ಸಿಲಿಕಾನ್ ಸಿಟಿಯಲ್ಲಿ ಹೊಸ Oneplus ಬಿಡುಗಡೆ! ಭಾಗವಹಿಸಿ Surprise ಆಗಿ!

By Web Desk  |  First Published Apr 24, 2019, 1:50 PM IST

2019 ರ ಮೇ 14 ರಂದು BIEC ನಡೆಯಲಿರುವ ಕಾರ್ಯಕ್ರಮ | ವಿಶ್ವದಾದ್ಯಂತ 8 ಸಾವಿರಕ್ಕೂ ಅಧಿಕ Oneplus ಪ್ರತಿನಿಧಿಗಳು ಭಾಗಿ | ಸಾರ್ವಜನಿಕರ ಪ್ರವೇಶಕ್ಕೆ ಏಪ್ರಿಲ್ 25 ರಂದು ಆನ್‌ಲೈನ್ ನೋಂದಣಿ
 


ಬೆಂಗಳೂರು : ಜನಪ್ರಿಯ ಮೊಬೈಲ್ ಕಂಪನಿಯಾಗಿರುವ Oneplus ತನ್ನ ಹೊಸ ಸ್ಮಾರ್ಟ್‌ಫೋನನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದೆ. ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ (BIEC) ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೂ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ.

Oneplus ಹೊಸ ಫೋನನ್ನು ಮುಂಬರುವ ಮೇ 14 ರಂದು ಸಂಜೆ 8.15ಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕೌಶಲ್ಯ, ವೈಶಿಷ್ಟ್ಯತೆ ಹಾಗೂ  ತಂತ್ರಜ್ಞಾನವನ್ನೊಳಗೊಂಡ ಹೊಸ ಡಿವೈಸನ್ನು ಪರಿಚಯಿಸಲಾಗುವುದು. ಬಿಡುಗಡೆ ಕಾರ್ಯಕ್ರಮದಲ್ಲಿ Oneplus ಸಿಬ್ಬಂದಿ ಮತ್ತು ಸಂಬಧಪಟ್ಟ ಕ್ಷೇತ್ರದ ಮಂದಿಯನ್ನು ಭೇಟಿ ಮಾಡುವ, ಅವರೊಡನೆ ಸಂವಾದ ನಡೆಸುವ, ಹಾಗೂ ಹೊಸ ಹೊಸ ಉತ್ಪನ್ನಗಳ ಪ್ರಾತ್ಯಕ್ಷಿಕೆಯನ್ನೂ ವೀಕ್ಷಿಸುವ ಅವಕಾಶವೂ ಇದೆ. ಸಾರ್ವಜನಿಕರು ಅದಕ್ಕಾಗಿ  ನೋಂದಣಿ ಮಾಡಿಸಿಕೊಳ್ಳಬೇಕು.

Tap to resize

Latest Videos

ಇದನ್ನೂ ಓದಿ: ಇಲ್ಲಿಯೂ ಒನ್‌ಪ್ಲಸ್ ನಂಬರ್‌ 1, ಮಾರುಕಟ್ಟೆ ಓಟಕ್ಕಿಲ್ಲ ಬ್ರೇಕ್

2019 ರ ಏಪ್ರಿಲ್ 25 ರಂದು ಬೆಳಗ್ಗೆ 10 ಗಂಟೆಯಿಂದ Oneplus.in ನಲ್ಲಿ ಕಾರ್ಯಕ್ರಮಗಳ ಪ್ರವೇಶಪತ್ರಗಳನ್ನು ಪಡೆಯಬಹುದಾಗಿದೆ.

ನೂತನ ಮೈಲಿಗಲ್ಲು ಸ್ಥಾಪಿಸುವ ಈ ಕಾರ್ಯಕ್ರಮದಲ್ಲಿ Oneplusಗೆ ಒಂದು ರೂಪ ಕೊಡುವಲ್ಲಿ ಶ್ರಮಿಸಿದ Oneplus ಸಮುದಾಯವು ಕಾರ್ಯಕ್ರಮಲ್ಲಿ ಭಾಗವಹಿಸಲಿದೆ. Oneplus ಕಂಪನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ರೂಪದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿಶ್ವದಾದ್ಯಂತದ Oneplusನ 8000 ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಭಾರತವಷ್ಟೇ ಅಲ್ಲ, ಯುಎಸ್‌ಎ ಮತ್ತು ಯೂರೋಪ್‌ ಕೂಡಾ ಈ ಹೊಸ ಡಿವೈಸ್‌ಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿವೆ.

ಇದನ್ನೂ ಓದಿ: OnePlusನ ಮೊದಲ 5G ಸ್ಮಾರ್ಟ್‌ಫೋನ್ ಫೋಟೋ ಲೀಕ್! ಹೀಗಿದೆ 'OnePlus 7'

ಈ ಅತ್ಯದ್ಭುತವಾದ Oneplus ಫ್ಲ್ಯಾಗ್‌ಶಿಪ್ ಬಿಡುಗಡೆ ಸಮಾರಂಭವನ್ನು ತಪ್ಪಿಸಿಕೊಳ್ಳಬೇಡಿ. ಅಂದ ಹಾಗೇ,  ಕಾರ್ಯಕ್ರಮದಲ್ಲಿ ಲಭ್ಯವಿರುವ ಗುಡೀಸ್ ಅನ್ನೂ ನೀವು ಪಡೆದುಕೊಳ್ಳಬಹುದಾಗಿದೆ. ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗದಿರುವ ಮಂದಿಗೆ https://www.oneplus.in/ ಮೂಲಕ ನೇರಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.

click me!