ಇತಿಹಾಸ ಬರೆದ ಬೆನ್ನು ಕ್ಷುದ್ರಗ್ರಹ ಬೆನ್ನತ್ತಿರುವ ನಾಸಾ ನೌಕೆ!

By nikhil vkFirst Published Jun 15, 2019, 5:24 PM IST
Highlights

ಇತಿಹಾಸ ಬರೆದ ಬೆನ್ನು ಬೆನ್ನತ್ತಿರುವ OSIRIS-REx ನೌಕೆ| ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಬೆನ್ನು ಕ್ಷುದ್ರಗ್ರಹ| 200 ವರ್ಷಗಳ ಬಳಿಕ ಭೂಮಿಗೆ ಅಪ್ಪಳಿಸುವ ಅಂದಾಜು| ಬೆನ್ನು ಅಧ್ಯಯನದಲ್ಲಿ ನಿರತವಾಗಿರುವ ನಾಸಾದ OSIRIS-REx ನೌಕೆ| ಕ್ಷುದ್ರಗ್ರಹದಿಂದ ಕೇವಲ 2,231 ಅಡಿ ಎತ್ತರದಲ್ಲಿ ಸುತ್ತುತ್ತಿರುವ ನೌಕೆ| ಕ್ಷುದ್ರಗ್ರಹದ ಮೇಲ್ಮೈ ಮೇಲೆ ಇಳಿದು ಇತಿಹಾಸ ಬರೆಯಲಿದೆ OSIRIS-REx ನೌಕೆ|

ವಾಷಿಂಗ್ಟನ್(ಜೂ.15): 200 ವರ್ಷಗಳ ಬಳಿಕ ಭೂಮಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಿರುವ ಕ್ಷುದ್ರಗ್ರಹ ಬೆನ್ನುವಿನ ಅಧ್ಯಯನದಲ್ಲಿ ನಿರತವಾಗಿರುವ ನಾಸಾ, ಕ್ಷುದ್ರಗ್ರಹದ ಅತ್ಯಂತ ಸಮೀಪಕ್ಕೆ ತನ್ನ OSIRIS-REx ನೌಕೆಯನ್ನು ಕಳುಹಿಸುವ ಮೂಲಕ ಇತಿಹಾಸ ಬರೆದಿದೆ.

ಬೆನ್ನು ಕ್ಷುದ್ರಗ್ರಹದ ಮೇಲೆ ಇಳಿಯುವ ಮೂಲಕ ಕ್ಷುದ್ರಗ್ರಹದ ಮೇಲೆ ಇಳಿದ ಮೊದಲ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ OSIRIS-REx ನೌಕೆ, ಬೆನ್ನು ಕ್ಷುದ್ರಗ್ರಹದ ಕೇಂದ್ರ ಭಾಗದಿಂದ ಕೇವಲ 2,231 ಅಡಿ ಎತ್ತರದಲ್ಲಿದೆ.

’s first-ever mission to return an asteroid sample to Earth just broke its own world record for the closest orbit of a planetary body by a spacecraft. is now in an orbit 680 meters (2,231 feet) above the surface of asteroid Bennu! Details: https://t.co/ZSDoF6vMdm pic.twitter.com/ScCR6UgMZ6

— Thomas Zurbuchen (@Dr_ThomasZ)

ಬೆನ್ನು ಕ್ಷುದ್ರಗ್ರಹದ ಅತ್ಯಂತ ಸಮೀಪಕ್ಕೆ ಹೋಗಿರುವ OSIRIS-REx ನೌಕೆ, ಕೇಂದ್ರ ಭಾಗದಿಂದ ಕೇವಲ 2,231 ಅಡಿ ಎತ್ತರದಲ್ಲಿ ಕ್ಷುದ್ರಗ್ರಹವನ್ನು ಸುತ್ತುತ್ತಿದೆ ಎಂದು ನಾಸಾ ತಿಳಿಸಿದೆ.

ಸೌರಮಂಡಲದ ಹೊರಗಿನ ಕ್ಷುದ್ರಗ್ರಹವಾದ ಬೆನ್ನು, ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಇದೇ ಪಥದಲ್ಲಿ ಚಲಿಸಿದರೆ ಮುಂದಿನ 200 ವರ್ಷಗಳಲ್ಲಿ ಅದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.
 

click me!