
ಪ್ರಸ್ತುತ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲೇ ಅತಿ ಹೆಚ್ಚು ಅಂದರೆ 512 ಜಿಬಿ ಮೆಮೋರಿ ಸಾಮರ್ಥ್ಯದ ಮೊಬೈಲ್‌ಗೆ ಪ್ರೀ ಬುಕ್ಕಿಂಗ್ ಶುರುವಾಗಿದೆ.
ಸ್ಯಾಮ್‌ಸಂಗ್ ತನ್ನ ಗ್ಯಾಲಾಕ್ಸಿ ನೋಟ್ ಸೀರಿಸ್‌ನಲ್ಲಿ ‘ಫ್ಲ್ಯಾಗ್‌ಶಿಪ್ ನೋಟ್ 9’ ಹೆಸರಿನಲ್ಲಿ ಮೊಬೈಲ್ ಲಾಂಚ್ ಮಾಡಿದ್ದು, ಇದು ಸೆಪ್ಟೆಂಬರ್ ಆರಂಭದಲ್ಲಿ ಗ್ರಾಹಕರ ಕೈ ಸೇರಲಿದೆ.
ಈ ನಿಟ್ಟಿನಲ್ಲಿ ಪ್ರೀ ಬುಕ್ಕಿಂಗ್ ಆಗಸ್ಟ್ 9ರಿಂದಲೇ ಆರಂಭವಾಗಿದೆ. ನೀವೂ ಕೂಡ ಸ್ಯಾಮ್‌ಸಂಗ್ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಿ 67,900 ರುಪಾಯಿಯ 128 ಜಿಬಿ ಮೊಬೈಲ್, 84900 ರುಪಾಯಿಯ 512 ಜಿಬಿ ಮೊಬೈಲ್ ಬುಕ್ ಮಾಡಿಕೊಳ್ಳಬಹುದು.
ಪ್ರೀ ಬುಕ್ಕಿಂಗ್‌ಗಾಗಿ ಕಂಪನಿ 6000 ರು. ಕ್ಯಾಶ್‌ಬ್ಯಾಕ್ ಆಫರ್ ಘೋಷಣೆ ಮಾಡಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.