ಮೈಕ್ರೋಸಾಫ್ಟ್‌ನ ವಿಂಡೋಸ್‌ 11 ಆವೃತ್ತಿ ಬಿಡುಗಡೆ!

By Kannadaprabha News  |  First Published Jun 25, 2021, 9:23 AM IST

* ವಿಶ್ವದ ಅತ್ಯಂತ ಜನಪ್ರಿಯ ಕಂಪ್ಯೂಟರ್‌ ಸಾಫ್ಟ್‌ವೇರ್‌ ಆದ ಮೈಕ್ರೋಸಾಫ್ಟ್‌ ವಿಂಡೋಸ್‌ 

* ಮೈಕ್ರೋಸಾಫ್ಟ್‌ನ ವಿಂಡೋಸ್‌ 11 ಆವೃತ್ತಿ ಬಿಡುಗಡೆ

* 6 ವರ್ಷದ ಬಳಿಕ ಹೊಸ ಆವೃತ್ತಿ ಹಲವು ಹೊಸ ಬದಲಾವಣೆ


ರೆಡ್‌ಮಂಡ್‌(ಜೂ.25): ವಿಶ್ವದ ಅತ್ಯಂತ ಜನಪ್ರಿಯ ಕಂಪ್ಯೂಟರ್‌ ಸಾಫ್ಟ್‌ವೇರ್‌ ಆದ ಮೈಕ್ರೋಸಾಫ್ಟ್‌ ವಿಂಡೋಸ್‌ ತನ್ನ ಹೊಸ ಆವೃತ್ತಿ ‘ವಿಂಡೋಸ್‌ 11’ ಅನ್ನು ಗುರುವಾರ ಅನಾವರಣಗೊಳಿಸಿದೆ. 2015ರಲ್ಲಿ ವಿಂಡೋಸ್‌ 10 ಬಿಡುಗಡೆ ಬಳಿಕ ಮೊದಲ ಬದಲಾವಣೆ ಇದಾಗಿದೆ. ಈಗಾಗಲೇ ವಿಂಡೋಸ್‌ 10 ಬಳಸುತ್ತಿರುವವರಿಗೆ ಇದು ಅಪ್‌ಡೇಟ್‌ ರೀತಿಯಲ್ಲಿ ಉಚಿತವಾಗಿ ಮತ್ತು ಹೊಸ ಕಂಪ್ಯೂಟರ್‌ ಹಾಗೂ ಇತರೆ ಉಪಕರಣಗಳಲ್ಲಿ ಮುಂದಿನ ಕೆಲ ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಇದುವರೆಗಿನ ಎಲ್ಲಾ ಆವೃತ್ತಿಗಳಲ್ಲಿ ಸ್ಟಾರ್ಟ್‌ ಮೆನು ಪರದೆಯಲ್ಲಿ ಎಡಭಾಗದಲ್ಲಿರುತ್ತಿತ್ತು. ಆದರೆ ‘ವಿಂಡೋಸ್‌ 11’ರಲ್ಲಿ ಅದನ್ನು ಕಂಪ್ಯೂಟರ್‌ನ ಮಧ್ಯಭಾಗದಲ್ಲಿ ತರಲಾಗಿದೆ. ಹೊಸ ಆವೃತ್ತಿಯು ವಿಡ್ಜೆಟ್‌ ನೆರವಿನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಆ್ಯಪಲ್‌ನ ಮ್ಯಾಕ್‌ಬುಕ್‌ ರೀತಿಯಲ್ಲಿ, ವಿಂಡೋಸ್‌ 11ರಲ್ಲೂ ಡಾಕ್‌ ಬಾರ್‌ ಅನ್ನು ಪರದೆಯ ಕೆಳಭಾಗದಲ್ಲಿ ಅಳವಡಿಸಲಾಗಿದೆ. ಇನ್ನು ಆಪರೇಟಿಂಗ್‌ ಸಿಸ್ಟಮ್‌ ಕೂಡಾ ಹೆಚ್ಚು ಬಳಕೆದಾರ ಸ್ನೇಹಿ ಮತ್ತು ಪ್ರತಿಕ್ರಿಯಾತ್ಮಕವಾಗಿದೆ ಎಂದು ತಂತ್ರಜ್ಞರು ಹೊಸ ಸಾಫ್ಟ್‌ವೇರ್‌ ಅನ್ನು ವಿಶ್ಲೇಷಿಸಿದ್ದಾರೆ.

Latest Videos

undefined

ಇನ್ನೊಂದು ವಿಶೇಷವೆಂದರೆ ಬಳಕೆದಾರರು ಅಕ್ಕಪಕ್ಕವೇ ಎರಡು ಪ್ರತ್ಯೇಕ ಆಪ್‌ಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು ಮನರಂಜನಾ ವಿಭಾಗದಲ್ಲಿ ಕೂಡಾ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಅಧಿಕೃತ ಮೈಕ್ರೋಸಾಫ್ಟ್‌ ಸ್ಟೋರ್‌ನಲ್ಲಿ ಎಲ್ಲಾ ಚಲನಚಿತ್ರಗಳು ಮತ್ತು ಶೋಗಳ ಪ್ರಮುಖ ಅಂಶಗಳನ್ನು ಕಾಣಬಹುದಾಗಿದೆ.

1985ರಲ್ಲಿ ಮೈಕ್ರೋಸಾಫ್ಟ್‌ ಸಂಸ್ಥೆ ಮೊದಲ ಬಾರಿಗೆ ತನ್ನ ವಿಂಡೋಸ್‌ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಖಾಲಿ ಪರದೆಯ ಮೇಲೆ ಕಮಾಂಡ್‌ಗಳನ್ನು ಟೈಪ್‌ ಮಾಡಿ ಸೂಚನೆ ನೀಡುವ ಬದಲಾಗಿ ಮೌಸ್‌ ಮೂಲಕ ಐಕಾನ್‌ಗಳನ್ನು ಕ್ಲಿಕ್‌ ಮಾಡಿ ಕಾರ್ಯಾಚರಣೆಯ ವಿಧಾನವನ್ನು ಪರಿಚಯಿಸಿತ್ತು. ಇದು ನೋಡನೋಡುತ್ತಲೇ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿತ್ತು.

click me!