ನಿಕಾನ್‌ ಹೊಸ ಕೂಲ್‌ಪಿಕ್ಸ್ W150 - ನೀರಿನೊಳಗೂ ನೋ ಟೆನ್ಷನ್, ಕೆಳಗೆ ಬಿದ್ದರೂ ನೋ ಟೆನ್ಷನ್!

By Web Desk  |  First Published Apr 25, 2019, 5:48 PM IST

ಇದೊಂದು ಕಾಂಪ್ಯಾಕ್ಟ್‌ ಡಿಜಿಟಲ್‌ ಕ್ಯಾಮೆರಾ;  ವಾಟರ್ ಮತ್ತು ಶಾಕ್ ಪ್ರೂಫ್ ;  ಬಳಕೆದಾರ ಸ್ನೇಹಿ- ಮಕ್ಕಳಿಂದ ಹಿಡಿದು ವಯಸ್ಕರಿಗೆ ಹೇಳಿ ಮಾಡಿಸಿದ ಕ್ಯಾಮೆರಾ!


ಬೆಂಗಳೂರು : ಮೊಬೈಲ್ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕ್ಯಾಮೆರಾಗೆ ಯಾವುದೂ ಸರಿಯಾಟಿಯಲ್ಲ. ಜನಪ್ರಿಯ ಕ್ಯಾಮೆರಾ ತಯಾರಕ ಕಂಪನಿಯಾಗಿರುವ ನಿಕಾನ್ ಇದೀಗ ಹೊಸ ಕ್ಯಾಮೆರಾವನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.

ಟೋಕಿಯೋದ ನಿಕಾನ್‌ ಕಾರ್ಪೊರೇಶನ್‌ನ ಅಂಗಸಂಸ್ಥೆಯಾಗಿರುವ ನಿಕಾನ್‌ ಇಂಡಿಯಾ ಪ್ರೈವೇಟ್ ಲಿಮಿುಟೆಡ್ ಕುಟುಂಬಗಳಿಗೆ ಮತ್ತು ಟ್ರೆಂಡ್ ಸೆಟ್ಟರ್‌ಗಳಿಗೆ ಹೊಂದುವಂತಹ ಹೊಸ Nikon COOLPIX W150 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. 

Tap to resize

Latest Videos

ಪ್ರವಾಸವಿರಲಿ, ಆಟೋಟಗಳಿರಲಿ, ಪೂಲ್‌ ಇರಲಿ ಅಥವಾ ಬೀಚ್‌ ಇರಲಿ ಎಲ್ಲಾ ಕಡೆ ಸುಲಭವಾಗಿ ಹಿಡಿದು ಚಟುವಟಿಕೆಗಳನ್ನು ಕ್ಲಿಕ್ಕಿಸಬಹುದಾದ ಈ COOLPIX W150 ಕ್ಯಾಮೆರಾದಲ್ಲಿ 13.2 ದಶಲಕ್ಷ ಪಿಕ್ಸೆಲ್‌ಗಳು ಮತ್ತು ಸ್ಟೀರಿಯೋ ಸೌಂಡ್‌ನೊಂದಿಗೆ ಅತ್ಯುತ್ತಮ ಗುಣಮಟ್ಟದ ಎಚ್‌ಡಿ ಮೂವಿಯನ್ನು ಚಿತ್ರೀಕರಿಸಬಹುದಾಗಿದೆ. 

ಪ್ರತಿಯೊಂದು ಕ್ಷಣವನ್ನುಇದರಲ್ಲಿ ಸೆರೆ ಹಿಡಿಯಬಹುದಾಗಿದ್ದು, ಇದು ವಿಶ್ವಾಸಾರ್ಹತೆಯ ಕ್ಯಾಮೆರಾ ಎನಿಸಿದೆ. ಇದಲ್ಲದೇ ಟಾರ್ಗೆಟ್ ಫೈಂಡಿಂಗ್‌ ಆಟೋಫೋಕಸ್ ಸೌಲಭ್ಯವನ್ನು ಹೊಂದಿರುವ ಈ ಕ್ಯಾಮೆರಾದಲ್ಲಿ 3 ಆಪ್ಟಿಕಲ್‌ ಝೂಂ ಮತ್ತು 6 ಡೈನಾಮಿಕ್ ಫೈನ್‌ ಝೂಂ ಸಾಮರ್ಥ್ಯವನ್ನು ಹೊಂದಿದೆ. ಈ ಗುಣಗಳಿಂದ ಕ್ವಿಕ್ ಆಗಿ ಫೋಕಸ್ ಮಾಡಬಹುದಾಗಿದೆ ಮತ್ತು ಮಕ್ಕಳು ದೂರದಲ್ಲಿ ಸಾಗುತ್ತಿದ್ದರೂ ಆ ದೃಶ್ಯಗಳನ್ನು ಸುಲಭವಾಗಿ ಕ್ಲಿಕ್ಕಿಸಬಹುದಾಗಿದೆ.

ಹೊಸ ಕ್ಯಾಮೆರಾ ಬಗ್ಗೆ ಮಾತನಾಡಿದ ನಿಕಾನ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್‌ ಕುಮಾರ್‌, ‘‘ಗ್ರಾಹಕರಿಗೆ ಹೆಚ್ಚು ಸುಲಭವಾಗಿ ಬಳಸುವಂತಹ ಮತ್ತು ಬಳಕೆಯಲ್ಲಿರುವ ಉತ್ಪನ್ನವನ್ನು ಅಭಿವೃದ್ಧಿಪಡಿಸುವುದು ನಮ್ಮ ಆದ್ಯತೆ. ಈ ಹೊಸ COOLPIX W150 ಕ್ಯಾಮೆರಾ ಸುಂದರವಾಗಿ ಕಾಣುತ್ತದೆಯಷ್ಟೇ ಅಲ್ಲ, ಅತ್ಯುತ್ಕೃಷ್ಟಟವಾದ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯಬಹುದಾಗಿದೆ, ಎಂದು ಹೇಳಿದ್ದಾರೆ.

ಅಂಡರ್‌ವಾಟರ್ ಶೂಟಿಂಗ್ ಸಾಮರ್ಥ್ಯ!

ನೀರಿನೊಳಗೆ ಕ್ಯಾಮೆರಾ ಬಳಕೆ ಮಾಡುವುದರಲ್ಲಿ ಯಾವುದೇ ತೊಂದರೆಇಲ್ಲ. ಕ್ಯಾಮೆರಾ ವಾಟರ್‌ ಪ್ರೂಫ್‌ ಆಗಿದ್ದು, 10 ಮೀಟರ್ ಆಳದ ನೀರಿನವರೆಗೆ ಅಂಡರ್‌ವಾಟರ್ ಶೂಟಿಂಗ್ ಸಾಮರ್ಥ್ಯವನ್ನು ಹೊಂದಿದೆ. ನೀರಿನೊಳಗೆ ಇರುವ ವಸ್ತು ಅಥವಾ ಮುಖಗಳನ್ನು ಗುರುತಿಸಿ ಅವುಗಳನ್ನು ಸ್ವಯಂಚಾಲಿತವಾಗಿ ಸೆರೆ ಹಿಡಿಯುತ್ತದೆ. ನೀರಿನೊಳಗೆ ನೀವು ಹೋಗಿ ಫೋಟೋಗಳನ್ನು ಕ್ಲಿಕ್ಕಿಸುವ ಪ್ರಮೇಯ ಇರುವುದಿಲ್ಲ. ಸೆಟ್ಟಿಂಗನ್ನು ಆ್ಯಕ್ಟಿವೇಟ್ ಮಾಡಿ ನೀರಿನಲ್ಲಿ ಬಿಟ್ಟರೆ ಸೂಕ್ತವಾದ ಚಿತ್ರಗಳನ್ನು ಕ್ಲಿಕ್ಕಿಸಲಿದೆ.

ಎತ್ತರದಿಂದ ಕೆಳಗೆ ಬಿದ್ದರೂ ನೋ ಟೆನ್ಶನ್!

ಅದೇರೀತಿ, ಈ COOLPIX W150 ಕ್ಯಾಮೆರಾ ಶಾಕ್‌ಪ್ರೂಫ್ ಮತ್ತು 1.8 ಮೀಟರ್‌ಗಳ ಎತ್ತರದಿಂದ ಕೆಳಗೆ ಬಿದ್ದರೂ ಯಾವುದೇ ಹಾನಿಯಾಗದೇ ಗಟ್ಟಿಮುಟ್ಟಾಗಿರುತ್ತದೆ. 

click me!