Cyber Security Skilling Programme: ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಮೈಕ್ರೋಸಾಫ್ಟ್ ತರಬೇತಿ !

By Suvarna News  |  First Published Dec 8, 2021, 5:25 PM IST

*ಮೈಕ್ರೋಸಾಫ್ಟ್ ಸೈಬರ್ ಸೆಕ್ಯುರಿಟಿ ಸ್ಕಿಲಿಂಗ್ ಪ್ರೋಗ್ರಾಂ
*1 ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ: Microsoft
*ಕೌಶಲ್ಯ ಕೊರತೆಯನ್ನು ಪರಿಹರಿಸುವ ಪ್ರಯತ್ನ!


ನವದೆಹಲಿ(ಡಿ. 08):  ಟೆಕ್‌ ದೈತ್ಯ ಮೈಕ್ರೋಸಾಫ್ಟ್ (Microsoft) ಭಾರತದಲ್ಲಿ ಸೈಬರ್ ಸೆಕ್ಯುರಿಟಿ (Cyber Security) ತರಬೇತಿಗಾಗಿ ಹೊಸ ಯೋಜನೆಯೊಂನದನ್ನು ಆರಂಭಿಸಿದೆ. ಭಾರತದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲು ಮಂಗಳವಾರ ಸೈಬರ್ ಸೆಕ್ಯುರಿಟಿ ಸ್ಕಿಲಿಂಗ್ ಪ್ರೋಗ್ರಾಂ (Cyber Security Skilling Programme) ಅನ್ನು ಪ್ರಾರಂಭಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಕೌಶಲ್ಯ ಕೊರತೆಯನ್ನು  ಪರಿಹರಿಸುವ ಪ್ರಯತ್ನಗಳ ಭಾಗವಾಗಿ 2022 ರ ವೇಳೆಗೆ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ನೀಡುವ ಗುರಿಯನ್ನು ಹೊಂದಿದೆ. ಜತೆಗೆ ಡಿಜಿಟಲ್ ಭದ್ರತೆಯಲ್ಲಿ (digital security) ವೃತ್ತಿ ಪ್ರಾರಂಭಿಸಲು ಅಥವಾ ಉನ್ನತ ಹುದ್ದೆಗೇರಲು ಭಾರತದ ಉದ್ಯೋಗಿಗಳನ್ನು ತಯಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.

ಫಂಡಾಮೇಂಟಲ್ಸ್‌ ಆಫ್‌ ಸೆಕ್ಯೂರಿಟಿ (Fundamentals of Security), ಕಂಪ್ಲೈನ್ಸ (compliance) ಹಾಗೂ ಐಡೆಂಟಿಟಿ ವಿಭಾಗದಲ್ಲಿ ( Identity certifications) ಕಲಿಯುವವರಿಗೆ ಕೌಶಲ್ಯ ತರಬೇತಿ ನೀಡಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮೈಕ್ರೋಸಾಫ್ಟ್ ಈ ಕೋರ್ಸ್‌ಗಳನ್ನು ಕ್ಲೌಡ್‌ಥಾಟ್ (Cloudthat), ಕೊಯೆನಿಗ್ ( Koenig),ಆರ್‌ಪಿಎಸ್ (RPS) ಮತ್ತು ಸಿನರ್ಜೆಟಿಕ್ಸ್ ಲರ್ನಿಂಗ್ (Synergetics Learning) ಸೇರಿದಂತೆ ಇತರ ಪಾಲುದಾರರ ಜತೆಗ ಒಪ್ಪಂದದ ಮೂಲಕ ನಡೆಸುತ್ತಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

Latest Videos

undefined

ಸೈಬರ್‌ ಸೆಕ್ಯೂರಿಟಿ ನಾಯಕರನ್ನು ಸಿದ್ಧಪಡಿಸುವ  ಪ್ರಯತ್ನ!

ಯಾವುದೇ ಹಂತದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ  ಕೋರ್ಸ್ ಮಾಡ್ಯೂಲ್‌ಗಳನ್ನು (Course Module) ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸೈಬರ್‌ಸೆಕ್ಯುರಿಟಿ  ಕಲಿಕೆಯಲ್ಲಿ ಎಷ್ಟು ಪರಿಣಿತಿ ಹೊಂದಿದ್ದಾರೆ ಎಂಬುದರ ಹೊರತಾಗಿಯೂ  ಯಾರು ಬೇಕಾದರು ಈ ಕೊರ್ಸ್‌ ಮಾಡಬಹುದು.

NASA’s 10 New Astronauts: ನಾಸಾ ಆಯ್ಕೆ ಮಾಡಿದ 10 ಗಗನಯಾತ್ರಿಗಳ ಪೈಕಿ ಭಾರತೀಯ ಮೂಲದ ಅನಿಲ್ ಮೆನನ್!

"ನಂಬಿಕೆ ಮತ್ತು ಭದ್ರತೆಯು ನಮ್ಮ ಕಂಪನಿಯ ಮುಖ್ಯ ಧ್ಯೇಯವಾಗಿದೆ. ಪ್ರಪಂಚದಾದ್ಯಂತ ಸರ್ಕಾರಗಳು, ನಾಗರಿಕ ಸಮಾಜ ಮತ್ತು ಸಂಸ್ಥೆಗಳಿಗೆ ಸುರಕ್ಷಿತೆ ಒದಗೊಳಿಸಲು ನಿಕಟವಾಗಿ ಕೆಲಸ ಮಾಡುತ್ತೇವೆ. ಸೈಬರ್‌ ಸೆಕ್ಯುರಿಟಿ ಕೌಶಲ್ಯದಲ್ಲಿ ಹೂಡಿಕೆ ಮಾಡುವುದು ಮತ್ತು ಮುಂದಿನ ಪೀಳಿಗೆಯ  ಸೈಬರ್‌ ಸೆಕ್ಯೂರಿಟಿ ನಾಯಕರನ್ನು ಸಿದ್ಧಪಡಿಸುವುದು ಆ ಪ್ರಯತ್ನದ ದೊಡ್ಡ ಭಾಗವಾಗಿದೆ.  ಈ ಕಾರ್ಯಕ್ರಮವು ಸೈಬರ್ ಸೆಕ್ಯೂರಿಟಿ ಕೌಶಲ್ಯವನ್ನು ಎಲ್ಲರಿಗೂ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವಲ್ಲಿ ಪ್ರಮುಖ ಹೆಜ್ಜೆಯಾಗಿದೆ" ಎಂದು ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ್ ಮಹೇಶ್ವರಿ (Anant Maheshwari) ಹೇಳಿದ್ದಾರೆ.

Global Arms Sales: ಜಗತ್ತಿನ ಟಾಪ್ 100ರಲ್ಲಿ ಮೂರು ಭಾರತೀಯ ಕಂಪನಿಗಳು!‌

ಸೆಕ್ಯೂರಿಟಿ (new security), ಕಂಪ್ಲೈನ್ಸ ( compliance) ಮತ್ತು ಐಡೆಂಟಿಟಿ ಸರ್ಟಿಫಿಕೇಶನ್ ( identity certifications) ವಿಷಯದಲ್ಲಿ ಮೈಕ್ರೋಸಾಫ್ಟ್ ನಾಲ್ಕು ಹೊಸ ಕೋರ್ಸ್ ಪರಿಚಯಿಸಿದೆ, ಈ ಕಾರ್ಯಕ್ರಮ ಮೂಲಕ ಸಂಬಂಧಿತ ತರಬೇತಿಗೆ ಹಾಜರಾಗುವ ಯಾವುದೇ ವ್ಯಕ್ತಿಗೆ ಮೂಲಭೂತ ಅಂಶಗಳಿಗೆ ಮಾನ್ಯತೆ ಪಡೆದ ಪ್ರಮಾಣೀಕರಣವನ್ನು (accredited certification) ಶೂನ್ಯ ವೆಚ್ಚದಲ್ಲಿ ನೀಡಲಾಗುವುದು. ಹೆಚ್ಚುವರಿಯಾಗಿ ಮೈಕ್ರೋಸಾಫ್ಟ್ ಅದರ ಪಾಲುದಾರರ ಸಹಯೋಗದೊಂದಿಗೆ, ಸೈಬರ್ ಸುರಕ್ಷತೆ ಸವಾಲುಗಳನ್ನು ಸೇರಿದಂತೆ ಇತರ ವಿಷಯಗಳಲ್ಲಿ ಕೋರ್ಸ್ ಆರಂಭಿಸಿದೆ ಎಂದು ಹೇಳಿಕೆ ತಿಳಿಸಿದೆ.

25 ಮಿಲಿಯನ್ ಜನರಿಗೆ ಹೊಸ ಡಿಜಿಟಲ್ ಕೌಶಲ್ಯ!

ಮೈಕ್ರೋಸಾಫ್ಟ್ ಈ ಪಾಲುದಾರಿಕೆಯು ವಿಶ್ವಾದ್ಯಂತ 25 ಮಿಲಿಯನ್ ಜನರಿಗೆ ಹೊಸ ಡಿಜಿಟಲ್ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡಲಿದೆ. ಈ ಯೋಜನೆ ಮೂಲಕ ಭಾರತದಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಜನರು ಕೌಶಲ್ಯ ತರಬೇತಿ ಪಡೆಯಲಿದ್ದಾರೆ. ಮೈಕ್ರೋಸಾಫ್ಟ್, ಸರ್ಕಾರ- ಉದ್ಯಮಗಳು ಮತ್ತು ಹಲವು ಸಂಘ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಡಿಜಿಟಲ್ ಕೌಶಲ್ಯ ತರಬೇತಿ ನೀಡಲು ಹಲವಾರು ಕ್ರಮ ಕೈಗೊಂಡಿದೆ.

click me!