ಭಾರತ ದೂರ ಸಂಚಾರ ನಿಗಮ ತನ್ನ ಗ್ರಾಹಕರಿಗೊಂದು ನ್ಯೂಸ್ ನೀಡಿದೆ. ಲಾಂಗ್ ವ್ಯಾಲಿಡಿಟಿಯ ಎರಡು ಯೋಜನೆಗಳನ್ನು ಸ್ಥಗಿತ ಮಾಡಿದೆ.
ನವದೆಹಲಿ[ಮಾ. 15] ಭಾರತ ದೂರ ಸಂಚಾರ ನಿಗಮ ಎರಡು ಯೋಜನೆಗಳನ್ನು ಸ್ಥಗಿತ ಮಾಡಿದೆ. ರೂ. 999 ಮತ್ತು ರೂ. 2099 ರ ಪ್ರೀಪೇಯ್ಡ್ ಯೋಜನೆಗಳನ್ನು ಬಂದ್ ಮಾಡಿದೆ.
ಯಾವ ಕಾರಣಕ್ಕೆ ಈ ಯೋಜನೆ ಸ್ಥಗಿತ ಮಾಡಲಾಗುತ್ತಿದೆ ಎಂದು ಬಿಎಸ್ ಎನ್ ಎಲ್ ತಿಳಿಸಿಲ್ಲ. ಆದರೆ 666 ರೂ. ಗಳ: ಸಿಕ್ಸರ್ ಪ್ಲಾನ್ ಹಾಗೆ ಇರಿಸಿಕೊಳ್ಳಲಾಗಿದ್ದು 134 ದಿಗಳ ಹೆಚ್ಚುವರಿ ವ್ಯಾಲಿಡಿಟಿ ನೀಡಲು ಮುಂದಾಗಿದೆ.
ಸಿಕ್ಸರ್ ಪ್ಲಾನ್ ದಿನಕ್ಕೆ 3.74 ಜಿಬಿ ಡಾಟಾ ನೀಡಲಿದೆ. 100 ಎಸ್ ಎಂಸ್ ದಿನಕ್ಕೆ ಉಚಿತವಾಗಿದ್ದು ನನ್ ಲಿಮಿಟೆಡ್ ಕರೆ ಅವಕಾಶ ಇದೆ. ಇನ್ನು ವಾರ್ಷಿಕ 1699 ರೂ. ಯೋಜನೆ ಹಾಗೆ ಇರಲಿದೆ.