ಇದು ಸೃಷ್ಟಿಯ ವೈಚಿತ್ರ್ಯ: ಇಲ್ಲಿದೆ ಸೂರ್ಯನಷ್ಟೇ ದೊಡ್ಡ ಗ್ರಹದ ಚಿತ್ರ!

Published : Sep 28, 2019, 03:21 PM ISTUpdated : Sep 29, 2019, 05:43 PM IST
ಇದು ಸೃಷ್ಟಿಯ ವೈಚಿತ್ರ್ಯ: ಇಲ್ಲಿದೆ ಸೂರ್ಯನಷ್ಟೇ ದೊಡ್ಡ ಗ್ರಹದ ಚಿತ್ರ!

ಸಾರಾಂಶ

ದಿಗಂತದ ಒಡಲಾಳದಿಂದ ಹೊರ ಬರುತ್ತಿರುವ ರೋಚಕ ರಹಸ್ಯಗಳು| ಪುಟ್ಟ ಹಾಗೂ ಅಷ್ಟೇ ಅಚ್ಚರಿಯ ಜಗತ್ತೊಂದನ್ನು ಪತ್ತೆ ಹಚ್ಚಿದ ಖಗೋಳ ವಿಜ್ಞಾನಿಗಳು| ಭೂಮಿಯಿಂದ ಸುಮಾರು 31 ಜ್ಯೋತಿವರ್ಷ ದೂರದಲ್ಲಿದೆ ಅಚ್ಚರಿಯ ಜಗತ್ತು| ಸೂರ್ಯನಿಗಿಂತ ಕೇವಲ ಶೇ.12ರಷ್ಟು ದ್ರವ್ಯರಾಶಿ ಹೊಂದಿರುವ ನಕ್ಷತ್ರ| ಮಾತೃ ನಕ್ಷತ್ರದಷ್ಟೇ ಗಾತ್ರ ಹೊಂದಿರವ ಗ್ರಹವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು| 200 ದಿನಗಳಿಗೊಮ್ಮೆ ಮಾತೃ ನಕ್ಷತ್ರವನ್ನು ಸುತ್ತುವ ಬೃಹತ್ ಗಾತ್ರದ ಗ್ರಹ| ಪರಸ್ಪರ ಗುರುತ್ವಾಕರ್ಷಣೆಯ ಘರ್ಷಣೆ ಇರದಿರುವುದು ಅಚ್ಚರಿಗೆ ಕಾರಣ|

ವಾಷಿಂಗ್ಟನ್(ಸೆ.28): ಬ್ರಹ್ಮಾಂಡದ ಅಚ್ಚರಿಗಳು ಒಂದೇ, ಎರಡೇ? ಬಗೆದಷ್ಟು ರೋಚಕ ರಹಸ್ಯಗಳು ದಿಗಂತದ ಒಡಲಾಳದಿಂದ ಹೊರ ಬರುತ್ತಲೇ ಇರುತ್ತವೆ. ಇರುವ ಒಂದು ಜಗತ್ತನ್ನೇ ಸಂಭಾಳಿಸಲಾಗದ ಮಾನವನಿಂದ ಬೇರೊಂದು ಜಗತ್ತಿನ ಅನ್ವೇಷಣೆ ನಿಜಕ್ಕೂ ಅಚ್ಚರಿಯ ಹಾಗೂ ಅದ್ಭುತ ಸಂಗತಿ.

ಅದರಂತೆ ಖಗೋಳ ವಿಜ್ಞಾನಿಗಳು ಭೂಮಿಯಿಂದ ಸುಮಾರು 31 ಜ್ಯೋತಿವರ್ಷ ದೂರ ಇರುವ ಪುಟ್ಟ ಹಾಗೂ ಅಷ್ಟೇ ಅಚ್ಚರಿಯ ಜಗತ್ತೊಂದನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸೂರ್ಯನಿಗಿಂತ ಕೇವಲ ಶೇ.12ರಷ್ಟು ದ್ರವ್ಯರಾಶಿ ಹೊಂದಿರುವ ನಕ್ಷತ್ರವೊಂದನ್ನು ಅದರಷ್ಟೇ ಗಾತ್ರದ ಗ್ರಹವೊಂದು ಸುತ್ತುತ್ತಿರುವ ವಿಚಿತ್ರ ವಿದ್ಯಮಾನವನ್ನು ದಾಖಲಿಸಲಾಗಿದೆ.

GJ3512 ಎಂಬ ಪುಟ್ಟ ನಕ್ಷತ್ರಕ್ಕೆ ಅದರಷ್ಟೇ ಗಾತ್ರದ ಗ್ರಹ ಇದ್ದು, ಈ ಗೃಹ ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರು ಗ್ರಹದಷ್ಟು ಗಾತ್ರ ಹೊಂದಿದೆ ಎನ್ನಲಾಗಿದೆ.

ಗುರು ಗ್ರಹದಂತೆ ಈ ಗೃಹ ಕೂಡ ಅನಿಲಕಾಯವಾಗಿದ್ದು, ಇದರ ರಚನಾ ಕ್ರಮ ಮಾತ್ರ ಇತರ ಗೃಹಗಳಿಗಿಂತ ವಿಭಿನವಾಗಿದೆ ಎಂದು ಸ್ಪ್ಯಾನಿಶ್ ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

ತನ್ನ ಮಾತೃ ನಕ್ಷತ್ರಕ್ಕೆ ಅತ್ಯಂತ ಹತ್ತಿರದಲ್ಲಿರುವ ಈ ಗ್ರಹ 200 ದಿನಗಳಿಗೊಮ್ಮೆ ಮಾತೃ ನಕ್ಷತ್ರವನ್ನು ಸುತ್ತುತ್ತಿದ್ದು, ಹೆಚ್ಚು ಕಡಿಮೆ ಒಂದೇ ದ್ರವ್ಯರಾಶಿ ಹೊಂದಿರುವ ನಕ್ಷತ್ರ ಮತ್ತು ಗ್ರಹದ ಅನ್ವೇಷಣೆ ಖಗೋಳ ವಿಜ್ಞಾನ ಜಗತ್ತಿಗೆ ಹೊಸದಾಗಿದೆ.

ಇವರೆಡರ ಗುರುತ್ವಾಕರ್ಷಣೆ ಬಲ ಕೂಡ ಸಮನಾಗಿದ್ದು, ಅನತಿ ದೂರದಲ್ಲಿ ಮತ್ತೊಂದು ದೊಡ್ಡ ಗ್ರಹ ಅಸ್ತಿತ್ವದಲ್ಲಿರುವುದರಿಂದ ಇವರೆಡರ ಗುರುತ್ವಾಕರ್ಷಣೆಯ ಘರ್ಷಣೆಯನ್ನು ತಡೆ ಹಿಡಿದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಂಶೋಧನಾ ತಂಡದ ಮುಖ್ಯಸ್ಥ ಜುಹಾನ್ ಕಾರ್ಲೋಸ್ ಮೋರಾಲ್ಸ್, ನಕ್ಷತ್ರವೊಂದರ ಗುರುತ್ವಾಕರ್ಷಣೆ ಬಲದೊಳಗೆ ಸಿಗುವ ಗ್ರಹ ಅದನ್ನು ಸುತ್ತುವ ಸಂಗತಿ ಸಾಮಾನ್ಯವಾದರೂ, ಒಂದೇ ದ್ರವ್ಯರಾಶಿ ಹೊಂದಿರುವ ಎರಡು ಆಕಾಶಕಾಯಗಳು ಪರಸ್ಪರ ಘರ್ಷಣೆಗಿಳಿಯದಿರುವುದು ವಿಚಿತ್ರ ವಿದ್ಯಮಾನ ಎಂದು ತಿಳಿಸಿದ್ದಾರೆ.

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ