ಆಧಾರ್ ಮೂಲಕ ಪಡೆದ ಸಿಮ್ ಕಾರ್ಡ್ ಡಿಸ್‌ಕನೆಕ್ಟ್ ಆಗುತ್ತಾ?

By Web DeskFirst Published Oct 18, 2018, 9:31 PM IST
Highlights

ಕಳೆದ ಸೆಪ್ಟಂಬರ್ ನಲ್ಲಿ ಆಧಾರ್ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆಧಾರ್ ಸಂಯೋಜಿತ eKYC ಮೂಲಕ ಸಿಮ್ ಕಾರ್ಡ್ ಪಡೆದವರ ಸೇವೆ ಸ್ಥಗಿತಗೊಳಿಸಲಾಗುತ್ತದೆ ಎಂಬ ವದಂತಿ ಬಗ್ಗೆ UIDAI ಹಾಗೂ DoT ಸ್ಪಷ್ಟೀಕರಣ ನೀಡಿದೆ.  

ನವದೆಹಲಿ: ಆಧಾರ್ ಕಾರ್ಡ್ ನೀಡಿ ಪಡೆದ ದೇಶದ 50 ಕೋಟಿ ಮೊಬೈಲ್ ಗ್ರಾಹಕರ ಸಿಮ್ ಕಾರ್ಡ್ ಡಿಆಕ್ಟಿವೇಟ್ ಆಗುತ್ತಾ? ಎಂಬ ಮಾತುಗಳು ಕೇಳಿಬಂದಿವೆ.  ಅದರ ಬೆನ್ನಲ್ಲೇ, ಆಧಾರ್ [UIDAI] ಪ್ರಾಧಿಕಾರ ಹಾಗೂ ದೂರಸಂಪರ್ಕ ಇಲಾಖೆ [DoT]ಜಂಟಿಯಾಗಿ ಸ್ಪಷ್ಟೀಕರಣ ನೀಡಿದ್ದು, ಇದೊಂದು ಬರೇ ವದಂತಿಯಾಗಿದೆ, ಮೊಬೈಲ್ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಿದೆ.

ಆಧಾರ್ ಸಂಖ್ಯೆ ಒದಗಿಸಿ [ಆಧಾರ್ ವೆರಿಫಿಕೇಶನ್], ಇ-ಕೆವೈಸಿ ಮೂಲಕ ಸಿಮ್ ಪಡೆದ ಗ್ರಾಹಕರ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಅಂತಹ ಗ್ರಾಹಕರು ಮತ್ತೊಮ್ಮೆ ಎಲ್ಲಾ ದಾಖಲೆಗಳನ್ನು ಒದಗಿಸಿ ಮತ್ತೊಮ್ಮೆ  ತಮ್ಮ ಸಿಮ್ ಕಾರ್ಡ್ ಸಂಪರ್ಕವನ್ನು ಪಡೆಯಬೇಕಾಗುತ್ತದೆ, ಎಂಬ ವದಂತಿ ಹರಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ DoT ಹಾಗೂ ಆಧಾರ್ ಪ್ರಾಧಿಕಾರ, ಸ್ಪಷ್ಟೀಕರಣ ನೀಡಿದ್ದು, ಸುಪ್ರೀಂ ಕೋರ್ಟ್ ಆದೇಶದಲ್ಲಿ ಅಂತಹ ಯಾವುದೇ ನಿರ್ದೇಶನವಿಲ್ಲ. ಗ್ರಾಹಕರು ಆತಂಕಗೊಳ್ಳಬೇಕಾಗಿಲ್ಲ ಎಂದು ಹೇಳಿವೆ.

ಆಧಾರ್ ವೆರಿಫಿಕೇಶನ್ ಮೂಲಕ  ಸೇವೆ ಒದಗಿಸುವುದನ್ನು ನಿಲ್ಲಿಸಲು ಸುಪ್ರೀಂ ನೀಡಿರುವ ಆದೇಶವನ್ನು ಜಾರಿಗೊಳಿಸಲು ಟೆಲಿಕಾಂ ಸಂಸ್ಥೆಗಳಿಗೆ ಅ.15ರವರೆಗೆ ಕಾಲಾವಕಾಶ ನೀಡಲಾಗಿದೆ, ಎಂದು DoT ಮತ್ತು ಆಧಾರ್ ಪ್ರಾಧಿಕಾರ ಈ ಸಂದರ್ಭದಲ್ಲಿ ಹೇಳಿವೆ.

ಒಂದು ವೇಳೆ ಗ್ರಾಹಕರು ಆಧಾರ್ ಮೂಲಕ ಮಾಡಿರುವ eKYCಯನ್ನು ಹಿಂಪಡೆದು, ಇತರ ದಾಖಲೆಪತ್ರಗಳ ಮೂಲಕ KYC ಮಾಡಬಯಯಸಿದರೆ ಅದಕ್ಕೂ ಅವಕಾಶವಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅವರು ಆಧಾರ್ ಡೀಲಿಂಕ್ ಮಾಡಬಹುದಾಗಿದೆ. ಯಾವುದೇ ಕಾರಣಕ್ಕೂ ಮೊಬೈಲ್ ಸೇವೆ ಸ್ಥಗಿತವಾಗದು ಎಂದು ಇಲಾಖೆಯು ಹೇಳಿದೆ.

ಮುಂದುವರಿದು, ಆಧಾರ್ ಸಂಯೋಜಿತ eKYC ಮಾಹಿತಿಯನ್ನು ಟೆಲಿಕಾಂ ಕಂಪನಿಗಳು 6 ತಿಂಗಳಿನೊಳಗೆ ಅಳಿಸಿಹಾಕಬೇಕೆಂದು ಸುಪ್ರೀಂ ಕೋರ್ಟ್ ಹೇಳಿಲ್ಲ, ಬದಲಾಗಿ  ಅಥೆಂಟಿಫಿಕೇಶನ್ ಮಾಹಿತಿಯನ್ನು6 ತಿಂಗಳಿಗಿಂತ ಹೆಚ್ಚು  ಸೇವ್ ಮಾಡಿಟ್ಟುಕೊಳ್ಳುವಂತಿಲ್ಲ ಎಂದು ಹೇಳಿದೆ., ಎಂದು ಆ 2 ಸಂಸ್ಥೆಗಳು ಹೇಳಿವೆ. 

click me!