ರಾಷ್ಟ್ರೀಯ ವಿಜ್ಞಾನ ದಿನಕ್ಕೆ ಸಜ್ಜಾದ ಬೆಂಗಳೂರು| ಮುನ್ನೋಟ ಟ್ರಸ್ಟ್ ‘ಇಗೋ ವಿಜ್ಞಾನ’ ಎಂಬ ವಿಶಿಷ್ಟ ಕಾರ್ಯಕ್ರಮ| ವಿಶೇಷ ಲೇಖನ ಸ್ಪರ್ಧೆ ಏರ್ಪಡಿಸಿದ ಮುನ್ನೋಟ ಟ್ರಸ್ಟ್| 1,000 ಪದಗಳನ್ನು ಮೀರದಂತೆ ಲೇಖನ ಬರೆಯುವ ಸ್ಪರ್ಧೆ|
ಬೆಂಗಳೂರು(ಜ.16): ವಿಜ್ಞಾನ ಸದ್ಯದ ಜಗತ್ತನ್ನು ಆಳುತ್ತಿರುವ ವಿಶೇಷ ಜ್ಞಾನ. ಆಧುನಿಕ ಜೀವ ಜಗತ್ತು ವಿಜ್ಞಾನದತ್ತ ಮುಖ ಮಾಡಿ ದಶಕಗಳೇ ಉರುಳಿವೆ.
ವಿಜ್ಞಾನದಿಂದಲೇ ಜೀವನ ಎಂಬ ಸತ್ಯವನ್ನು ಅರಿತಿರುವ ಇಂದಿನ ಪೀಳಿಗೆ, ವಿಜ್ಞಾನವನ್ನು ಅಪ್ಪಿಕೊಂಡು ಸಮೃದ್ಧಿಯತ್ತ ಮುನ್ನಡೆಯುತ್ತಿದೆ.
undefined
ಅಂತೆಯೇ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಗರದ ಮುನ್ನೋಟ ಟ್ರಸ್ಟ್ ‘ಇಗೋ ವಿಜ್ಞಾನ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಕ್ಷೇತ್ರದ ವಿವಿಧ ಅಂಗಗಳ ಕುರಿತಾಗಿ ವಿಶೇಷ ಲೇಖನ ಸ್ಪರ್ಧೆಯನ್ನು ಮುನ್ನೋಟ ಟ್ರಸ್ಟ್ ಏರ್ಪಡಿಸಿದೆ.
ಆಸಕ್ತರು ಈ ಕೆಳಗಿನ ವಿಷುಗಳ ಕುರಿತು 1,000 ಪದಗಳನ್ನು ಮೀರದಂತೆ ಲೇಖನ ಬರೆಯುವಂತೆ ಮುನ್ನೋಟ ಟ್ರಸ್ಟ್ ಮನವಿ ಮಾಡಿದೆ.
1. ಮೂಲ ವಿಜ್ಞಾನದ ಮುಂದಿನ ದಿನಗಳು
2. ಸಾರಿಗೆ ವ್ಯವಸ್ಥೆಯಲ್ಲಾಗುವ ಬದಲಾವಣೆಗಳು
3. ಅರಿವಿನ ಜಗತ್ತಿಗೆ ಗಣಿತದ ಕೊಡುಗೆಗಳು
4. ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳು
5. ಸಂಪರ್ಕ ವ್ಯವಸ್ಥೆ ಮುಂದೆ ಹೇಗೆ ಬದಲಾಗಲಿದೆ?
6. ಬೇಸಾಯದಲ್ಲಿ ಆಗಬೇಕಾದ ಬದಲಾವಣೆಗಳು
7. ಬಾನಂಗಳದ ಮುಂದಿನ ದಿನಗಳು
8. ಯಾವ ತಂತ್ರಜ್ಞಾನಗಳು ಕ್ರಾಂತಿ ಹುಟ್ಟಿಸಲಿವೆ?
ಹೀಗೆ ಮೇಲ್ಕಂಡ ವಿಷಯಗಳ ಕುರಿತು ಆಸಕ್ತರು ಲೇಖನ ಬರೆದು www.munnota.comಗೆ ಕಳುಹಿಸುವಂತೆ ಟ್ರಸ್ಟ್ ಮನವಿ ಮಾಡಿದೆ.