ಸರಿಯಾದ ಮಾರ್ಗದಲ್ಲಿ ಬಾಹುಬಲಿ: ಇಸ್ರೋ ಸ್ಪಷ್ಟನೆ!

By Web Desk  |  First Published Jul 23, 2019, 8:52 PM IST

ಚಂದ್ರಯಾನ-2 ಗಗನ ನೌಕೆಯ ಸ್ಥಿತಿ ಉತ್ತಮ ಎಂದ ಇಸ್ರೋ| ಸರಿಯಾದ ದಿಕ್ಕಿನಲ್ಲಿ ನೌಕೆಯ ಪಯಣ ಎಂದ ಇಸ್ರೋ|  ನಿಗದಿಯಂತೆ ಸೆಪ್ಟೆಂಬರ್ 7 ರಂದು ಚಂದ್ರನ ಮೈಲ್ಮೆ ತಲುಪಲಿರುವ ನೌಕೆ|


ಬೆಂಗಳೂರು(ಜು.23): ಚಂದ್ರಯಾನ-2 ಗಗನ ನೌಕೆಯ ಸ್ಥಿತಿ ಉತ್ತಮವಾಗಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ. 

ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಗಳ ವೈಜ್ಞಾನಿಕ ಪರಿಕರಗಳನ್ನು ಹೊತ್ತ ಚಂದ್ರಯಾನ-2 ಉಪಗ್ರಹ  ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.ಇದರಲ್ಲಿ ಯಾವುದೇ ಅನುಮಾನವಿಲ್ಲ ಪೂರ್ವ ನಿಗದಿಯಂತೆ ಸೆಪ್ಟೆಂಬರ್ 7 ರಂದು ಚಂದ್ರನ ಮೈಲ್ಮೆ ತಲುಪಲಿದೆ ಎಂದು  ಇಸ್ರೋ ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 

Latest Videos

ಚಂದ್ರಯಾನ-2 ಉಪಗ್ರಹವನ್ನು ಹೊತ್ತ ಜಿಎಸ್ ಎಲ್ ವಿ-ಮಾರ್ಕ್ 3 ವಾಹಕ ಆಂಧ್ರಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭದತ್ತ ಚಿಮ್ಮಿದ್ದನ್ನು ಇಲ್ಲಿ ಸ್ಮರಿಸಬಹುದು.

click me!