ತಲುಪಲಾಗದಷ್ಟು ದೂರದಲ್ಲಿದೆ ಈ ಗ್ಯಾಲಕ್ಸಿ: ವಿಶ್ವ ರಚನೆಯ ಆರಂಭದ ನಕ್ಷತ್ರಪುಂಜ!

By nikhil vk  |  First Published Jan 5, 2020, 3:59 PM IST

ವಿಶ್ವ ರಚನೆಯ ಆರಂಭದ ಗ್ಯಾಲಕ್ಸಿ ಪತ್ತೆ ಹಚ್ಚಿದ ಹಬಲ್| ಭೂಮಿಯಿಂದ ಬರೋಬ್ಬರಿ 13.3 ಬಿಲಿಯನ್ ದೂರದಲ್ಲಿರುವ ಗ್ಯಾಲಕ್ಸಿ| ಗಾತ್ರದಲ್ಲಿ ನಮ್ಮ ಮಿಲ್ಕಿ ವೇ ಗ್ಯಾಲಕ್ಸಿಯನ್ನೇ ಹೋಲುವ MACS0647-JD|ನವೆಂಬರ್ 29, 2011ರಲ್ಲಿ MACS0647-JD ಗ್ಯಾಲಕ್ಸಿ ಪತ್ತೆ ಹಚ್ಚಿದ್ದ ಹಬಲ್ ಟೆಲಿಸ್ಕೋಪ್| ಗ್ಯಾಲಕ್ಸಿಯ ಬೆಳಕು ಭೂಮಿ ತಲುಪಲು 13.3 ಬಿಲಿಯನ್ ಜ್ಯೋತಿರ್ವರ್ಷ ಸಮಯ| ವಿಶ್ವ ರಚನೆಯ ಇತಿಹಾಸದೊಂದಿಗೆ ಬೆಸೆದುಕೊಂಡಿರುವ MACS0647-JD ಗ್ಯಾಲಕ್ಸಿ|


ವಾಷಿಂಗ್ಟನ್(ಜ.05): ವಿಶ್ವ ಅದೆಷ್ಟು ವಿಸ್ತಾರವಾಗಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇದುವರೆಗೂ ಸ್ಪಷ್ಟ ಉತ್ತರ ದೊರೆತಿಲ್ಲ. ವಿಶ್ವ ಅನಂತವೋ ಅಥವಾ ಇದಕ್ಕೊಂದು ಮಿತಿ ಇದೆಯೋ ಎಂಬುದು ಯಕ್ಷ ಪ್ರಶ್ನೆ.

ಇದೇ ಕಾರಣಕ್ಕೆ ಖಗೋಳಶಾಸ್ತ್ರಜ್ಞರು ವಿಶ್ವವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು, ಇದನ್ನು Observable Universe(ಗಮನಿಸಬಹುದಾದ ವಿಶ್ವ) ಹಾಗೂ Multiverse(ಬಹುವಿಶ್ವ) ಎಂದು ಗುರುತಿಸಿದ್ದಾರೆ.

Tap to resize

Latest Videos

undefined

ಆದರೆ ಬಹುವಿಶ್ವದ ಅಸ್ತಿತ್ವ ಇನ್ನೂ ಖಚಿತವಾಗಿಲ್ಲವಾದರೂ, ಗಮನಿಸಬಹುದಾದ ವಿಶ್ವವನ್ನು ಖಗೋಳಶಾಸ್ತ್ರಜ್ಞರು ಕರಾರುವಕ್ಕಾಗಿ ಅಳೆತೆ ಮಾಡಿದ್ದಾರೆ. 

ತೀವ್ರ ಚಟುವಟಿಕೆಯ ಕೇಂದ್ರ: ಹಬಲ್ ಗುರುತಿಸಿದ ವಿಶಿಷ್ಟ ಸ್ಪೈರಲ್ ಗ್ಯಾಲಕ್ಸಿ !

ಅದರಂತೆ ಗಮನಿಸಬುದಾದ ವಿಶ್ವದ ವ್ಯಾಸ ಬರೋಬ್ಬರಿ 46,508 ಬಿಲಿಯನ್ ಜ್ಯೋತಿರ್ವರ್ಷಗಳಷ್ಟಿದ್ದು, ಇದರ ಆಯಸ್ಸು ಸುಮಾರು 3.799±0.021 ಬಿಲಿಯನ್ ವರ್ಷಗಳು ಎಂದು ಅಂದಾಜಿಸಲಾಗಿದೆ.

ಈ ಗಮನಿಸಬಹುದಾದ ವಿಶ್ವದಲ್ಲಿ ಎರಡು ಟ್ರಿಲಿಯನ್ ಗ್ಯಾಲಕ್ಸಿಗಳಿದ್ದು, ಇದರಲ್ಲಿ ನಮ್ಮ ಹಾಲುಹಾದಿ ಅಥವಾ ಕ್ಷಿರಪಥ(Milkey Way)ಕೂಡ ಒಂದು.

ನಾಸಾದ ಹಬಲ್ ಟೆಲಿಸ್ಕೋಪ್‌ ಸದ್ಯ ವಿಶ್ವದ ಅತ್ಯಂತ ದೂರದ ಗ್ಯಾಲಕ್ಸಿಯನ್ನು ಪತ್ತೆ ಹಚ್ಚಿದ್ದು, MACS0647-JD ಎಂದು ಕರೆಯಲ್ಪಡುವ ಈ ಗ್ಯಾಲಕ್ಸಿ ಭೂಮಿಯಿಂದ ಬರೋಬ್ಬರಿ 13.3 ಬಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದೆ.

ಅಂದರೆ ಈ ಗ್ಯಾಲಕ್ಸಿ ವಿಶ್ವ ರಚನೆಯ ಆರಂಭದ ದಿನಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಗಾತ್ರದಲ್ಲಿ ನಮ್ಮ ಮಿಲ್ಕಿ ವೇ ಗ್ಯಾಲಕ್ಸಿಯನ್ನೇ ಹೋಲುತ್ತದೆ ಎಂದು ನಾಸಾ ತಿಳಿಸಿದೆ.

ನವೆಂಬರ್ 29, 2011ರಲ್ಲಿ ಹಬಲ್ ಟೆಲಿಸ್ಕೋಪ್ ಈ ಗ್ಯಾಲಕ್ಸಿಯನ್ನು ಪತ್ತೆ ಹಚ್ಚಿತ್ತು. ಇದು ಬಿಗ್ ಬ್ಯಾಂಗ್ ಸಂಭವಿಸಿದ ಬಳಿಕ ಕೇವಲ 420 ಮಿಲಿಯನ್ ವರ್ಷಗಳ ಬಳಿಕ ರಚನೆಯಾಗಿದೆ ಎಂದು ಹೇಳಲಾಗಿದೆ.

ಹಬಲ್ ಗುರುತಿಸಿದ ಈ ಗ್ಯಾಲಕ್ಸಿ ಸೂಪರ್ ನೋವಾಗಳ ಮದರ್‌ಲ್ಯಾಂಡ್!

MACS0647-JD ಗ್ಯಾಲಕ್ಸಿಯ ಬೆಳಕು ಭೂಮಿ ತಲುಪಲು 13.3 ಬಿಲಿಯನ್ ಜ್ಯೋತಿರ್ವರ್ಷ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ವಿಶ್ವದ ಬೆಳಕು ಭೂಮಿಯನ್ನು ತಲುಪಲು ತೆಗೆದುಕೊಂಡಿರುವ ಸಮಯಕ್ಕೆ ಇದು ಸಮವಾಗಿದೆ.

ಅಂದರೆ ವಿಶ್ವ ರಚನೆಯ ಇತಿಹಾಸದೊಂದಿಗೆ ಬೆಸೆದುಕೊಂಡಿರುವ MACS0647-JD ಗ್ಯಾಲಕ್ಸಿ, ಅತ್ಯಂತ ದೂರದ ಗ್ಯಾಲಕ್ಸಿ ಮಾತ್ರವಲ್ಲದೇ ಅತ್ಯಂತ ಹಳೆಯ ಗ್ಯಾಲಕ್ಸಿಗಳಲ್ಲೊಂದಾಗಿದೆ.

MACS0647-JD ಗ್ಯಾಲಕ್ಸಿ 600 ಜ್ಯೋತಿರ್ವರ್ಷ ವ್ಯಾಸವನ್ನು ಹೊಂದಿದ್ದು,  ಈ ಗ್ಯಾಲಕ್ಸಿಯ ಸುತ್ತ ಇತರ 25 ಕ್ರಿಯಾಶೀಳ ಗ್ಯಾಲಕ್ಸಿಗಳ ಇರುವಿಕೆಯನ್ನು ಹಬಲ್ ಪತ್ತೆ ಹಚ್ಚಿದೆ ಎಂದು ನಾಸಾ ತಿಳಿಸಿದೆ.

click me!