ಕಾನೂನು ಪಾಲಿಸಿದರೆ ಕ್ರಿಪ್ಟೊ ಕರೆನ್ಸಿಯಿಂದ ಸಮಸ್ಯೆಯಿಲ್ಲ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

By Kannadaprabha NewsFirst Published Jan 20, 2023, 7:21 AM IST
Highlights

ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ವೇಗ ವೃದ್ಧಿಸಲು ಹಾಗೂ ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಗುರಿ ಸಾಧಿಸುವ ಸಲುವಾಗಿ ಮೌಲ್ಯಾಧಾರಿತ ಸಮಗ್ರ ಕಾನೂನು ಚೌಕಟ್ಟು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. 

ಬೆಂಗಳೂರು (ಜ.20): ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ವೇಗ ವೃದ್ಧಿಸಲು ಹಾಗೂ ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಗುರಿ ಸಾಧಿಸುವ ಸಲುವಾಗಿ ಮೌಲ್ಯಾಧಾರಿತ ಸಮಗ್ರ ಕಾನೂನು ಚೌಕಟ್ಟು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ‘ಐಟೆಕ್‌ ಲಾ ಅಂತಾರಾಷ್ಟ್ರೀಯ ಸಮಾವೇಶ-2023’ ಉದ್ದೇಶಿಸಿ ಮಾತನಾಡಿದ ಅವರು, ವಿಧಿಬದ್ಧ ಕಾನೂನಿಗೆ ಸೀಮಿತವಾಗದೆ ಹೆಚ್ಚು ಮೌಲ್ಯಾಧಾರಿತ ಕಾನೂನು ರೂಪಿಸಲು ಮುಂದಾಗಿದ್ದೇವೆ. 

ತನ್ಮೂಲಕ ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ನಿರ್ಮಿಸಲು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ವೇಗ ವೃದ್ಧಿಸಿ ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಲು ಉತ್ಸುಕರಾಗಿದ್ದೇವೆ ಎಂದರು. ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಕೇಂದ್ರ ಸರ್ಕಾರವು ಸಮಗ್ರ ಕಾನೂನು ಚೌಕಟ್ಟು ರೂಪಿಸಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ಡಿಜಿಟಲ್‌ ಪರ್ಸನಲ್‌ ಡಾಟಾ ಪ್ರೊಟೆಕ್ಷನ್‌ ಬಿಲ್‌, ನ್ಯಾಷನಲ್‌ ಡಾಟಾ ಗವರ್ನೆನ್ಸ್‌ ಫ್ರೇಮ್‌ವರ್ಕ್, ಐಟಿ ತಿದ್ದುಪಡಿ ನಿಯಮಗಳು, ಮುಂಬರುವ ಡಿಜಿಟಲ್‌ ಇಂಡಿಯಾ ಆ್ಯಕ್ಟ್ ಸೇರಿ ಇವೆಲ್ಲವೂ ಪ್ರಿಸ್ಕ್ರಿಪ್ಟಿವ್‌ಗಿಂತ (ವಿಧಿಬದ್ಧ ಅಥವಾ ನಿರ್ದಿಷ್ಟ) ಹೆಚ್ಚು ಮೌಲ್ಯ ಆಧಾರಿತ ಕಾನೂನುಗಳು ಆಗಲಿವೆ ಹೇಳಿದರು.

ಬೊಮ್ಮಾಯಿ ಆಡಳಿತಕ್ಕೆ ಮೋದಿ ಶಹಬ್ಬಾಸ್‌ಗಿರಿ: ಡಬಲ್‌ ಎಂಜಿನ್‌ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ

ಯಾವುದೇ ಬಿಲ್‌ ರಚನೆ ವೇಳೆ ಬಿಲ್‌ನಲ್ಲಿನ ದಕ್ಷತೆ, ಅನುಷ್ಠಾನ ಹಾಗೂ ಸ್ವೀಕರಿಸುವಿಕೆಯು ಮುಖ್ಯ. ಬಿಲ್‌ ಅಥವಾ ಶಾಸನ ರಚನೆ ವೇಳೆ ಎಷ್ಟುಮಂದಿ ಕರಡು ರಚಿಸಲು ಮುಂದೆ ಬಂದಿದ್ದಾರೆ ಎಂಬುದರ ಮೇಲೆ ಇದರ ಯಶಸ್ಸು ಅವಲಂಬಿಸಿರುತ್ತದೆ. ಕಾನೂನು ರಚನೆಯಲ್ಲಿ ಸ್ಟೇಕ್‌ ಹೋಲ್ಡರ್‌ಗಳನ್ನು ಒಳಗೂಡಿಸಿಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ. ನಮ್ಮ ಸರ್ಕಾರದ ಶಾಸನ ರಚನೆಯು ಸ್ಟೇಕ್‌ ಹೋಲ್ಡ​ರ್‍ಸ್ ಶಾಸನ ರಚನೆಯಂತೆಯೇ ಎಂದು ಧೈರ್ಯ ತುಂಬಿದರು.

ಕಾನೂನು ಪಾಲಿಸಿದರೆ ಕ್ರಿಪ್ಟೊ ಕರೆನ್ಸಿಯಿಂದ ಸಮಸ್ಯೆಯಿಲ್ಲ: ಬ್ಲಾಕ್‌ ಚೈನ್‌ ವಿಭಾಗದ ಬಗ್ಗೆ ಮಾತನಾಡಿದ ರಾಜೀವ್‌ ಚಂದ್ರಶೇಖರ್‌ ಅವರು, ಈ ವಿಭಾಗದಲ್ಲಿ ಭಾರತವು ವಿಶ್ವವನ್ನು ಮುನ್ನಡೆಸಲಿದೆ. ಕ್ರಿಪ್ಟೊಕರೆನ್ಸಿ ಬಗ್ಗೆ ಹೇಳಬೇಕಾದರೆ ಈ ನೆಲದ ಎಲ್ಲಾ ಕಾನೂನು ಹಾಗೂ ನಿಯಮಗಳನ್ನು ಪಾಲಿಸಿದರೆ ಕ್ರಿಪ್ಟೊಕರೆನ್ಸಿಯಿಂದ ಯಾವುದೇ ಸಮಸ್ಯೆಯಿಲ್ಲ. ನೀವು ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಬೇಕಾದರೆ ಆರ್‌ಬಿಐ, ಎಲ್‌ಆರ್‌ಸ್‌ ಅರ್ಹತೆ ಎಲ್ಲವನ್ನೂ ಪರಿಶೀಲಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್‌ ಲ್ಯಾಬ್‌ ಉದ್ಘಾಟನೆ: ಶುಕ್ರವಾರ ಮಧ್ಯಾಹ್ನ ಮಾನ್ಯತಾ ಟೆಕ್‌ಪಾರ್ಕ್ನಲ್ಲಿರುವ ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್‌ ಕಂಪನಿಗೆ ಭೇಟಿ ನೀಡಿದರು. ಈ ವೇಳೆ ಕಂಪನಿಯು ಹೊಸದಾಗಿ ನಿರ್ಮಿಸಿರುವ ಸಿಲಿಕಾನ್‌ ಇನ್ನೋವೇಷನ್‌ ಸೆಮಿಕಂಡರ್‌ ಪ್ರಯೋಗಾಲಯವನ್ನು ರಾಜೀವ್‌ ಚಂದ್ರಶೇಖರ್‌ ಅವರು ಉದ್ಘಾಟಿಸಿದರು. ಈ ವೇಳೆ ಸೆಮಿ ಕಂಡಕ್ಟರ್‌ ಪ್ರಯೋಗಾಲಯದಲ್ಲಿ ವಿನ್ಯಾಸಕಾರರೊಂದಿಗೆ ಕೆಲ ಹೊತ್ತು ಚರ್ಚೆ ನಡೆಸಿದರು. ನಂತರ ಎನ್‌ಎಕ್ಸ್‌ಪಿ ಕಚೇರಿಯಲ್ಲೇ ಸ್ಟಾರ್ಚ್‌ಅಪ್‌ ಹಾಗೂ ಉದ್ಯಮಿಗಳ ಜತೆ ಮಾತನಾಡಿ ಅವರಿಗೆ ಉತ್ಸಾಹ ತುಂಬಿದರು. 

ಬೆಂಗಳೂರು ಯುಜಿಸಿ ಕಚೇರಿ ಸದ್ದಿಲ್ಲದೆ ದಿಲ್ಲಿಗೆ: ಪ್ರಮುಖ ಉನ್ನತ ಶಿಕ್ಷಣ ಕಚೇರಿ ನಷ್ಟ

ಯುವ ಉದ್ಯಮಿಗಳು ತಮ್ಮ ಯೋಜನೆಗಳ ಬಗ್ಗೆ ಸಚಿವರೊಂದಿಗೆ ಮಾಹಿತಿ ಹಂಚಿಕೊಂಡರು. ಡಿಸೈನ್‌ ಲಿಂಕ್‌್ಡ ಇನ್ಸೆಂಟಿವ್‌ ಸ್ಕೀಂ (ವಿನ್ಯಾಸ ಆಧಾರಿತ ಪ್ರೋತ್ಸಾಹಧನ ಯೋಜನೆ) ಬಗ್ಗೆ ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿದರು. ಬಳಿಕ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಗ್ಲೋಬಲ್‌ ಕೆಪೆಬಿಲಿಟಿ ಸೆಂಟರ್‌ ಮುಖ್ಯಸ್ಥರೊಂದಿಗೆ ಸೆಮಿಕಂಡಕ್ಟ​ರ್‍ಸ್ ಹಾಗೂ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದ ಪ್ರಗತಿ ರಾಜೀವ್‌ಚಂದ್ರಶೇಖರ್‌ ಅವರು ಸಂವಾದ ನಡೆಸಿದರು.

click me!