ಜ.17ಕ್ಕೆ ಇಸ್ರೋದ ಜಿಸ್ಯಾಟ್-30 ಉಪಗ್ರಹ ಉಡಾವಣೆ!

Published : Jan 14, 2020, 09:31 PM IST
ಜ.17ಕ್ಕೆ ಇಸ್ರೋದ ಜಿಸ್ಯಾಟ್-30 ಉಪಗ್ರಹ ಉಡಾವಣೆ!

ಸಾರಾಂಶ

ಇಸ್ರೋ ನಿರ್ಮಿತ ಸ್ವದೇಶಿ ತಂತ್ರಜ್ಞಾನದ ಜಿಸ್ಯಾಟ್-30 ಉಪಗ್ರಹ | ಜ.17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ| ಉಪಗ್ರಹ ಉಡಾವಣೆಯ ಸಿದ್ದತೆ ಭರದಿಂದ ಸಾಗಿದೆ ಎಂದ ಇಸ್ರೋ| ಅಮೆರಿಕದ ಎರೇನ್ 5 ಎಂಬ ರಾಕೆಟ್ ವಾಹಕದ ಮೂಲಕ ಉಡಾವಣೆ| 3,357 ಕೆಜಿ ತೂಕದ ಜಿಸ್ಯಾಟ್-30 ಉಪಗ್ರಹ| 

ಬೆಂಗಳೂರು(ಜ.14): ಇಸ್ರೋ ನಿರ್ಮಿತ ಸ್ವದೇಶಿ ತಂತ್ರಜ್ಞಾನದ ಜಿಸ್ಯಾಟ್-30 ಉಪಗ್ರಹ, ಇದೇ ಜ.17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ಜಿಸ್ಯಾಟ್-30 ಉಪಗ್ರಹ ಉಡಾವಣೆಯ ಸಿದ್ದತೆ ಭರದಿಂದ ಸಾಗಿದೆ ಎಂದು ತಿಳಿಸಿದೆ.

ಪಿಎಸ್‌ಎಲ್‌ವಿ-ಸಿ48 ಉಡಾವಣೆ ಯಶಸ್ವಿ: ಇಸ್ರೋ ಸಾಧನೆಗೆ ಮತ್ತೊಂದು ಗರಿ!

ಜ.17ರಂದು ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 2.35ರ ಹೊತ್ತಿಗೆ ಎರೇನ್ ಲಾಂಚ್ ಕಾಂಪ್ಲೆಕ್ಸ್ ಉಡ್ಡಯನ ಕೇಂದ್ರದಿಂದ ಜಿಸ್ಯಾಟ್-30 ಉಪಗ್ರಹ ಉಡಾವಣೆಯಾಗಲಿದೆ.

ಅಮೆರಿಕದ ಎರೇನ್ 5 ಎಂಬ ರಾಕೆಟ್ ವಾಹಕದ ಮೂಲಕ ಜಿಸ್ಯಾಟ್-30 ಉಪಗ್ರಹ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ.

3,357 ಕೆಜಿ ತೂಕದ ಜಿಸ್ಯಾಟ್-30 ಉಪಗ್ರಹ, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ, ಸೆಲ್ಯೂರಲ್ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ನೀಡಲಿದೆ.

ಇತಿಹಾಸ ಕೊರೆದ ಇಸ್ರೋ: ನಭಕ್ಕೆ ಚಿಮ್ಮಿದ ಕಾರ್ಟೊಸ್ಯಾಟ್-3!

ಮುಂದಿನ 15 ವರ್ಷಗಳವರೆಗೆ ಜಿಸ್ಯಾಟ್-30 ಉಪಗ್ರಹ ಈ ಸೇವೆಗಳನ್ನು ನೀಡಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ChatGPTಗೆ ಇವೆಲ್ಲಾ ಪ್ರಶ್ನೆ ಕೇಳ್ತೀರಾ? ಕಂಬಿ ಎಣಿಸಬೇಕಾಗತ್ತೆ ಹುಷಾರ್​- ಪೊಲೀಸರ ಎಚ್ಚರಿಕೆ
ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!