ಉ.ಪ್ರದೇಶದಲ್ಲಿ ತಲೆ ಎತ್ತಲಿದೆ 4 ಸಾವಿರ ಉದ್ಯೋಗ ಸಾಮರ್ಥ್ಯದ ಮೈಕ್ರೋಸಾಫ್ಟ್ ಕ್ಯಾಂಪಸ್

By Suvarna News  |  First Published Jun 30, 2020, 3:06 PM IST

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಎಲ್ಲಾ ರಾಜ್ಯಗಳಲ್ಲೂ ಉದ್ಯೋಗ ಸಮಸ್ಯೆ ತಲೆದೋರಿದೆ. ಹಲವು ಕಂಪನಿಗಳು ಚೀನಾದಿಂದ ಭಾರತಕ್ಕೆ ಆಗಮಿಸಲು ಉತ್ಸುಕತೆ ತೋರಿದೆ. ಇದರ ಬೆನ್ನಲ್ಲೇ ಭಾರತ ರತ್ನಂಗಬಳಿ ಮೂಲಕ ಕಂಪನಿಗಳ ಸ್ವಾಗತಕ್ಕೆ ಮುಂದಾಗಿದೆ. ಇದೀಗ ಮೈಕ್ರೋಸಾಫ್ಟ್ ಕಂಪನಿ ಉತ್ತರ ಪ್ರದೇಶದಲ್ಲಿ 4,000 ಉದ್ಯೋಗ ಸಾಮರ್ಥ್ಯದ ಕ್ಯಾಂಪಸ್ ನಿರ್ಮಿಸುತ್ತಿದೆ.


ಗ್ರೇಟರ್ ನೋಯ್ಡಾ(ಜೂ.30): ಕೊರೋನಾ ವೈರಸ್ ಹೊಡೆತದಿಂದ ಭಾರತದ ಬಹುತೇಕ ಎಲ್ಲಾ ರಾಜ್ಯಗಳ ಪರಿಸ್ಥಿತಿ ಒಂದೇ ಆಗಿದೆ. ಉದ್ಯೋಗ ಸಮಸ್ಯೆ ತೀವ್ರಗೊಳ್ಳುತ್ತಿದೆ. ಮತ್ತೊಂದೆಡೆ ಆರ್ಥಿಕ ಕುಸಿತದಿಂದ ಅಭಿವೃದ್ದಿ ಕುಂಟಿತವಾಗಿದೆ. ಹೀಗಾಗಿ ಆಯಾ ರಾಜ್ಯಗಳು ನಿಯಮ ಸಡಿಲಗೊಳಿಸಿ ಕಂಪನಿಗಳ ಕಾರ್ಯಾರಂಭಕ್ಕೆ ಅನುವು ಮಾಡಿಕೊಡುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ಮೈಕ್ರೋಸಾಫ್ಟ್ ಕಂಪನಿ 4,000 ಉದ್ಯೋಗ ಸಾಮರ್ಥ್ಯದ ಕ್ಯಾಂಪಸ್ ನಿರ್ಮಿಸುತ್ತಿದೆ.

ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!.

Latest Videos

undefined

ಗ್ರೇಟರ್ ನೋಯ್ಡಾದಲ್ಲಿ ಮೈಕ್ರೋಸಾಫ್ಟ್ ಕಂಪನಿ ತಲೆ ಎತ್ತುತ್ತಿರುವ ಕುರಿತು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ. ಉತ್ತರ ಪ್ರದೇಶದ ಸಚಿವ ಸಿದ್ಧಾರ್ಥ್ ನಾಥ್ ಜೊತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿರುವ ಮೈಕ್ರೋಸಾಫ್ಟ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕುಮಾರ್, ಇದೀಗ ಸ್ಥಳ ಪರಿಶೀಲನೆ ನಡೆಸುತ್ತಿದೆ.

ಚೀನಾದ ಶೇರ್ ಇಟ್‌ಗೆ ಪ್ರತಿಯಾಗಿ Z ಶೇರ್ ಆ್ಯಪ್ ಬಿಡುಗಡೆ ಮಾಡಿದ ಉ.ಕನ್ನಡದ ಯುವಕ!.

ಉತ್ತರ ಭಾರತದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಮೈಕ್ರೋಸಾಫ್ಟ್ ಕ್ಯಾಂಪಸ್‌ನ್ನು ಇದೀಗ ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ. ಇದಕ್ಕಾಗಿ ಗ್ರೇಟರ್ ನೋಯ್ಡಾ ಹಾಗೂ ಯಮುನಾ ಎಕ್ಸ್‌ಪ್ರೆಸ್ ಹೈವೇ ಸಮೀಪದಲ್ಲಿನ ಸ್ಥಳ ಪರಿಶೀಲನೆ ನಡೆಸಿ ಶೀಘ್ರದಲ್ಲೆ ಕಂಪನಿ ಕಾರ್ಯ ಆರಂಭಗೊಳ್ಳಲಿದೆ. ಕ್ಯಾಂಪಸ್ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಉತ್ತರ ಪ್ರದೇಶ ಸರ್ಕಾರ ನೀಡುವ ಭರವಸೆ ನೀಡಿದೆ ಎಂದು ಮೈಕ್ರೋಸಾಫ್ಟ್ ಇಂಡಿಯಾ ಎಂಡಿ ರಾಜೀವ್ ಕುಮಾರ್ ಹೇಳಿದ್ದಾರೆ.

ಭಾರತದಲ್ಲಿ ಮೈಕ್ರೋಸಾಫ್ಟ್ 2 ಕ್ಯಾಂಪಸ್ ಹೊಂದಿದೆ. ಒಂದು ಬೆಂಗಳೂರು ಹಾಗೂ ಮತ್ತೊಂದು ಹೈದರಾಬಾದ್. ಒಟ್ಟು 7,000 ಉದ್ಯೋಗಿಗಳನ್ನು ಹೊಂದಿದೆ. ಇದೀಗ ಉತ್ತರ ಪ್ರದೇಶದಲ್ಲಿ 4,000 ಸಾಮರ್ಥ್ಯ ಕ್ಯಾಂಪಸ್ ನಿರ್ಮಾಣವಾಗಲಿದೆ ಎಂದು ಕಂಪನಿ ಹೇಳಿದೆ.

click me!