123456 ಪಾಸ್‌ವರ್ಡ್ ಕೊಟ್ಟಿರುವವರೇ ಹುಷಾರು| ಅತಿ ಹೆಚ್ಚು ಹ್ಯಾಕ್ ಆದ ಪಾಸ್‌ವರ್ಡ್‌ಗಳು ಇಲ್ಲಿವೆ!
ನವದೆಹಲಿ[ಏ.25]: ಆದುನಿಕ ಜಗತ್ತಿನ ಎಲ್ಲರ ಬಾಳಲ್ಲಿ ಪಾಸ್‌ವರ್ಡ್ ಬಹುಮುಖ್ಯ ಅನ್ನಿಸಿಕೊಂಡು ಬಹಳ ಸಮಯವಾಗಿದೆ. ಸೋಷಲ್ ಮೀಡಿಯಾಗಳಿಂದ ಹಿಡಿದು ನೆಟ್ ಬ್ಯಾಂಕಿಂಗ್‌ವರೆಗೆ ಎಲ್ಲಕ್ಕೂ ಪಾಸ್‌ವರ್ಡ್ ಬೇಕು. ಆ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವುದು ಮತ್ತೊಂದು ಸಾಹಸ. ಅದಕ್ಕೆ ಸುಲಭದ ದಾರಿಗಳನ್ನು ಹುಡುಕುವವರು ಬಹಳ ಜನ ಇದ್ದಾರೆ. ಪಾಸ್‌ವರ್ಡ್ ನೆನಪಿಟ್ಟುಕೊಳ್ಳುವುದು ಕಷ್ಟಎಂಬ ಕಾರಣಕ್ಕೆ 123456 ಅಂತಲೋ, ಟಿಡಿಛ್ಟಿಠಿy ಅಂತಲೋ ಪಾಸ್‌ವರ್ಡ್ ಕೊಡುವವರ ಸಂಖ್ಯೆ ನಮ್ಮಲ್ಲಿ ಜಾಸ್ತಿ ಇದೆ. ಅಂಥಾ ಮಂದಿಗೆ ಎಚ್ಚರಿಕೆ ನೀಡುವ ವರದಿಯೊಂದು ಬಂದಿದೆ. ಬ್ರಿಟನ್‌ನ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ ಅತಿ ಹೆಚ್ಚು ಬಾರಿ ಹ್ಯಾಕ್ ಆದ ಪಾಸ್‌ವರ್ಡ್‌ಗಳ ಪಟ್ಟಿಪ್ರಕಟಿಸಿದೆ. ಅದರಲ್ಲಿ ಮೊದಲ ಸ್ಥಾನದಲ್ಲಿರುವ ಪಾಸ್‌ವರ್ಡ್ 123456.
ಇಂಟರೆಸ್ಟಿಂಗ್ ಅಂದ್ರೆ 23 ದಶಲಕ್ಷ ಮಂದಿ ಈ ಪಾಸ್‌ವರ್ಡ್ ಇಟ್ಟುಕೊಂಡಿದ್ದರು ಅನ್ನುವುದನ್ನು ವರದಿ ಹೇಳುತ್ತದೆ. ಅದರ ಜೊತೆಗೆ ಟಿಡಿಛ್ಟಿಠಿy’ ಮತ್ತು ‘passಡಿಟ್ಟd ಎಂಬ ಪಾಸ್‌ವರ್ಡ್‌ಗಳನ್ನು ಕೂಡ ಬಹಳ ಜನ ಬಳಸುತ್ತಾರೆ. ಸುಲಭ ಅಂತ ಎಲ್ಲವನ್ನೂ ಕಳೆದುಕೊಳ್ಳುವುದಕ್ಕೆ ಇದೇ ಸಾಕ್ಷಿ. ಈ ಸುಲಭದ ಪಾಸ್‌ವರ್ಡ್‌ಗಳನ್ನು ಬ್ಯಾಂಕಿಂಗ್ ಸಂಬಂಧಪಟ್ಟವೆಬ್‌ಸೈಟ್‌ಗಳಿಗೆ ನೀಡಿದರೆ ಅದಕ್ಕಿಂತ ದೊಡ್ಡ ಅಪಾಯ ಬೇರೊಂದಿಲ್ಲ. ಅತಿ ಸುಲಭವಾಗಿ ನಾವು ನಮ್ಮ ಹಣವನ್ನು ಕಳೆದುಕೊಳ್ಳಬಹುದಾಗಿದೆ.
ಉದಾಸೀನದಿಂದಾಗಿ ಅತಿ ಸುಲಭದ ಪಾಸ್‌ವರ್ಡ್‌ಗಳನ್ನು ಇಟ್ಟುಕೊಂಡರೆ ನೋವು ಕಟ್ಟಿಟ್ಟಬುತ್ತಿ. ಹಾಗಾಗಿ ಹುಷಾರಾಗಿರಿ. ಇಲ್ಲಿ ಅತಿ ಹೆಚ್ಚು ಬಾರಿ ಹ್ಯಾಕ್ ಆದ ಪಾಸ್‌ವರ್ಡ್‌ಗಳು ಇವೆ. ನೀವೂ ಈ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದರೆ ಈಗಿಂದೀಗಲೇ ಬದಲಿಸಿ.
ಅತಿ ಹೆಚ್ಚು ಹ್ಯಾಕ್ ಆದ 20 ಪಾಸ್‌ವರ್ಡ್‌ಗಳು
123456 , 123456789, qwerty , password , 1111111 , 12345678 , abc123 , 1234567 , password1 , 12345 , 1234567890 , 123123, 000000 , Iloveyou , 1234 ,1q2w3e4r5t ,Qwertyuiop , 123, Monkey , Dragon
ಪಾಸ್‌ವರ್ಡ್ ಸೇಫಾಗಿರಲು ಏನು ಮಾಡಬೇಕು?
ಸರಳವಾದ ಪಾಸ್‌ವರ್ಡ್ ಏನಾದರೂ ನೀವಿಟ್ಟುಕೊಂಡಿದ್ದಲ್ಲಿ ಈಗಲೇ ಬದಲಾಯಿಸಿ, ನಿಮ್ಮ ಅಕೌಂಟ್ ಹ್ಯಾಕ್ ಆಗುವುದನ್ನು ತಪ್ಪಿಸಿ. ನಿಮ್ಮ ಪಾಸ್‌ವರ್ಡ್ ಹೀಗಿರಲಿ
* ಉದ್ದನೆಯ ಪಾಸ್‌ವರ್ಡ್‌ನಲ್ಲಿ ಮಧ್ಯೆ ಮಧ್ಯೆ ಕ್ಯಾಪಿಟಲ್ ಲೆಟರ್‌ಗಳು, ಸಣ್ಣಕ್ಷರಗಳು, ನಂಬರ್, ಅಥವಾ ಸ್ಪೆಷಲ್ ಸಿಂಬಲ್(%್ಘಃ$್ಫ) ಬಳಸಿ.
* ನೆಟ್ ಬ್ಯಾಂಕಿಂಗ್, ಉಳಿದ ವ್ಯವಹಾರಗಳಿಗೆ ಎಲ್ಲದಕ್ಕೂ ಪ್ರತ್ಯೇಕವಾಗಿ ಕಠಿಣವಾದ ಪಾಸ್‌ವರ್ಡ್ ಇಡಿ. ನೆನಪಿಡುವುದು ಕಷ್ಟಎಂದರೆ ನಿಮಗೆ ಸರಳ ಎನಿಸಿದ ಪಾಸ್‌ವರ್ಡ್‌ನಲ್ಲೇ ಅಕ್ಷರಗಳನ್ನು ಅದಲು ಬದಲು ಮಾಡಿ ಇಡಿ.
* ಯಾರೊಂದಿಗೂ ನಿಮ್ಮ ಪಾಸ್‌ವರ್ಡ್ ಶೇರ್ ಮಾಡಿಕೊಳ್ಳಬೇಡಿ.
* ಒಮ್ಮೆ ಉಪಯೋಗಿಸಿದ ನಂತರ ಅದನ್ನು ತಕ್ಷಣ ಲಾಗೌಟ್ ಮಾಡಿ.