ಚಂದ್ರನ ಹಿಂಬದಿಯಲ್ಲಿ ಹಗಲು 127 ಡಿ.ಸೆ, ರಾತ್ರಿ -183 ಉಷ್ಣಾಂಶ

By Web DeskFirst Published Jan 14, 2019, 11:29 AM IST
Highlights

 ‘ಚಂದ್ರ’ನ ಮೇಲಿನ ಕೌತುಕಗಳನ್ನು ತೆರೆದಿಡುತ್ತಲೇ ಬರುತ್ತಿರುವ ವಿಶ್ವದ ನಾನಾ ದೇಶಗಳ ಬಾಹ್ಯಾಕಾಶ ವಿಜ್ಞಾನಿಗಳ ಗಮನವನ್ನೂ ಸೆಳೆಯುವಂತಹ ಕೌತುಕವೊಂದನ್ನು ಚೀನಾ ವಿಜ್ಞಾನಿಗಳು ತೆರೆದಿಟ್ಟಿದ್ದಾರೆ. 

ಬೀಜಿಂಗ್ (ಜ. 14): ‘ಚಂದ್ರ’ನ ಮೇಲಿನ ಕೌತುಕಗಳನ್ನು ತೆರೆದಿಡುತ್ತಲೇ ಬರುತ್ತಿರುವ ವಿಶ್ವದ ನಾನಾ ದೇಶಗಳ ಬಾಹ್ಯಾಕಾಶ ವಿಜ್ಞಾನಿಗಳ ಗಮನವನ್ನೂ ಸೆಳೆಯುವಂತಹ ಕೌತುಕವೊಂದನ್ನು ಚೀನಾ ವಿಜ್ಞಾನಿಗಳು ತೆರೆದಿಟ್ಟಿದ್ದಾರೆ.

ಚಂದ್ರನ ಹಿಂಬದಿಯಲ್ಲಿ ಇಳಿಸಿದ ಚೇಂಜ್-4 ಹೆಸರಿನ ಚಂದ್ರಶೋಧಕ ಯಂತ್ರ ಇದನ್ನು ಬಹಿರಂಗಪಡಿಸಿ ದ್ದಾಗಿ ಚೀನಾ ಹೇಳಿಕೊಂಡಿದೆ. ಭಾನುವಾರ ಈ ಬಗ್ಗೆ ಮಾಹಿತಿ ನೀಡಿರುವ ವಿಜ್ಞಾನಿಗಳು, ‘ಚಂದ್ರ  ಮೇಲಿನ ರಾತ್ರಿಯ ಉಷ್ಣತೆಯ ಬಗ್ಗೆ ಚೇಂಜ್-4 ಮಾಹಿತಿ ನೀಡಿದೆ. ದಿನದ ಒಂದಿಷ್ಟು ಹೊತ್ತು ಅಚ್ಚರಿ ಹುಟ್ಟಿಸು ವಂತಹ, ಅಂದರೆ 127 ಡಿಗ್ರಿ ಸೆಲ್ಸಿಯಸ್‌ನಷ್ಟು ಅತಿ ಯಾದ ಉಷ್ಣತೆ ಇರುವುದನ್ನು ದಾಖಲಿಸಿದೆ.

ರಾತ್ರಿ ವೇಳೆಯಲ್ಲಿ ಅದು -183 ಸೆಲ್ಸಿಯಸ್ ಗೆ ಕುಸಿದಿರು ವುದನ್ನೂ ಚೇಂಜ್-೪ ದಾಖಲಿಸಿದೆ’ ಎಂದಿದ್ದಾರೆ. ಕಳೆದ ಜನವರಿ 3 ರಂದು ಚಂದ್ರನ ಅಧ್ಯಯನಕ್ಕಾಗಿ ಚೀನಾ ಚೇಂಜ್-4 ಶೋಧಕವನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿ, ವಿಶ್ವದ ಯಾವ ದೇಶವೂ ಮಾಡದ ಸಾಧನೆ ಮಾಡಿ ಬೆನ್ನು ತಟ್ಟಿಕೊಂಡಿತ್ತು. ವಿಜ್ಞಾನಿಗಳ ಈ ಸಾಧನೆ ಚೀನಾ ಬಾಹ್ಯಾಕ್ಷೇತ್ರದ ಬಲವನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಚಂದ್ರನ ಮೇಲಿನ ಒಂದು ಹಗಲು ಮತ್ತು ರಾತ್ರಿಯ ಅವಧಿ ಭೂಮಿಗೆ ಹೋಲಿಸಿದರೆ ೧೪ದಿನಗಳಷ್ಟು ಜಾಸ್ತಿಯಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವೂ ಗಣನೀಯವಾಗಿ ಏರಿಳಿತ ಕಾಣಲಿದೆ ಎನ್ನುವುದು ವಿಜ್ಞಾನಿಗಳ ಈ ಅನ್ವೇಷಣೆಯಿಂದ ಸಾಬೀತಾಗಿದೆ.

click me!