ಇಂಧನ ಖಾಲಿ: ಗುಡ್ ಬೈ ಕೆಪ್ಲರ್ ಟೆಲಿಸ್ಕೋಪ್‌!

Published : Nov 01, 2018, 03:27 PM IST
ಇಂಧನ ಖಾಲಿ: ಗುಡ್ ಬೈ ಕೆಪ್ಲರ್ ಟೆಲಿಸ್ಕೋಪ್‌!

ಸಾರಾಂಶ

ನಾಸಾದ ಕೆಪ್ಲರ್ ಟೆಲಿಸ್ಕೋಪ್‌ ಗೆ ವಿದಾಯ ಹೇಳುವ ಸಮಯ! ಕೆಪ್ಲರ್ ಟೆಲಿಸ್ಕೋಪ್‌ ಇಂಧನ ಖಾಲಿಯಾಗುತ್ತಿದೆ! ಮಾಹಿತಿ, ದತ್ತಾಂಶ ಸಂಗ್ರಹಿಸುವ ಕಾರ್ಯಕ್ಕೆ ಮುಂದಾದ ನಾಸಾ! ಹಲವು ಗ್ರಹಗಳ ಕುರಿತು ಮಾಹಿತಿ ನೀಡಿದ್ದ ಕೆಪ್ಲರ್ ಟೆಲಿಸ್ಕೋಪ್‌ 

ವಾಷಿಂಗ್ಟನ್(ನ.1): ಮಾನವ ಜನಾಂಗಕ್ಕೆ ಹಲವಾರು ಬೇರೆ ಗ್ರಹಗಳ ಕುರಿತು ಮಾಹಿತಿ ನೀಡಿದ ಕೆಪ್ಲರ್‌ ಟೆಲಿಸ್ಕೋಪ್‌ಗೆ ನಾಸಾ ವಿದಾಯ ಹೇಳುವ ಸಮಯ ಬಂದಿದೆ. 2009ರಲ್ಲಿ ಸುಮಾರು 6 ವರ್ಷಕ್ಕೆ ಬೇಕಾಗುವಷ್ಟು ಇಂಧನದೊಂದಿಗೆ ಕೆಪ್ಲರ್ ಟೆಲಿಸ್ಕೋಪ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.

2009ರಲ್ಲಿ ನಭಕ್ಕೆ ನೆಗೆದಿದ್ದ ಕೆಪ್ಲರ್‌ ಟೆಲಿಸ್ಕೋಪ್‌ ಉಪಗ್ರಹ ತನ್ನ ನಿಗದಿತ ಸಾಮರ್ಥ್ಯಕ್ಕಿಂತಲೂ 4 ವರ್ಷ ಹೆಚ್ಚು ಕೆಲಸ ನಿರ್ವಹಿಸಿದೆ. ಕಳೆದ ಕೆಲ ತಿಂಗಳಿನಿಂದ ಕೆಪ್ಲರ್‌ನ ಇಂಧನ ಖಾಲಿಯಾಗುವ ಹಂತ ತಲುಪಿದೆ.

ಹೀಗಾಗಿ ಕೆಪ್ಲರ್‌ಗೆ ವಿದಾಯ ಹೇಳಲಾಗುತ್ತದೆ. ಇದರಲ್ಲಿರುವ ಎಲ್ಲ ಮಾಹಿತಿ, ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ನಾಸಾ ಹೇಳಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ