ಕೊನೆಗೂ ಇಸ್ರೋದ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ನಾಸಾ| ಚಂದ್ರನ ದಕ್ಷಿಣ ದೃವದಲ್ಲಿ ವಿಕ್ರಮ್ ಲ್ಯಾಂಡರ್ ಬಿದ್ದ ಸ್ಥಳ ಗುರುತಿಸಿದ ನಾಸಾ| ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲು ನಾಸಾಗೆ ಸಹಕರಿಸಿದ ಚೆನ್ನೈ ಇಂಜಿನಿಯರ್| ಚೆನ್ನೈ ಮೂಲದ ಮೆಕ್ಯಾನಿಕಲ್ ಇಂಜಿನಯರ್ ಶಣ್ಮುಗ ಸುಬ್ರಮಣಿಯನ್| ನಾಸಾ ಫೋಟೋಗಳ ಕರಾರುವಕ್ಕು ಅಧ್ಯಯನ ನಡೆಸಿ ಲ್ಯಾಂಡರ್ ಸ್ಥಳ ಗುರುತಿಸಿದ ಶಣ್ಮುಗ| ಲ್ಯಾಪ್’ಟಾಪ್ ಮೂಲಕ ನಾಸಾ ಫೋಟೋಗಳ ತುಲನಾತ್ಮಕ ಅಧ್ಯಯನ ನಡೆಸಿದ ಶಣ್ಮುಗ| ಶಣ್ಮುಗ ಕಾರ್ಯ ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ ನಾಸಾ|
ಚೆನ್ನೈ(ಡಿ.03): ಚಂದ್ರನ ದಕ್ಷಿಣ ದೃವದಲ್ಲಿ ಇಸ್ರೋದ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲು ನಾಸಾ ಚೆನ್ನೈ ಮೂಲದ ಇಂಜಿನಿಯರ್’ವೋರ್ವರ ಸಹಾಯ ಪಡೆದಿತ್ತು.
ಹೌದು, ಚೆನ್ನೈ ಮೂಲದ ಮೆಕಾನಿಕಲ್ ಇಂಜಿನಿಯರ್ ಶಣ್ಮುಗ ಸುಬ್ರಮಣಿಯನ್, ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲು ಸಹಾಯ ಮಾಡಿದ್ದಾರೆ.
Shanmuga Subramanian,an amateur astronomer from Chennai who has discovered debris of Chandrayaan-2's Vikram Lander on surface of the moon:I was able to find something out of the ordinary in a particular spot,so,I thought this must be the debris. I got confirmation from NASA today pic.twitter.com/8WBAZvNkRn
— ANI (@ANI)undefined
ವಿಕ್ರಮ್ ಲ್ಯಾಂಡರ್ ಬಿದ್ದಿರಬಹುದಾದ ಸ್ಥಳದ ಫೋಟೋಗಳನ್ನು ಹಂಚಿಕೊಂಡಿದ್ದ ನಾಸಾ, ಲ್ಯಾಂಡರ್ ಪತ್ತೆ ಹಚ್ಚಲು ಸಹಾಯ ಮಾಡುವಂತೆ ಸಾವರ್ಜನಿಕರಲ್ಲಿ ಮನವಿ ಮಾಡಿತ್ತು.
ಅದರಂತೆ ನಾಸಾದ ಫೋಟೋಗಳನ್ನು ತಮ್ಮ ಲ್ಯಾಪ್’ಟಾಪ್ ಮೂಲಕ ಅಧ್ಯಯನ ನಡೆಸಿದ್ದ ಶಣ್ಮುಗ, ಲ್ಯಾಂಡರ್ ಬಿದ್ದ ಕರಾರುವಕ್ಕು ಸ್ಥಳವನ್ನು ಪತ್ತೆ ಹಚ್ಚಲು ಯಶಸ್ವಿಯಾದರು.
"I was able to find something out of the ordinary in a particular spot,so,I thought this must be the debris;This should inspire lot of people,"S Subramanian,an amateur astronomer from Chennai who has discovered debris of Chandrayaan-2's Vikram Lander on surface of the moon pic.twitter.com/BuLeQzKIkP
— ANI (@ANI)ತಮ್ಮ ಅಧ್ಯಯನದ ಮಾಹಿತಿಯನ್ನು ಇಸ್ರೋ ಮತ್ತು ನಾಸಾದೊಂದಿಗೆ ಹಂಚಿಕೊಂಡಿದ್ದ ಶಣ್ಮುಗ ಅವರಿಗೆ, ನಾಸಾದಿಂದ ಬೆಂಬಲವೂ ದೊರೆತಿದ್ದು ವಿಶೇಷ.
ಇ-ಮೇಲ್ ಮೂಲಕ ನಾಸಾ ವಿಜ್ಞಾನಿಗಳನ್ನು ಸಂಪರ್ಕಿಸಿದ್ದ ಶಣ್ಮುಗ, ನಾಸಾ ಫೋಟೋಗಳ ತಮ್ಮ ತುಲನಾತ್ಮಕ ಅಧ್ಯಯನದ ಮಾಹಿತಿ ನೀಡಿದರು. ಈ ಮೂಲಕ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಲು ಸಹಾಯ ಮಾಡಿದರು.
has credited me for finding Vikram Lander on Moon's surface pic.twitter.com/2LLWq5UFq9
— Shan (@Ramanean)ಶಣ್ಮುಗ ಕಾರ್ಯವನ್ನು ಮೆಚ್ಚಿರುವ ನಾಸಾ, ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಶಣ್ಮುಗ ಪಾತ್ರ ಮಹತ್ವದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದೆ.