First Tesla Baby: ಆಟೋಪೈಲಟ್‌ನಲ್ಲಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

By Suvarna News  |  First Published Dec 21, 2021, 10:49 AM IST

*ಟ್ರಾಫಿಕ ಸಮಸ್ಯೆ ಎಂದು ಟೆಸ್ಲಾ ಕಾರು ಆಟೋಪೈಲೆಟ್‌ಗೆ 
*ಮುಂಭಾಗದ ಸೀಟಿನಲ್ಲೇ ಮಗುವಿಗೆ ಜನ್ಮ ನೀಡಿ ಮಹಿಳೆ
*ಕಾರಿನಲ್ಲಿ ಜನಿಸಿದ 'ಮೊದಲ ಟೆಸ್ಲಾ ಬೇಬಿ' ಎಂದು ಕರೆದ ನೆಟ್ಟಿಗರು


Tech Desk: ಫಿಲಡೆಲ್ಫಿಯಾದಲ್ಲಿ ಮಹಿಳೆಯೊಬ್ಬರು ತನ್ನ ಎಲೆಕ್ಟ್ರಿಕ್ ಕಾರ್‌ ಆಟೋಪೈಲಟ್‌ನಲ್ಲಿ (Tesla on Autopilot) ಚಲಿಸುತ್ತಿದ್ದಾಗ ಮುಂಭಾಗದ ಸೀಟಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್‌ನಲ್ಲಿ 9 2021 ರಂದು ಈ ಘಟನೆ ನಡೆದಿದೆ. ಟೆಸ್ಲಾ ಕಾರಿನಲ್ಲಿ ಜನಿಸಿದ್ದರಿಂದ ಈ ಮಗುವನ್ನು 'ಮೊದಲ ಟೆಸ್ಲಾ ಬೇಬಿ' ಎಂದು ಕರೆಯಲಾಗುತ್ತಿದೆ. ಫಿಲಡೆಲ್ಫಿಯಾ ನಿವಾಸಿ 33 ವರ್ಷದ ಯಿರಾನ್ ಶೆರ್ರಿ (Yiran Sherry) ತನ್ನ 34 ವರ್ಷದ ಪತಿ ಕೀಟಿಂಗ್  (Keating) ಮತ್ತು ಮೂರು ವರ್ಷದ ಮಗ ರಾಫಾ ( Rafa) ಅವರೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಅವರ ಕಾರು ಟ್ರಾಫೀಕ್‌ ನಲ್ಲಿ ಸಿಲುಕಿಕೊಂಡಿದೆ. ತಕ್ಷಣ ತನ್ನ ಕಾರನ್ನು ಆಟೋಪೈಲಟ್‌ಗೆ ಹಾಕಿದ ಪತಿ, ಪತ್ನಿಯ ಬಳಿ ಗಮನಹರಿಸಿದ್ದಾರೆ. ಟ್ರಾಫಿಕ್ ತೊಂದರೆಯಿಂದ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಮಹಿಳೆ ಟೆಸ್ಲಾ ಕಾರಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

"ಪತಿ ಕೀಟಿಂಗ್  ಆಸ್ಪತ್ರೆಯನ್ನು ತಲುಪಲು  ಧಾವಂತದಲ್ಲಿ ಆಟೋಪೈಲಟ್ ಅನ್ನು ಬಳಸಿದರು. ಆದರೆ ಆ ಮಗುವಗೆ ಕಾರಿನಲ್ಲೆ ಜನ್ಮ ತಾಳುವ ಯೋಗವಿತ್ತು. ಹಾಗಾಗಿ ಕಾರು ಆಸ್ಪತ್ರೆ ತಲುಪಲಿಲ್ಲ.ಅವಳ ತಲೆ ಹೊರಬರುತ್ತಿದೆ ಎಂದು ನನಗೆ ಅನಿಸುತ್ತಿದೆ" ಎಂದು ನಾನು ಕೀಟಿಂಗ್ ಹೇಳುತ್ತಿದ್ದೆ ಆದರೆ ನಾನು ಸ್ಕ್ರೀನ್‌ ಮೇಲಿದ್ದ ಮ್ಯಾಪ್ ಮೇಲೆ ಹೆಚ್ಚು ಗಮನಹರಿಸಿದ್ದೆ”ಎಂದು 33 ವರ್ಷದ ತಾಯಿ ನೆನಪಿಸಿಕೊಂಡಿದ್ದಾರೆ.  

Tap to resize

Latest Videos

undefined

 

My wife courageously delivered our baby girl, Maeve, in the front seat of our ⁦⁩ model 3 en route to the hospital - here’s the story ⁦⁩ ! ⁦⁦⁩ ⁦ thx for the autopilot⁩ 🤝💯 https://t.co/JPMfh7AyhN

— Keating Sherry (@KeatingSherry)

 

ಈ ಸಮಯದಲ್ಲಿ  ಪೋಷಕರು ನಿಸ್ಸಂಶಯವಾಗಿ ಗೊಂದಲಕ್ಕೊಳಗಾಗಿದ್ದರೇ ಇತ್ತ ದಂಪತಿಗಳ 3 ವರ್ಷದ ಮಗ ರಾಫಾ ಫಿಲಡೆಲ್ಫಿಯಾ ಇನ್‌ಕ್ವೈರರ್‌ನೊಂದಿಗೆ ಮಾತನಾಡುತ್ತಾ,  ಹಿಂದಿನ ಸೀಟಿನಲ್ಲಿ ಕುಳಿತೊಕೊಂಡಿದ್ದ. ಮಹಿಳೆಯು ಆರಂಭದಲ್ಲಿ ತನ್ನ ಮಗನನ್ನು ಪ್ರಿಸ್ಕೂಲ್‌ಗೆ ಬಿಟ್ಟು ನಂತರ ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ತನ್ನ ಪತಿಗೆ ಹೇಳಿದ್ದಾರೆ. ಆದರೆ ಆಸ್ಪತ್ರೆಯ ಮಾರ್ಗದಲ್ಲಿ ವಿಪರೀತ ಟ್ರಾಫಿಕ್‌ ಇತ್ತು ಎಂದು ಮಕ್ಕಳ ತಂದೆ ಹೇಳಿದ್ದಾರೆ. " ಈ ವೇಳೆ ನಾನು ಯಿರಾನ್‌ಗೆ  ಉಸಿರಾಟದ ಮೇಲೆ ಗಮನಹರಿಸುವಂತೆ ಹೇಳುತ್ತಿದ್ದೆ. ಅದರೆ ಅದು ನನಗೂ ಕೂಡ ಸಲಹೆಯಾಗಿತ್ತು. ನನ್ನ ಅಡ್ರಿನಾಲಿನ್ ಕೂಡ ಹೆಚ್ಚುತಿತ್ತು , 'ರಾಫಾ, ಎಲ್ಲವೂ ಸರಿಯಾಗಿದೆ. ನಿನ್ನ ತಂಗಿ ಬರುತ್ತಿದ್ದಾಳೆ ನಾನು ಹೇಳಿದೆ’ ಎಂದು ಪತಿ ತಿಳಿಸಿದ್ದಾರೆ.

Tesla CEO Elon Musk ಪ್ರತಿಷ್ಠಿತ ಟೈಮ್‌ ಮ್ಯಾಗಝೀನ್ ವರ್ಷದ ವ್ಯಕ್ತಿ!

ವಿಶ್ವದ ನಂ.1 ಶ್ರೀಮಂತ ಖ್ಯಾತಿಯ ಟೆಸ್ಲಾ (Tesla) ಕಂಪನಿಯ ಸಂಸ್ಥಾಪಕ ಸಿಇಒ ಎಲಾನ್‌ ಮಸ್ಕ್‌ (Elon Musk) ಅವರು ಅಮೆರಿಕದ ಪ್ರತಿಷ್ಠಿತ ‘ಟೈಮ್‌’ ನಿಯತಕಾಲಿಕೆಯ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ( Person of the Year). ಮಸ್ಕ್‌ ಅವರ ನೇತೃತ್ವದ ಎಲೆಕ್ಟ್ರಿಕ್‌ ಕಾರು ಕಂಪನಿ ವಿಶ್ವದಲ್ಲೇ ಅತ್ಯಮೂಲ್ಯದ ಕಾರು ಕಂಪನಿ ಎಂಬ ಕೀರ್ತಿಗೆ ಭಾಜನವಾಗಿತ್ತು. ಪ್ರಪಂಚದಲ್ಲಿರುವ  ಸವಾಲುಗಳು ಮತ್ತು ಬಿಕ್ಕಟ್ಟುಗಳಿಗೆ ಉತ್ತಮ ಪರಿಹಾರಗಳನ್ನು ಹುಡುಕುವುದರ ಜತೆಗ ಸಮಾಜದಲ್ಲಿ ಹೆಚ್ಚಿನ ಧೈರ್ಯಶಾಲಿ ಪ್ರೊಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಮಸ್ಕ್‌ ಅವರನ್ನು ಟೈಮ್‌-2021ರ ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಟೈಮ್‌ ನಿಯತಕಾಲಿಕೆಯ ಪ್ರಧಾನ ಸಂಪಾದಕ ಎಡ್ವರ್ಡ್‌ ಫೆಲ್ಸೆಂಥಲ್‌ (Edward Felsenthal) ಅವರು ತಿಳಿಸಿದ್ದಾರೆ.

2002ರಲ್ಲಿ ಸ್ಥಾಪನೆ ಮಾಡಿದ ಸ್ಪೇಸ್‌ಎಕ್ಸ್‌ನಿಂದ (SpaceX) ಹಿಡಿದು ಪರ್ಯಾಯ ಇಂಧನ ಕಂಪನಿಯಾದ ಸೋಲಾರ್‌ ಸಿಟಿ (Solar City) ಹಾಗೂ ವಿಶ್ವದಲ್ಲೇ ಅತ್ಯಮೂಲ್ಯವಾದ ಕಾರು ಕಂಪನಿಯನ್ನು ಮಸ್ಕ್‌ ಹೊಂದಿದ್ದಾರೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಕಂಪನಿ ಪರ ಹೂಡಿಕೆ ಮಾಡುವ ಸಾಹಸಿ ನಿಷ್ಠಾವಂತ ಹೂಡಿಕೆದಾರರ ಬಳಗವನ್ನು ಹೊಂದಿದ್ದಾರೆ ಎಂದು ಶ್ಲಾಘಿಸಲಾಗಿದೆ. 22 ಲಕ್ಷ ಕೋಟಿ ರು. (300 ಬಿಲಿಯನ್‌ ಡಾಲರ್‌)ನೊಂದಿಗೆ ಮಸ್ಕ್‌ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬಿಜೋಸ್‌ ಅವರನ್ನು ಹಿಂದಿಕ್ಕಿ, ಜಗತ್ತಿನ ನಂ.1 ಶ್ರೀಮಂತರಾಗಿದ್ದರು.

ಇದನ್ನೂ ಓದಿ:

1) Satellites Launchedಆಕಾಶದಲ್ಲಿ ಕೃತಕ ಉಪಗ್ರಹಗಳ ಮೆರವಣಿಗೆ, 12 ಸಾವಿರ ಉಪಗ್ರಹ ಯೋಜನೆಗೆ ಎಲನ್ ಮಸ್ಕ್ ಚಾಲನೆ!

2) ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇರ್‌ ಕಟ್‌ ಹೇಗೆ ಮಾಡ್ತಾರೆ ಗೊತ್ತಾ... ಈ ವಿಡಿಯೋ ನೋಡಿ

3) Sound from Ganymede: ಸೌರವ್ಯೂಹದ ಅತಿದೊಡ್ಡ ಚಂದ್ರನ ಶಬ್ದ ಸೆರೆಹಿಡಿದ ನಾಸಾದ ಜುನೋ ಮಿಷನ್: ಇಲ್ಲಿದೆ ಆಡಿಯೋ!

click me!