ಗಣೇಶ ಹಬ್ಬಕ್ಕೆ ಜಿಯೋ ಕೂಡುಗೆ ; ಗೂಗಲ್-ಜಿಯೋ ಅಭಿವೃದ್ಧಿಪಡಿಸಿದ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ!

By Suvarna News  |  First Published Jun 24, 2021, 4:14 PM IST
  • ಜಿಯೋ ಹಾಗೂ ಗೂಗಲ್ ಅಭಿವೃದ್ಧಿ ಪಡಿಸಿದ ಸ್ಮಾರ್ಟ್‌ಫೋನ್
  • ಕೈಗೆಟುಕುವ ದರ ಹಾಗೂ ಆತ್ಯಾಧುನಿಕ ತಂತ್ರಜ್ಞಾನದ ಫೋನ್
  • ಸೆಪ್ಟೆಂಬರ್ 10ಕ್ಕೆ ಮೇಡ್ ಇನ್ ಇಂಡಿಯಾ ಫೋನ್ ಬಿಡುಗಡ

ನವದೆಹಲಿ(ಜೂ.24): ಈ ಬಾರಿಯ ಗಣೇಶ ಹಬ್ಬಕ್ಕೆ ರಿಲಯನ್ಸ್ ಜಿಯೋ ಭರ್ಜರಿ ಕೊಡುಗೆ ನೀಡುತ್ತಿದೆ. ಹೌದು, ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಸೆಪ್ಟೆಂಬರ್ 10(ಗಣೇಶ ಹಬ್ಬ)ಕ್ಕೆ ಜಿಯೋ ಅಗ್ಗದ ದರ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. 

ಟ್ರಾಯ್ ವರದಿ ಪ್ರಕಟ; 4G ಡೌನ್ಲೋಡ್ ವೇಗದಲ್ಲಿ ಜಿಯೋಗೆ ಮೊದಲ ಸ್ಥಾನ!.

Tap to resize

Latest Videos

ಜಿಯೋ ಹಾಗೂ ಗೂಗಲ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಜಿಯೋಫೋನ್ NEXT ಅನ್ನೋ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ. ನೂತನ ಫೋನ್ ಭಾರತದಲ್ಲಿ ಮಾತ್ರವಲ್ಲ, ಇತರ ರಾಷ್ಟ್ರ ಸೇರಿದಂತೆ ವಿಶ್ವದಲ್ಲಿ ಬಿಡುಗಡೆಯಾಗುತ್ತಿದೆ. ಇದು ಅಡ್ರಾಯ್ಡ್ OSನ ಆಪ್ಟಿಮೈಸ್ ವರ್ಶನ್ ಆಗಿದೆ.

ಜಿಯೋ ಹಾಗೂ ಗೂಗಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯುತ್ತಮ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಘೋಷಿಸಲು ಅತೀವ ಸಂತಸವಾಗುತ್ತಿದೆ. ನಾವು ಅಭಿವೃದ್ಧಿಪಡಿಸಿದ ಜಿಯೋಫೋನ್ NEXT ಫೋನ್, ಹಲವು ವಿಶೇಷತೆ ಹೊಂದಿದೆ. ಗೂಗಲ್ ಮತ್ತು ಜಿಯೋ ಎರಡೂ ಅಪ್ಲಿಕೇಶನ್ ಬೆಂಬಲಿಸುತ್ತದೆ ಎಂದು 44ನೇ ಎಜಿಎಂ ಸಭೆಯಲ್ಲಿ ಅಂಬಾನಿ ಘೋಷಿಸಿದ್ದಾರೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಜಿಯೋ! .

ಅಗ್ಗದ ದರದ ಅಲ್ಟ್ರಾ ಜಿಯೋಫನ್ NEXT ಮೊಬೈಲ್‌ನಲ್ಲಿ  ಕ್ಯಾಮಾರಾ,  ವಾಯ್ಸ್್ ಅಸಿಸ್ಟೆಂಟ್, ಸ್ಕ್ರೀನ್ ಟೆಕ್ಸ್ಟ್, ಭಾಷಾ ಅನುವಾದ, ರಿಯಾಲಿಟಿ ಫಿಲ್ಟರ್ ಸೇರಿದಂತೆ ಹಲವು ವಿಶೇಷತೆಗಳಿವೆ.  

click me!