ಏ.1ರಿಂದಲೇ ಹಣ ಪಾವತಿಸುವ ಈ ಆ್ಯಪ್‌ ಸೇವೆ ಬಂದ್

By Kannadaprabha NewsFirst Published Feb 6, 2021, 9:11 AM IST
Highlights

ಡಿಜಿಟಲ್‌ ಪಾವತಿ ಸೇವೆ ಕಲ್ಪಿಸುವ  ಈ ಮೊಬೈಲ್‌ ಆ್ಯಪ್‌ ಸೇವೆ ಏಪ್ರಿಲ್‌ 1ರಿಂದ ಭಾರತದಲ್ಲಿ ಬಂದ್‌ ಆಗಲಿದೆ.  ಯಾವುದು ಅದು..?

ನವದೆಹಲಿ (ಫೆ.06): ಡಿಜಿಟಲ್‌ ಪಾವತಿ ಸೇವೆ ಕಲ್ಪಿಸುವ ಪೇಪಾಲ್‌ ಎಂಬ ಮೊಬೈಲ್‌ ಆ್ಯಪ್‌ ಸೇವೆ ಏಪ್ರಿಲ್‌ 1ರಿಂದ ಭಾರತದಲ್ಲಿ ಬಂದ್‌ ಆಗಲಿದೆ. 

ಅಮೆರಿಕ ಮೂಲದ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಾರಾಟದ ಮೇಲೆ ಹೆಚ್ಚಿನ ಗಮನ ಹರಿಸಲಿದೆ ಎನ್ನಲಾಗಿದೆ. 

296 ಮೊಬೈಲ್‌ ಆ್ಯಪ್‌ ನಿಷೇಧ : ಕೇಂದ್ರ ಸರ್ಕಾರ ...

ಈ ಬಗ್ಗೆ ಪ್ರತಿಕ್ರಿಯಿಸಿದ ಪೇಪಾಲ್‌ ವಕ್ತಾರರು, ‘ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ಉತ್ಪನ್ನಗಳ ಮೇಲೆ ಹೆಚ್ಚಿನ ಹೂಡಿಕೆಯನ್ನು ಸಂಸ್ಥೆ ಮುಂದುವರಿಸಲಿದೆ. 

ತನ್ಮೂಲಕ ವಿಶ್ವಾದ್ಯಂತ ಪೇಪಾಲ್‌ ಗ್ರಾಹಕರ ಸಂಖ್ಯೆಯನ್ನು 35 ಕೋಟಿ ಗ್ರಾಹಕರನ್ನು ತಲುಪುವ ಗುರಿಯಿದೆ. ಜೊತೆಗೆ ಭಾರತದ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುವುದು ನಮ್ಮ ಗುರಿಯಾಗಿದೆ’ ಎಂದಿದ್ದಾರೆ.

click me!