ಇನ್ನು ಮೊಬೈಲ್‌ನಲ್ಲೂ ನೆಟ್ಫ್ಲಿಕ್ಸ್: ಮಾಸಿಕ 199ರ ರೂ ಪ್ಯಾಕ್‌ನಲ್ಲಿ!| ಭಾರತೀಯರಿಗೆ ಅಮೆರಿಕ ಮೂಲದ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ ‘ನೆಟ್ಪ್ಲಿಕ್ಸ್’ ಹೊಸ ಕೊಡುಗೆ
ನವದೆಹಲಿ[ಜು.25]: ಮೊಬೈಲ್ ವೀಕ್ಷಣೆಯಲ್ಲಿ ಅತಿ ಹೆಚ್ಚಿನ ಸಮಯ ಕಳೆಯುತ್ತಿರುವ ಭಾರತೀಯರಿಗೆ ಅಮೆರಿಕ ಮೂಲದ ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ ‘ನೆಟ್ಪ್ಲಿಕ್ಸ್’ ಹೊಸ ಕೊಡುಗೆ ಪ್ರಕಟಿಸಿದೆ.
ಮಾಸಿಕ 199 ರೂ ಬೆಲೆಯ ಚಂದಾದಾರ ಯೋಜನೆ ಪರಿಚಯಿಸಿದೆ. ಈ ಮೂಲಕ ಚಲನಚಿತ್ರ, ಟಿವಿ ಹಾಗೂ ಧಾರವಾಹಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿರುವ ಭಾರತೀಯರಿಗೆ ಇದೀಗ ಅಮೆಜಾನ್ ಪ್ರೈಮ್ ಮತ್ತು ಹಾಟ್ಸ್ಟಾರ್ ಜತೆಗೆ ಇದೀಗ ‘ನೆಟ್ಪ್ಲಿಕ್ಸ್’ ಕೂಡ ಕಡಿಮೆ ಮೊತ್ತದಲ್ಲಿ ಲಭ್ಯವಾಗಲಿದೆ.
ಈಗಾಗಲೇ ನೆಟ್ಪ್ಲಿಕ್ಸ್ ಮಾಸಿಕ .499 ಮತ್ತು .799 ಯೋಜನೆ ಹೊಂದಿದ್ದು ಅದನ್ನು ಟೀವಿಗಳಲ್ಲಿ ವೀಕ್ಷಿಸಬಹುದು.