ಭೂಮಿಯತ್ತ ಒಂದಲ್ಲ ಮೂರು ಆಸ್ಟ್ರಾಯ್ಡ್: ನಾಸಾ ‘Near Earth’ ಎಚ್ಚರಿಕೆ!

By Web Desk  |  First Published Jan 16, 2019, 1:26 PM IST

ನಾಸಾ ಎಚ್ಚರಿಕೆಯ ಕರೆಗಂಟೆ ನಿಮಗೂ ಕೇಳಿಸ್ತಾ?| ಭೂಮಿಯತ್ತ ಮೂರು ಕ್ಷುದ್ರಗ್ರಹಗಳ ಆಗಮನ| ಕ್ಷುದ್ರಗ್ರಹಗಳ ವೇಗ, ಸಾಮೀಪ್ಯದಿಂದಾಗಿ ನಿದ್ದೆ ಕಳೆದುಕೊಂಡ ನಾಸಾ| ಒಂದೊಮ್ಮೆ ಭೂಮಿಗೆ ಅಪ್ಪಳಿಸಿದ್ದರೆ ಗತಿ ಏನು?


ವಾಷಿಂಗ್ಟನ್(ಜ.15): ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ ಭೂಮಿಗೆ ವಿನಾಶಕಾರಿ ಕ್ಷುದ್ರಗ್ರಹವೊಂದು ಅಪ್ಪಳಿಸಿದ ಪರಿಣಾಮ, ಡೈನಾಸೋರ್ ಸೇರಿದಂತೆ ಹಲವು ಸಂತತಿಗಳು ಅಳಿದಿದ್ದು ನಮಗೆಲ್ಲಾ ಗೊತ್ತೇ ಇದೆ.

ಇದೀಗ ವಿಜ್ಞಾನ ಅದೆಷ್ಟು ಮುಂದುವರೆದಿದೆ ಎಂದರೆ ಭೂಮಿಯ ಸಮೀಪ ಹಾದು ಹೋಗು ಕ್ಷುದ್ರಗ್ರಹಗಳ ಕುರಿತು ಮೊದಲೇ ಮಾಹಿತಿ ಸಂಗ್ರಹಿಸಬಹುದಾಗಿದೆ. ಅದರಂತೆ ನಾಸಾ ನಿರಂತರವಾಗಿ ಭೂಮಿಯ ಸಮೀಪಕ್ಕೆ ಬರುವ ಕ್ಷುದ್ರಗ್ರಹಗಳ ಮೇಲೆ ನಿಗಾ ವಹಿಸಿರುತ್ತದೆ.

Latest Videos

undefined

ಇದೀಗ ನಾಸಾ ಹೊರಗೆಡವಿರುವ ಮಾಹಿತಿಯೊಂದು ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸಿದ್ದು, ಭೂಮಿಯತ್ತ ಒಂದಲ್ಲ ಬದಲಿಗೆ ಮೂರು ಕ್ಷುದ್ರಗ್ರಹಗಳು ಧಾವಿಸುತ್ತಿವೆ ಎಂದು ನಾಸಾ ಹೇಳಿದೆ. ಅಲ್ಲದೇ ಎಚ್ಚರಿಕೆಯ ಕರೆಗಂಟೆಯನ್ನೂ ಮೊಳಗಿಸಿದೆ.

ಆ ಮೂರು ಕ್ಷುದ್ರಗ್ರಹಗಳು ಯಾವವು?:

1. 2019 AT6: ಸುಮಾರು 17 ಮೀ. ಗಾತ್ರದ ಈ ಕ್ಷುದ್ರಗ್ರಹ ಗಂಟೆಗೆ 7320 ಕಿ.ಮೀ. ವೇಗದಲ್ಲಿ ಭೂಮಿಯಿಂದ ಕೇವಲ 3.2 ಮಿಲಿಯನ್ ಕಿ.ಮೀ ದೂರದಲ್ಲಿ ಹಾದು ಹೋಗಿದೆ. ಇಷ್ಟು ಹತ್ತಿರದಲ್ಲಿ ಯಾವುದೇ ಖಗೋಳೀಯ ವಸ್ತು ಭೂಮಿಯಿಂದ ಹಾದು ಹೋದರೆ ಅದನ್ನು ನಾಸಾ ಗಂಭೀರವಾಗಿ ಪರಿಗಣಿಸುತ್ತದೆ.

2. 2019 AM8: ಬ್ಲೂ ವೇಲ್ ಗಾತ್ರದ ಈ ಕ್ಷುದ್ರಗ್ರಹ ಗಂಟೆಗೆ 40,555 ಕಿ.ಮೀ. ವೇಗದಲ್ಲಿ ಭೂಮಿಯಿಂದ ಕೇವಲ 3.2 ಮಿಲಿಯನ್ ಕಿ.ಮೀ ದೂರದಲ್ಲಿ ಹಾದು ಹೋಗಿದೆ. ಇದರ ವೇಗ ಕಂಡು ನಾಸಾ ನಿಜಕ್ಕೂ ಬೆಚ್ಚಿ ಬಿದ್ದಿತ್ತು.

3. 2019 AG7: ಸುಮಾರು 51 ಮೀ. ಗಾತ್ರದ ಈ ಕ್ಷುದ್ರಗ್ರಹ ಗಂಟೆಗೆ 24,333 ವೇಗದಲ್ಲಿ ಭೂಮಿಯಿಂದ ಕೇವಲ 1.53 ಮಿಲಿಯನ್ ಕಿ.ಮೀ. ದೂರದಲ್ಲಿ ಹಾದು ಹೋಗಿದೆ. ಭೂಮಿಗೆ ಇತ್ತೀಚಿನ ದಿನಗಳಲ್ಲಿ ಇಷ್ಟು ಹತ್ತಿರ ಬಂದ ಮೊದಲ ಕ್ಷುದ್ರಗ್ರಹ ಇದಾಗಿದ್ದು, ಇದರ ಸಾಮೀಪ್ಯದಿಂದಾಗಿ ನಾಸಾ ನಿದ್ದೆ ಕಳೆದುಕೊಂಡಿದ್ದು ಸುಳ್ಳಲ್ಲ.

click me!