18 ತಿಂಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಆರಂಭ!

By Suvarna News  |  First Published Feb 5, 2021, 10:34 PM IST

ಜಮ್ಮು ಮತ್ತು ಕಾಶ್ಮೀರ ಮಂದಿಯ ಸಂತಸ ಇಮ್ಮಡಿಗೊಂಡಿದೆ. ಕಳೆದ 18 ತಿಂಗಳಿನಿಂದ ಸ್ಥಗಿತಗೊಂಡಿದ್ದ ಇಂಟರ್ನೆಟ್ ಸೇವೆ ಮತ್ತೆ ಆರಂಭಗೊಂಡಿದೆ. ಈ ಕುರಿತ ವಿವರ ಇಲ್ಲಿದೆ.
 


ಶ್ರೀನಗರ(ಫೆ.05): ಬರೋಬ್ಬರಿ 18 ತಿಂಗಳ ಬಳಿಕ ಜಮ್ಮ ಮತ್ತು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಸೇವೆ ಪುನರ್ ಆರಂಭಗೊಂಡಿದೆ. ಶುಕ್ರವಾರ(ಫೆ.05) ಮಧ್ಯರಾತ್ರಿಯಿಂದಲೇ 4ಜಿ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ವಕ್ತಾರ ಹೇಳಿದ್ದಾರೆ.

ಜಮ್ಮು - ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ, ಕೇಂದ್ರದ ಮಹತ್ವದ ಹೆಜ್ಜೆ!.

Tap to resize

Latest Videos

ಜಮ್ಮ ಮತ್ತು ಕಾಶ್ಮೀರದ  ವಿಶೇಷ ಸ್ಥಾನಮಾನ ರದ್ದುಗೊಳಿಸುವ(ಆರ್ಟಿಕಲ್ 370) ವೇಳೆ ಮುಂಜಾಗ್ರತ ಕ್ರಮವಾಗಿ ಜಮ್ಮು ಮತು ಕಾಶ್ಮೀರದಾದ್ಯಂತ 4ಜಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಅಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ 18 ತಿಂಗಳ  ಬಳಿಕ  ಇಂಟರ್ನೆಟ್ ಸೇವೆ ಪುನರ್ ಆರಂಭಗೊಳ್ಳುತ್ತಿದೆ.

370ನೇ ವಿಧಿ ರದ್ದಾಗಿ ಒಂದು ವರ್ಷ: ಜಮ್ಮು- ಕಾಶ್ಮೀರದಾದ್ಯಂತ ಕರ್ಫ್ಯೂ ಜಾರಿ!

ವಿಶ್ವದಲ್ಲೇ ಸುದೀರ್ಘ ದಿನ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ ಪಟ್ಟಿಗೆ ಇದೀಗ ಜಮ್ಮು ಮತ್ತು ಕಾಶ್ಮೀರ ಸೇರಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ  ಆರ್ಟಿಕಲ್ 370 ರದ್ದತಿ ಕಾರಣ, ಜಮ್ಮು ಮತ್ತು ಕಾಶ್ಮೀರದ ಹಲವು ನಾಯಕರನ್ನು ಗೃಹ ಬಂಧನದಲ್ಲಿಡಲಾಗಿತ್ತು. 

click me!