಕ್ಯೂಮರ್ ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ ಮತ್ತು ವೈಯುಕ್ತಿಕ ಮಾಹಿತಿಗೆ ಅಪಾಯವಿರುವ ಹಿನ್ನೆಲೆಯಲ್ಲಿ FBIಯು ರಷ್ಯಾದ ಈ ಆ್ಯಪ್ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಆದರೆ FaceApp ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ತಾವು ಯಾವುದೇ ಮಾಹಿತಿಯನ್ನು ಶಾಶ್ವತವಾಗಿ  ಸಂಗ್ರಹಿಸಿಡಲ್ಲ ಎಂದು ಹೇಳಿದೆ.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು FaceApp ಬಳಸಬಾರದು ಎಂದು  ಅಮೆರಿಕಾದ ಡೆಮಾಕ್ರೆಟಿಕ್ ನ್ಯಾಶನಲ್ ಕಮಿಟಿಯು ಈ ಹಿಂದೆ ಕರೆ ನೀಡಿತ್ತು. 

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾಗಳ ಮೂಲಕ ರಷ್ಯಾ  ಹಸ್ತಕ್ಷೇಪ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು.  

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌